Silk Smitha: ಸಿಲ್ಕ್ ಸ್ಮಿತಾ ರವರು ತೀರಿಕೊಂಡಾಗ ಕೊನೆಯ ಬಾರಿ ಮುಖ ನೋಡಲು ಹೋದ ಏಕೈಕ ಹೀರೋ ಯಾರು ಗೊತ್ತೇ? ಬೇರೆ ಯಾರು ಹೋಗಲಿಲ್ಲವೇಕೆ?

Silk Smitha: ಸಿಲ್ಕ್ ಸ್ಮಿತಾ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಸೌತ್ ಚಿತ್ರರಂಗ (South film industry) ವನ್ನು ಆಳಿದ ಮಹಾನ್ ಅಭಿನೇತ್ರಿ ಆಕೆ.  ನಿರ್ಮಾಪಕರು (Producer), ನಿರ್ದೇಶಕರು (Director) ಮಾತ್ರವಲ್ಲ, ಸ್ಟಾರ್ ಹೀರೋ (Star hero) ಗಳು ಕೂಡ ಆಕೆಯ ಡೇಟ್ಸ್ (dates) ಗಾಗಿ ಕಾಯುತ್ತಿದ್ದರಂತೆ. ಅಷ್ಟು ಫೇಮಸ್ ಆಗಿದ್ರು ಸಿಲ್ಕ್ ಸ್ಮಿತಾ.  ‘ನಮ್ಮ ಸಿನಿಮಾದಲ್ಲಿ ಒಂದೇ ಒಂದು ಹಾಡಿಗಾದರೂ ನೃತ್ಯ ಮಾಡ್ತಿರಾ ಅಂತ ಸಂಭಾವನೆ ಕೈಯಲ್ಲಿ ಹಿಡಿದು ನಿರ್ಮಾಪಕರು ಸಿಲ್ಕ್ ಹಿಂದೆ ಸುತ್ತುತ್ತಿದ್ದರಂತೆ.

one hero came to see silk smitha after her death 1 | Live Kannada News
ಸಿಲ್ಕ್ ಸ್ಮಿತಾ

ಸಿಲ್ಕ್ ಸ್ಮಿತಾ ಅವರ ಒಂದೇ ಒಂದು ನೋಟ ಸಾಕು ಅಭಿಮಾನಿಗಳು ಫಿದಾ ಆಗ್ತಿದ್ದರು. ನಟಿ ಸಿಲ್ಕ್ ಸ್ಮಿತಾ ತನ್ನ 36 ನೇ ವಯಸ್ಸಿನಲ್ಲಿ ಹಠಾತ್ ಮರಣ ಹೊಂದುತ್ತಾರೆ. ಆ ಸಮಯದಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿದ ವಿಷಯವಾಗಿತ್ತು ಇದು. ಆಕೆಯ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ಅವಳ ಸಾವಿನ ಬಗ್ಗೆ ಪ್ರತಿಯೊಬ್ಬರೂ ಒಂದೊಂದು ರೀತಿಯ ಕಥೆಯನ್ನ ಕೇಳುತ್ತಾರೆ. ಇದನ್ನೂ ಓದಿ: Benefits of sadabahar (nitya pushpa) plant: ನಿಮ್ಮ ಸುತ್ತ ಮುತ್ತ ಕಣ್ಣಿಗೆ ಬೀಳುವ ಈ ಗಿಡದ ಬಗ್ಗೆ ತಿಳಿದರೆ, ಇಂದೇ ತಂದು ಮನೆಯಲ್ಲಿ ಜೋಪಾನವಾಗಿ ಇಡುತ್ತೀರಿ. ಏನು ಗೊತ್ತೇ??

ಕೆಲವರು ಈಕೆಯ ಪ್ರೀತಿ ವಿಫಲವಾಗಿದ್ದಕ್ಕೆ ಸತ್ತಳು ಎಂದು ಹೇಳಿದರೆ, ಕೆಲವರು ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟು ಅಪಾರ ಸಾಲ ಮಾಡಿಕೊಂಡಿದ್ದರು ಎಂದೂ ಹೇಳುತ್ತಾರೆ.  ಮದ್ಯಪಾನವು ಅವಳನ್ನು ಬಲಿ ತೆಗೆದುಕೊಂಡಿತು ಎಂದು ಮತ್ತೆ ಕೆಲವರು ಹೇಳುತ್ತಾರೆ.

ದುರಂತ ಸಾವು

ತಾನು ಸಾಯುವ ಮುನ್ನ ಸಿಲ್ಕ್ ಸ್ಮಿತಾ ಹಲವರಿಗೆ ಕರೆ ಮಾಡಿದ್ದರಂತೆ. ಆದರೆ ದುರಾದೃಷ್ಟವೆಂದರೆ ಸಿಲ್ಕ್ ಸ್ಮಿತಾ ನಿಧನದ ನಂತರ ಚಿತ್ರರಂಗ ಕನಿಷ್ಠ ಒಂದು ಸ್ಮರಣ ಸಭೆಯನ್ನೂ ಕೂಡ ಆಯೋಜಿಸಲಿಲ್ಲ. ಆದರೆ ಮತ್ತೆ ಆಕೆಯ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿ ಹಣವನ್ನೂ ಮಾಡಿಕೊಂಡರಲ್ಲ,.. ಮೆಲ್ಮೋಟಕ್ಕೆ ಚಿತ್ರರಂಗ ಆಕೆಯ ಸಾವಿಗೆ ಸಂತಾಪ ಸೂಚಿಸಿದರೂ  ಅವಳ ಕೊನೆಯ ದರ್ಶನಕ್ಕೆ  ಹೆಚ್ಚು ಜನರು ಬರಲೇಇಲ್ಲ ಎಂಡು ಮಾದ್ಯಮ ಮಿತ್ರರು ಹೇಳುತ್ತಾರೆ. ಇದನ್ನೂ ಓದಿ: Rashmika Mandanna: ಆತ ಸರ್ವನಾಶವಾಗ್ತಾನೆ ಎಂದು ಶಾಪ ನೀಡಿದ ರಶ್ಮಿಕಾ ಮಂದಣ್ಣ: ಶಾಕಿಂಗ್ ಹೇಳಿಕೆ ಕೊಟ್ಟದ್ದು ಯಾಕೆ ಗೊತ್ತೇ??

ಒಬ್ಬನೇ ಒಬ್ಬ ಹೀರೋ ಬಂದಿದ್ದ

ಸಿಲ್ಕ್ ಸ್ಮಿತಾಳನ್ನು ಕೊನೆಯ ಬಾರಿ ನೋಡಲು ಬಂದಿದ್ದ ಅಂದಿನ ಟಾಪ್ ಹೀರೋ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ (Arjun Sarja) ಮಾತ್ರ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಸಿಲ್ಮ್ ಸ್ಮಿತಾ ಸಾಯುವುದಕ್ಕೂ ಕೆಲವು ದಿನಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದ ಕೊನೆಯ ದಿನ ಅರ್ಜುನ್‌ ಸರ್ಜಾ ಅವರ ಬಳಿ ‘ನಾನು ಸತ್ತರೆ ನನ್ನನ್ನು ನೋಡಲು ಬರುತ್ತೀರಾ? ಎಂದು ಕೇಳಿದ್ದರಂತೆ ಛೀ ಛೀ ಎಂಥಾ ಮಾತು ಆಡುತ್ತೀರಿ ಎಂದು ಅರ್ಜುನ್ ಸರ್ಜಾ ಆ ಮಾತನ್ನು ತಮಾಷೆಯಾಗಿ ತೆಗೆದುಕೊಂಡಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸಿಲ್ಕ್ ಅವರ ಮಾತೇ ನಿಜವಾಗಿತ್ತು. ಈ ಘಟನೆಯ ಬಗ್ಗೆ ಅರ್ಜುನ್ ಸರ್ಜಾ ಮಾಧ್ಯಮದ ಎದುರು ಹೇಳಿಕೊಂಡು ಅತ್ತಿದ್ದರು.

Comments are closed.