ಯು ವಿ ಕ್ರಿಯೇಶನ್ಸ್ ಮೂಲಕ ಅನುಷ್ಕಾ ಶೆಟ್ಟಿ ಮತ್ತೆ ಬರಲಿದ್ದಾರಾ ಸಿನಿರಂಗಕ್ಕೆ!

ನಟಿ ಅನುಷ್ಕಾ ಶೆಟ್ಟಿ ಟಾಲಿವುಡ್ ನಲ್ಲಿ ಸಾಕಷ್ಟು ಉತ್ತಮ ಸಿನಿಮಾಗಳಲ್ಲಿ ನಟಿಸಿದ್ದಾರೆ ಒಂದು ಕಾಲದ ಹೀರೋಯಿನ್ ಎಂದು ಕರೆಸಿಕೊಂಡಿದ್ದ ಅನುಷ್ಕಾ ಶೆಟ್ಟಿ ಇದಕ್ಕಿಂತ ಹಾಗೆ ಸಿನಿಮಾದಿಂದ ದೂರ ಸರಿದರು. ಸೂಪರ್ ಸಿನಿಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಅನುಷ್ಕಾ ಶೆಟ್ಟಿ ಕೊನೆದಾಗಿ ನಟಿಸಿದ್ದು ನಿಶಬ್ದಂ ಸಿನಿಮಾದಲ್ಲಿ.

ಅವರು ಹೆಚ್ಚುತ್ತಿರುವ ತೂಕ ಹಾಗೂ ಇಳಿಯುತ್ತಿರುವ ಬೇಡಿಕೆಯ ಕಾರಣದಿಂದಾಗಿ ಹೆಚ್ಚಾಗಿ ತೆರೆಯ ಮೇಲೆ ಅನುಷ್ಕಾ ಶೆಟ್ಟಿ ಕಾಣಿಸಿಕೊಳ್ಳುತ್ತಿಲ್ಲ ಆದರೆ ಅವರು ದಪ್ಪವಾಗಿದ್ದಾಗಲೂ ಅವರಿಗೆ ಸಾಕಷ್ಟು ಆಫರ್ ಗಳು ಬಂದಿತ್ತು ಅಂತ ಹೇಳಲಾಗುತ್ತಿದೆ. ಆದರೂ ಅನುಷ್ಕಾ ಶೆಟ್ಟಿ ಶ್ರೀರಂಗದಿಂದ ಸ್ವಲ್ಪ ದೂರ ಇದ್ದರು ಈ ಹಿಂದೆ ಯು ವಿ ಕ್ರಿಯೇಶನ್ ಸಂಸ್ಥೆಯೊಂದಿಗೆ ಕೆಲಸ ಮಾಡುವುದಾಗಿ ಅನುಷ್ಕಾ ಘೋಷಿಸಿದ್ರು ಪ್ರಭಾಸ್ ಅವರ ಸ್ವಂತ ಪ್ರೋಡಕ್ಷನ್ ಹೌಸ್.

ನಟ ಪ್ರಭಾಸ್ ಹಾಗೂ ನಟಿ ಅನುಷ್ಕಾ ಶೆಟ್ಟಿ ಇಬ್ಬರು ಉತ್ತಮ ಸ್ನೇಹಿತರು ಹಾಗಾಗಿ ಯು ವಿ ಕ್ರಿಯೇಶನ್ ನಿರ್ಮಾಣದ ಸಿನಿಮಾದಲ್ಲಿ ತಾನು ನಟಿಸುತ್ತಿದ್ದೇನೆ ಅಂತ ಅನುಷ್ಕಾ ಶೆಟ್ಟಿ ಹೇಳಿದ್ದರು. ಜೊತೆಗೆ ಅನುಷ್ಕಾ ಶೆಟ್ಟಿ ಅವರೊಂದಿಗೆ ನವೀನ್ ಪೋಲಿ ಶೆಟ್ಟಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ ಅಧಿಕೃತವಾಗಿ ಟಾಲಿವುಡ್ ನಲ್ಲಿ ನಿರ್ಮಾಣಕ್ಕೆ ಸಿದ್ಧವಾಗಿರುವ ಈ ಸಿನಿಮಾದಲ್ಲಿ ನವೀನ್ ಪೋಲಿ ಶೆಟ್ಟಿ ಅನುಷ್ಕಾ ಶೆಟ್ಟಿ ಅವರಿಗೆ ಜೊತೆಯಾಗುತ್ತಾರ ಇಲ್ವಾ ಅನ್ನೋದು ಈಗಲೂ ಹಲವರಿಗೆ ಅನುಮಾನವಿದೆ.

ಆದರೆ ಈ ಎಲ್ಲಾ ಊಹಾಪೋಹಗಳ ನಡುವೆ ಅನುಷ್ಕಾ ಶೆಟ್ಟಿ ಒಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಅಧಿಕೃತ ಮಾಹಿತಿ ಲಭಿಸಿದೆ. ಹೌದು ಹೆಬ್ಬುಲಿ ಚಿತ್ರದ ನಾಯಕಿಯಾಗಿರುವ ಅಮಲಾ ಪೌಲ್ ಅವರ ಮಾಜಿ ಪತಿ ಎಎಲ್ ವಿಜಯ್. ಅಮಲಾಪುಲ್ ಹಾಗೂ ಎಎಲ್ ವಿಜಯ್ ತಮ್ಮ ವೈಯಕ್ತಿಕ ಬದುಕಿನಿಂದ ದೂರವಾಗಿ ಇದೀಗ ವೃತ್ತಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಎಎಲ್ ವಿಜಯ್ ಮಹಿಳಾ ಪ್ರಧಾನ ಕಥೆಯೊಂದನ್ನು ಸಿದ್ಧಪಡಿಸಿಕೊಂಡಿದ್ದಾರಂತೆ.

ಅಂದಹಾಗೆ ಈ ಕಥೆಗೆ ಅನುಷ್ಕಾ ಶೆಟ್ಟಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ ವಿಜಯ್ ಇನ್ನು ಈ ಸಿನಿಮಾದಲ್ಲಿ ನಟಿಸುವುದಕ್ಕೆ ಅನುಷ್ಕಾ ಶೆಟ್ಟಿ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದಾರೆ ಎನ್ನಲಾಗುತ್ತಿದೆ. ಇನ್ನು ಈ ಸಿನಿಮಾವನ್ನು ಯುವಿ ಕ್ರಿಯೇಶನ್ಸ್ ನಿರ್ಮಾಣ ಮಾಡುವುದಕ್ಕೆ ಹೊರಟಿದೆ ಎಂಬ ಸುದ್ದಿಯು ಇದೆ. ಈ ಹಿಂದೆಯೂ ನಟಿ ಅನುಷ್ಕಾ ಶೆಟ್ಟಿ ಯುವಿ ಕ್ರಿಯೇಶನ್ಸ್ ನಿರ್ಮಾಣದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಇತ್ತು ಆದರೆ ಇದೀಗ ನಿಜವಾಗುವ ಎಲ್ಲಾ ಸಾಧ್ಯತೆಗಳು ಇವೆ. ಇನ್ನು ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರಿಗೆ ನಾಯಕನಾಗಿ ಯಾರು ನಟಿಸುತ್ತಿದ್ದಾರೆ!? ಈ ಚಿತ್ರ ಯಾವಾಗ ಸೆಟ್ಟೆರುತ್ತೆ ಎನ್ನುವ ಬಗ್ಗೆ ಸ್ಪಷ್ಟವಾದ ಮಾಹಿತಿ ಎಂದು ಸದ್ಯಕ್ಕೆ ಸಿಕ್ಕಿಲ್ಲ.

ಆದರೆ ಬಾಹುಬಲಿ ಬೆಡಗಿ ಅನುಷ್ಕಾ ಶೆಟ್ಟಿ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಎಂದು ಅವರ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದೆ.

Leave A Reply

Your email address will not be published.