Actress Meena: ಕೊನೆಗೂ ಎರಡನೇ ಮದುವೆಗೆ ಒಪ್ಪಿಕೊಂಡ ಮೀನಾ; ವರ ಯಾರು ಗೊತ್ತಾ?

Actress Meena: ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ಮಲಯಾಳಂ, ತೆಲಗು ಎಲ್ಲಾ ಭಾಷೆಯಲ್ಲಿಯೂ ಅಭಿನಯಿಸಿದ ನಟಿ ಮೀನಾ ಸಿನಿ ಪ್ರಿಯರ ಅಚ್ಚುಮೆಚ್ಚಿನ ನಟಿ. ಈಗಲೂ ಸಿನಿಮಾ ನಟನೆಯಲ್ಲಿ ಬ್ಯುಸಿಆಗಿರುವ ನಟಿ ಮೀನಾ ಜೀವನದಲ್ಲಿ ಕರೋನಾ ಸಮಯದಿಂದಲೂ ಸಾಕಷ್ಟು ಸಂಕಶ್ಃಟದ ಸಮಯಗಳನ್ನು ಎದುರಿಸಬೇಕಾಗಿ ಬಂತು.

JYO 1 | Live Kannada News
Actress Meena: ಕೊನೆಗೂ ಎರಡನೇ ಮದುವೆಗೆ ಒಪ್ಪಿಕೊಂಡ ಮೀನಾ; ವರ ಯಾರು ಗೊತ್ತಾ? https://sihikahinews.com/actress-meena-2nd-marriage/

ನೋಡುವುದಕ್ಕೆ ಅತ್ಯಂತ ಸುಂದರವಾಗಿದ್ದ ಮೀನಾ ಅವರಿಗೆ ಚಿತ್ರರಂಗ ಪ್ರವೇಶ ಮಾಡಿದ ಮೇಲೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದವು. ಬಾಲ ನಟಿಯಾಗಿ ನಟನಾ ವೃತ್ತಿ ಆರಂಭಿಸಿದರು. 80-90 ರ ದಶಕದ ಟಾಪ್ ನಟಿಯರಲ್ಲಿ ಮೀನಾ ಕೂಡ ಒಬ್ಬರು. ಇತ್ತೀಚಿಗೆ ಮೀನಾ ಪತಿಯನ್ನು ಕಳೆದುಕೊಂಡು ಹೆಚ್ಚಾಗಿ ಸಾಮಾಜಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಅಂತಾನೇ ಹೇಳಬಹುದು. ಅವರು ಆ ನೋವಿನಿಂದ ಇನ್ನೂ ಆಚೆ ಬಂದಿಲ್ಲ. ಆದರೆ ಇದೀಗ ಮೀನಾ ಮದುವೆ ಆಗುತ್ತಿದ್ದಾರೆ ಅಂತ ಸುದ್ದಿ ಹಬ್ಬಿದೆ.  ಇದನ್ನೂ ಓದಿ: Astrology: ಡಿಸೆಂಬರ್ 3ರಿಂದ ಆರಂಭವಾಗಲಿದೆ ಭದ್ರ ರಾಜಯೋಗ; ಇದರಿಂದ ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ; ಯಾವ ರಾಶಿಗಳು ಗೊತ್ತೇ?

ಹೌದು ನಟಿ ಮೀನಾ 2009ರಲ್ಲಿ ಆಗರ್ಭ ಶ್ರೀಮಂತನಾಗಿದ್ದ ವಿದ್ಯಾಸಾಗರ್ ಅವರನ್ನು ವಿವಾಹವಾದರು. ವಿದ್ಯಾಸಾಗರ್ ಸಾಪ್ಟ್ ವೆರ್ ಇಂಜನಿಯರ್. ಇವರಿಗೆ ಆರು ವರ್ಷದ ಮಗು ಇದೆ. ವಿದ್ಯಾ ಸಾಗರ್ ತನ್ನ ಸಂಸಾರಕ್ಕೆ ಬೇಕಾದಷ್ಟು ಆಸ್ತಿ ಮಾಡಿಟ್ಟಿದ್ದಾರೆ. ಎಲವೂ ಇದ್ದರು ಮೀನಾ ಇದೀಗ ಒಬ್ಬಂಟಿ. ಮಗುವನ್ನು ನೋಡಿಕೊಂಡು ಜೀವನ ಸಾಗಿಸುವುದು ಸುಲಭದ ಮಾತಲ್ಲ. ಹಾಗಾಗಿ ಮೀನಾ ಕುಟುಂಬಸ್ಥರು ಅವರ ಎರಡನೆಯ ವಿವಾಹ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಕರೋನಾ ಎನ್ನುವ ಮಹಾಮಾರಿ ಮೀನಾ ಅವರ ಪತಿ ವಿದ್ಯಾಸಾಗರ್ ಅವರನ್ನು ಬಲಿ ತೆಗೆದುಕೊಂಡಿತ್ತು. ವಿದ್ಯಾಸಾಗರ್ ಇಹಲೋಕ ತ್ಯಜಿಸಿ ಆರು ತಿಂಗಳುಗಳೇ ಕಳೆದಿದೆ. ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾಸಾಗರ್ ಅಸುನೀಗಿದ್ದಾರೆ. ಇದೀಗ ಮೀನಾ ಹಾಗೂ ಅವರ ಮಗುವಿಗೆ ಮಾನಸಿಕವಾಗಿ ಆಸರೆಯಾಗುವುದಕ್ಕೆ ಒಬ್ಬ ಜವಾಬ್ದಾರಿಯುತ ವ್ಯಕ್ತಿ ಇದ್ದರೆ ಒಳ್ಳೆಯದು ಎಂಬ ಕಾರಣಕ್ಕೆ ಮೀನಾ ಅವರನ್ನು ಮರು ವಿವಾಹವಾಗುವುದಕ್ಕೆ ಮನೆಯವರು ಒತ್ತಾಯ ಮಾಡುತ್ತಿದ್ಡಾರೆ. ಇದಕ್ಕೆ ಮೀನಾ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.  ಒಟ್ಟಿನಲ್ಲಿ ಸಾಕಷ್ಟು ಸಂಕಟವನ್ನು ನೋಡಿರುವ ಮೀನಾ ಇನ್ನೊಂದು ವಿವಾಹ ಆಗುವುದೇ ಉತ್ತಮ ಅಂತ ಅವರ ಅಭಿಮಾನಿಗಳೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

Comments are closed.