Kichcha Sudeep: ದಿಡೀರ್ ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡು ರಾಜ್ಯವನ್ನು ಶೇಕ್ ಮಾಡ್ತಾರಾ ಸುದೀಪ್; ಕೊನೆಯಲ್ಲಿ ಟ್ವಿಸ್ಟ್ ಏನು ಗೊತ್ತೇ??

Kichcha Sudeep: ಕನ್ನಡದ ಸ್ಟಾರ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇದೀಗ ರಾಜಕೀಯ ಸುದ್ದಿಯಲ್ಲಿ ಇದ್ದಾರೆ. ಅರೇ, ಇದೇನಿದು ಸಿನಿಮಾ (Film) ಬಿಟ್ಟು ರಾಜಕೀಯ (Politics) ಕ್ಕೆ ಸೇರಿಕೊಳ್ಳುತ್ತಾರೆ ಅಂತ ನಿಮಗೆ ಪ್ರಶ್ನೆ ಮೂಡಬಹುದು ಬಹುತೇಕ ಈ ಹಾದಿಯಲ್ಲಿ ಕಿಚ್ಚ ಸುದೀಪ್ ಮುಂದುವರೆಯುತ್ತಿದ್ದಾರೆ ಎನ್ನುವ ಮಾಹಿತಿ ಇದೆ.

ಇತ್ತೀಚಿಗೆ ಕಿಚ್ಚ ಸುದೀಪ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D.K.Shivkumar) ಅವರನ್ನು ಭೇಟಿಯಾಗಿದ್ದರು. ಇವರಿಬ್ಬರ ಈ ಭೇಟಿಯ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿವೆ ಆದರೆ ಇವರಿಬ್ಬರೂ ಭೇಟಿ ಮಾಡಿದ್ದು ಯಾಕೆ ಎಂಬುದು ತಿಳಿದು ಬಂದಿಲ್ಲ. ಕಿಚ್ಚ ಸುದೀಪ್ ಕೂಡ ರಾಜಕೀಯಕ್ಕೆ ಇಳಿಯುತ್ತಿದ್ದಾರಾ ಎಂಬುದು ಹಲವರ ಪ್ರಶ್ನೆ. ಸದ್ಯ ಈ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. “ನಟ ಸುದೀಪ್ ಅವರ ಜೊತೆಗೆ ರಾಜಕೀಯವಾಗಿ ಯಾವುದೇ ವಿಚಾರವನ್ನು ಚರ್ಚಿಸಿಲ್ಲ ಚಿತ್ರರಂಗದ ಸಮಸ್ಯೆಯ ಬಗ್ಗೆ ಪ್ರಣಾಳಿಕೆ ಸಿದ್ಧಪಡಿಸುವ ಬಗ್ಗೆ ಚರ್ಚಿಸಿದ್ದೇವೆ. ಅಂಬರೀಶ್, ಪುನೀತ್, ವಿಷ್ಣುವರ್ಧನ್ ಅವರಂತೆ ಸುದೀಪ್ ಕೂಡ ಉತ್ತಮ ನಟ” ಎಂಬುದಾಗಿ ಡಿಕೆ ಶಿವಕುಮಾರ್ ಸ್ಪಷ್ಟ ನೀಡಿದ್ದಾರೆ. ಜೊತೆಗೆ ಕಾಂಗ್ರೆಸ್ (Congress) ಪರ ಪ್ರಚಾರಕ್ಕೆ ಬನ್ನಿ ಎಂದು ಸುದೀಪ್ ಅವರನ್ನು ಕರೆದಿಲ್ಲ ಅವರಿಗೆ ರಾಜಕೀಯಕ್ಕೆ ಬರುವಂತೆ ನಾನು ಆಹ್ವಾನ ನೀಡಿಲ್ಲ ಎಂಬುದಾಗಿಯೂ ಹೇಳಿದ್ದಾರೆ. ಇದನ್ನು ಓದಿ: Kannada Astrology: ಇನ್ನು ಈ ರಾಶಿಯವರ ಅದೃಷ್ಟ ಬದಲಾಗುವುದು ಖಚಿತ: ಶನಿ ದೇವನೇ ನಿಂತು ನಿಮಗೆ ಹಣ ನೀಡಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ??

ಇನ್ನು ಈ ವಿಷಯವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) “ಸುದೀಪ್ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ ನಮ್ಮ ಸಿದ್ಧಾಂತವನ್ನು ಒಪ್ಪಿ ಪಕ್ಷಕ್ಕೆ ಬರುವುದು ಅವರಿಗೂ ಹಾಗೂ ಹೈಕಮಾಂಡ್ (High command)  ವಿಚಾರ. ಪಕ್ಷ ಸೇರ್ಪಡೆ ಆದರೆ ಪ್ರಚಾರದಲ್ಲಿ ಪೂರ್ಣವಾಗಿ ತೊಡಗಿಕೊಳ್ಳಬಹುದು. ಆದರೆ ನಾನು ಸುದೀಪ್ ಅವರನ್ನು ಭೇಟಿ ಆಗಿಲ್ಲ ಈ ಕುರಿತಂತೆ ಮಾತುಕತೆ ನಡೆದಿಲ್ಲ ರಾಜ್ಯದಲ್ಲಿ ಸಿನಿಮಾ ನಟರು ರಾಜಕೀಯಕ್ಕೆ ಬರುವುದಕ್ಕೆ ಸ್ವಲ್ಪ ಹಿಂದೇಟು ಹಾಕುತ್ತಾರೆ” ಎಂದು ಜಾರಕಿಹೊಳಿ ತಿಳಿಸಿದ್ದಾರೆ. ಇದನ್ನೂ ಓದಿ: Benefits of sadabahar (nitya pushpa) plant: ನಿಮ್ಮ ಸುತ್ತ ಮುತ್ತ ಕಣ್ಣಿಗೆ ಬೀಳುವ ಈ ಗಿಡದ ಬಗ್ಗೆ ತಿಳಿದರೆ, ಇಂದೇ ತಂದು ಮನೆಯಲ್ಲಿ ಜೋಪಾನವಾಗಿ ಇಡುತ್ತೀರಿ. ಏನು ಗೊತ್ತೇ??

ಜೊತೆಗೆ ಆಂಧ್ರ, ತಮಿಳುನಾಡು, ತೆಲಂಗಾಣದಂತೆ ನಮ್ಮಲ್ಲಿ ಆಗುವುದಿಲ್ಲ. ಇತರ ರಾಜ್ಯಗಳಂತೆ, ಬೇರೆ ಪಕ್ಷದವರಂತೆ ನಮ್ಮ ಪಕ್ಷ ಸ್ಟಾರ್ ಗಳನ್ನ ಕರೆತಂದು ಯಾವತ್ತೂ ಪ್ರಚಾರ ಮಾಡಿಲ್ಲ. ಆದರೂ ಸುದೀಪ್ ಪ್ರಚಾರದಲ್ಲಿ ಭಾಗಿಯಾದರೆ ಸ್ವಾಗತ ಮಾಡುತ್ತೇವೆ ಎಂಬುದಾಗಿಯೂ ಜಾರಕಿಹೊಳಿ ಸೇರಿಸಿದ್ದಾರೆ.

ಸುದೀಪ್ ತೀರ್ಮಾನಕ್ಕಾಗಿ ಕಾದಿದ್ದೇವೆ –ಸುಧಾಕರ್

ಇನ್ನು ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆಯ ಸಚಿವ ಡಾ. ಸುಧಾಕರ್ (Sudhakar), ನನ್ನ ಪ್ರಕಾರ ಸುದೀಪ್ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಅವರು ರಾಜ್ಯದ ಉತ್ತಮ ನಾಯಕ ಯಾವುದೇ ಪಕ್ಷಕ್ಕೆ ಸೇರಿದರು ಆ ಪಕ್ಷ (Party)ಕ್ಕೆ ಒಳ್ಳೆಯದಾಗುತ್ತೆ. ನಮ್ಮೊಂದಿಗೂ ಉತ್ತಮ ಒಡನಾಟ ಹೊಂದಿದ್ದಾರೆ ಸುದೀಪ್. ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂಬುದಾಗಿ ಸುಧಾಕರ ತಿಳಿಸಿದ್ದಾರೆ. ಇದನ್ನೂ ಓದಿ: Rashmika Mandanna: ಆತ ಸರ್ವನಾಶವಾಗ್ತಾನೆ ಎಂದು ಶಾಪ ನೀಡಿದ ರಶ್ಮಿಕಾ ಮಂದಣ್ಣ: ಶಾಕಿಂಗ್ ಹೇಳಿಕೆ ಕೊಟ್ಟದ್ದು ಯಾಕೆ ಗೊತ್ತೇ??

ಒಟ್ಟಿನಲ್ಲಿ ಸಿನಿಮಾದಲ್ಲಿ ಸ್ಟಾರ್ ಆಗಿರುವ ಕಿಚ್ಚ ಸುದೀಪ್ ರಾಜಕೀಯಕ್ಕೆ ಸೇರುವ ಬಗ್ಗೆ ಯಾವುದೇ ಮಾಹಿತಿಯು ಇಲ್ಲ ಆದರೆ ಹಲವರ ಊಹೆಯ ಪ್ರಕಾರ ಕಿಚ್ಚ ಸುದೀಪ್ ರಾಜಕೀಯಕ್ಕೆ ಇಳಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಈ ವಿಷಯದ ಬಗ್ಗೆ ಕಿಚ್ಚ ಸುದೀಪ್ ಅವರೇ ಸ್ಪೆಟ್ ಸ್ಪಷ್ಟನೆಯನ್ನು ನೀಡಬೇಕು.

Comments are closed.