Hotel Tips: ಯಾವುದೇ ಹೋಟೆಲ್ ಗೆ ಹೋದರೂ, ಬಿಳಿ ಬೆಡ್ ಶೀಟ್ ಹಾಕುವುದು ಯಾಕೆ ಗೊತ್ತೇ? ಕಾರಣ ತಿಳಿದರೆ…

Hotel Tips:ಸಾಮಾನ್ಯವಾಗಿ ನಾವು ಬೇರೆ ಊರುಗಳಿಗೆ ಹೋದಾಗ, ಪ್ರವಾಸಕ್ಕೆ ಹೋದಾಗ ಅಲ್ಲಿ ಉಳಿದುಕೊಳ್ಳಲು ಹೋಟೆಲ್ ಗಳಲ್ಲಿ ರೂಮ್ ಬುಕ್ ಮಾಡಿಕೊಳ್ಳುತ್ತೇವೆ. ಈಗ ಮೊದಲಿನ ಹಾಗೆ ಹೋಟೆಲ್ ಗೆ ಹೋಗಿ, ರೂಮ್ ಬುಕ್ ಮಾಡಿ ಕಾಯುವ ಅವಶ್ಯಕತೆ ಇಲ್ಲ, ಮೊಬೈಲ್ ನಲ್ಲಿಯೇ ಹೋಟೆಲ್ ಗಳನ್ನು ನೋಡಿ, ರೂಮ್ ಗಳು ಹೇಗಿವೆ ಎಂದು ಫೋಟೋಸ್ ಗಳ ಮೂಲಕ ನೋಡಿ, ನಿಮಗೆ ಹೋಟೆಲ್ ರೂಮ್ ದರ ಸರಿಹೋಗುತ್ತಾ ಎಂದು ಪರಿಶೀಲಿಸಿ ನಂತರ ಬುಕ್ ಮಾಡಬಹುದು.

ಹಿಂದಿನ ಕಾಲದಲ್ಲಿ ಹೋಗುವ ಊರುಗಳಲ್ಲಿ ಸಂಬಂಧಿಕರು ಇದ್ದರೆ, ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು, ಆದರೆ ಈಗ ಮತ್ತೊಬ್ಬರಿಗೆ ತೊಂದರೆ ಕೊಡುವುದು ಬೇಡ ಎಂದು, ಹೋಟೆಲ್ ಅನ್ನೇ ಆಪ್ಟ್ ಮಾಡಿಕೊಳ್ಳುತ್ತಾರೆ. ಹೋಟೆಲ್ ಗಳಿಗೆ ಹೋಗಿ ಅಲ್ಲಿ ಸ್ಟೇ ಮಾಡಿ ಬರುವುದು ಕೂಡ ಒಂದು ಬೇರೆ ರೀತಿಯ ಅನುಭವವನ್ನೇ ನೀಡುತ್ತದೆ. ಹಾಗೆಯೇ ನೀವು ಗಮನಿಸಿರುವ ಹಾಗೆ, ಸಣ್ಣ ಹೋಟೆಲ್ ಗಳಿಂದ ಫೈವ್ ಸ್ಟಾರ್ ಹೋಟೆಲ್ ವರೆಗು ಎಲ್ಲ ಕಡೆ ಬಿಳಿ ಬಣ್ಣದ ಬೆಡ್ ಶೀಟ್ ಮತ್ತು ಪಿಲ್ಲೋ ಗಳಿಗೆ ಬಿಳಿ ಬಣ್ಣದ ಕವರ್ ಹಾಕಿರುತ್ತಾರೆ, ಅದೇ ಬಣ್ಣದ ಕವರ್ ಹಾಕುವುದು ಯಾಕೆ ಎಂದು ಎಂದಾದರೂ ಯೋಚನೆ ಮಾಡಿದ್ದೀರಾ?

ಬಿಳಿ ಬಣ್ಣದ ಬೆಡ್ ಶೀಟ್ ಗಳನ್ನು ಬಳಸುವುದಕ್ಕೆ ಒಂದು ಕಾರಣವಿದೆ, ಅದೇನು ಎಂದರೆ.. ಬಿಳಿ ಬಣ್ಣ ಶುದ್ಧತೆಯ ಸಂಕೇತ, ಎಲ್ಲಿಯೇ ಹೋದರು ನಾವು ಜಾಗ ಚೆನ್ನಾಗಿದೆಯೇ ಎಂದು ನೋಡುತ್ತೇವೆ, ಹಾಗಾಗಿ ಬಿಳಿ ಬಣ್ಣವನ್ನು ಬಳಸುತ್ತಾರೆ. ಅಷ್ಟೇ ಅಲ್ಲ, ಬಿಳಿ ಬಣ್ಣ ಶಾಂತಿಯ ಸಂಕೇತ, ಹಾಗಾಗಿ ಈ ಬಿಳಿ ಬಣ್ಣ ಬಳಸುತ್ತಾರೆ. ಅಷ್ಟೇ ಅಲ್ಲದೆ, ಬಿಳಿ ಬಣ್ಣದ ಬಟ್ಟೆಗಳನ್ನು ಒಗೆದು ಕ್ಲೀನ್ ಮಾಡುವುದು ಕೂಡ ಸುಲಭ, ಬೇರೆ ಬಣ್ಣದ ಜೊತೆಗೆ ಸೇರಿದರೆ ಬೇರೆ ಬಣ್ಣ ಕಲರ್ ಬಿಟ್ಟುಕೊಳ್ಳುತ್ತದೆ, ಹೀಗೆಲ್ಲಾ ಆಗುತ್ತದೆ. ಈ ಕಾರಣಕ್ಕೂ ಬಿಳಿ ಬಣ್ಣದ ಬೆಡ್ ಶೀಟ್ ಗಳನ್ನೇ ಬಳಸುತ್ತಾರೆ.

Comments are closed.