Kannada Astrology: ಅದೃಷ್ಟ ಕೊಡಲು ಆರಂಭಿಸಿದ ರಾಹು ದೇವ: ಅಶ್ವಿನಿ ನಕ್ಷತ್ರಕ್ಕೆ ಪ್ರವೇಶ. ಮೂರು ರಾಶಿಗಳಿಗೆ ಹಿಂದೆಂದೂ ಕಾಣದ ಧನಲಾಭ. ಯಾವ ರಾಶಿಗಳಿಗೆ ಗೊತ್ತೇ??

Kannada Astrology:ವೈದಿಕ ಶಾಸ್ತ್ರದ ಪ್ರಕಾರ ಗ್ರಹಗಳು ತಮ್ಮ ರಾಶಿ ಹಾಗೂ ನಕ್ಷತ್ರವನ್ನು ಕಾಲಕ್ಕೆ ತಕ್ಕ ಹಾಗೆ ಪರಿವರ್ತಿಸಿಕೊಳ್ಳುತ್ತವೆ ಆಗ ನಕ್ಷತ್ರಗಳ ಬದಲಾವಣೆ ಕೆಲವು ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಕೆಲವರಿಗೆ ಈ ನಕ್ಷತ್ರಗಳ ಗೋಚರಗಳು ಶುಭ ಫಲವನ್ನು ಕೊಟ್ಟರೆ ಕೆಲವರಿಗೆ ಅಶುಭ ಫಲವನ್ನು ಕೊಡಬಹುದು. ಇದೇ ಬರುವ ಫೆಬ್ರವರಿ 9 ರಂದು ರಾಹು ಅಶ್ವಿನಿ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ ಅಶ್ವಿನಿ ನಕ್ಷತ್ರದ ಮೇಲೆ ಕೇತು ಗ್ರಹದ ಅಧಿಪತ್ಯ ಇರುತ್ತದೆ. ಅಂತೆಯೇ ರಾಹು ಗ್ರಹದ ಮೇಲೆ ಶನಿದೇವನ ಮೂರನೇ ದೃಷ್ಟಿ ಇರುತ್ತದೆ ಹೀಗಾಗಿ ಎಲ್ಲ ರಾಶಿಗಳ ಮೇಲೆಯೂ ಪ್ರಭಾವ ಬೀರಬಹುದು. ಅಶ್ವಿನಿ ರಾಹು ಗ್ರಹದ ಪ್ರಭಾವ ಈ ಮೂರು ರಾಶಿಯವರ ಮೇಲೆ ಎಂತಹ ಪರಿಣಾಮ ಬೀರಬಹುದು ನೋಡೋಣ ಬನ್ನಿ.

ಮಿಥುನ ರಾಶಿ:

 ರಾಹುವಿನ ಪಥ ಬದಲಾವಣೆಯಿಂದ ಈ ರಾಶಿಯವರಿಗೆ ಮಂಗಳಕರ ದಿನ ಆರಂಭವಾಗಲಿದೆ. ನಿಮ್ಮ ಜಾತಕದ ಆದಾಯ ಸ್ಥಾನದಲ್ಲಿ ರಾಹುವಿನ ಸಂಚಾರ ಇರುತ್ತದೆ ಹೀಗಾಗಿ ಆದಾಯ ಹೆಚ್ಚಾಗುತ್ತದೆ. ಹಣದ ಮೂಲಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ರಾಜಕೀಯ ಕ್ಕೆ ಸಂಬಂಧಿಸಿದಂತೆ ಉತ್ತಮ ಸ್ಥಾನ ಸಿಗಬಹುದು. ಅದೇ ರೀತಿ ಶೇರು ಮಾರುಕಟ್ಟೆ, ಬೆಡ್ಡಿಂಗ್, ಲಾಟರಿ ಮೊದಲಾದ ಕಡೆ ಹೂಡಿಕೆ ಮಾಡಿದವರಿಗೆ ಲಾಭ ಸಿಗಲಿದೆ. ಒಡಹುಟ್ಟಿದವರೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ.

ಕರ್ಕ ರಾಶಿ:

ರಾಹುಗ್ರಹದ ಸಂಕ್ರಮಣ ನಿಮ್ಮ ಸಂಕ್ರಮಣದ ಜಾತಕದ ದಶಮ ಭಾವದಲ್ಲಿ ನಡೆಯಲಿದ್ದು ಹೊಸ ಉದ್ಯೋಗ ಪ್ರಸ್ತಾಪಗಳು ಬರಬಹುದು. ಇದರಿಂದ ದೊಡ್ಡ ವ್ಯಕ್ತಿಗಳ ಜೊತೆ ನೀವು ಸಂಪರ್ಕ ಪಡೆದುಕೊಳ್ಳಲಿದ್ದೀರಿ. ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತೀರಿ. ಉದ್ಯಮಿಗಳು ಹೆಚ್ಚು ಲಾಭವನ್ನು ಪಡೆಯುತ್ತಾರೆ. ಆಕಸ್ಮಿಕ ಆದಾಯದಲ್ಲಿ ಲಾಭ ಹೆಚ್ಚಾಗಬಹುದು ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆಸ್ತಿ ವಿವಾದದಲ್ಲಿಯೂ ನಿಮ್ಮದೇ ಮೇಲುಗೈ ಆಗುತ್ತದೆ.

ಕನ್ಯಾ ರಾಶಿ:

ಅಶ್ವಿನಿ ನಕ್ಷತ್ರಕ್ಕೆ ರಾಹು ಪ್ರವೇಶ ಮಾಡಿದಾಗ ಕನ್ಯಾ ರಾಶಿಗೂ ಕೂಡ ಉತ್ತಮ ಫಲ ದೊರೆಯಲಿದೆ ರಾಹು ಗ್ರಹ ಕನ್ಯಾ ರಾಶಿಯ ಷಷ್ಠಮ ಭಾವದಲ್ಲಿ ನಡೆಯಲಿದ್ದಾನೆ ಹೀಗಾಗಿ ಈ ಅವಧಿಯಲ್ಲಿ ಭೂಮಿ ಮತ್ತು ಮನೆಗೆ ಬಂಧಿಸಿದಂತೆ ಲಾಭವನ್ನು ಪಡೆಯಬಹುದು. ಅವಿವಾಹಿತರಿಗೆ ಮದುವೆ ಆಗುವ ಸಾಧ್ಯತೆ ಇದೆ ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ಸೇರಬಹುದು. ವ್ಯಾಪಾರ ಅಥವಾ ಇತರ ಉದ್ದೇಶಗಳಿಗಾಗಿ ಸಾಲ ತೆಗೆದುಕೊಳ್ಳಲು ಬಯಸಿದರೆ ಇದು ಸರಿಯಾದ ಸಮಯ ಶೇರು ಮಾರುಕಟ್ಟೆಯಲ್ಲಿಯೂ ಕೂಡ ಹಣ ಮಾಡಬಹುದು.

Comments are closed.