Akshaya Tritiya 2024: ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡುವುದಕ್ಕೆ ಶುಭ ಸಮಯ ಯಾವುದು? ಮಾಡಲೇಬೇಕಾದ ಕೆಲಸ ಏನೂ? ಇಲ್ಲಿದೆ ನೋಡಿ ಎಲ್ಲ ಮಾಹಿತಿ!

Akshaya Tritiya 2024: ಅಕ್ಷಯ ತೃತೀಯ ಎನ್ನುವುದು ಸನಾತನ ಹಿಂದೂ ಸಂಸ್ಕೃತಿಯ ಜನರಿಗೆ ಅತ್ಯಂತ ಶುಭ ಹಾಗೂ ಪವಿತ್ರ ದಿನ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಯಾವುದೇ ರೀತಿಯ ಶುಭ ಕಾರ್ಯಕ್ರಮಗಳನ್ನ ಅಕ್ಷಯ ತೃತೀಯ ದಿನದಂದು ಪ್ರಾರಂಭ ಮಾಡೋದು ಒಳಿತು ಎಂಬುದಾಗಿ ಪರಿಗಣಿಸಲಾಗುತ್ತದೆ. ಇನ್ನು ಈ ವರ್ಷದ ಅಕ್ಷಯ ತೃತೀಯ ಮೇ 10 ಅಂದರೆ ನಾಳೆ ಆಚರಿಸಲಾಗುತ್ತದೆ ಅದು ಕೂಡ ನಾಲ್ಕು ದುರ್ಲಭ ಸಂಯೋಗಗಳ ನಡುವೆ. ಈ ದಿನ ಬುಧ ಗ್ರಹ ಮೇಷ ರಾಶಿಯಲ್ಲಿ ಗೋಚಾರ ವಾಗಲಿದ್ದಾನೆ, ಚಂದ್ರ ಹಾಗೂ ಗುರು ವೃಷಭ ರಾಶಿಯಲ್ಲಿ ಗಜಕೇಸರಿ ರಾಜ ಯೋಗವನ್ನ ನಿರ್ಮಾಣ ಮಾಡುತ್ತವೆ, ಸೂರ್ಯ ಹಾಗೂ ಬುಧನ ಸಂಯೋಗ ಬುದಾದಿತ್ಯ ಯೋಗವನ್ನು ನಿರ್ಮಾಣ ಮಾಡುತ್ತದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಅಕ್ಷಯ ತೃತೀಯ ದಿನದಂದು ದಾನ ಮಾಡುವುದಕ್ಕೆ ಖರೀದಿ ಮಾಡುವುದಕ್ಕೆ ಪೂಜಾ ವಿಧಿಗಳನ್ನ ಪೂರ್ತಿ ಗೊಳಿಸುವುದಕ್ಕೆ ಸಮರ್ಪಕವಾಗಿರುವ ಸಮಯ ಯಾವುದು ಅನ್ನುವುದನ್ನು ತಿಳಿಯೋಣ.

ಅಕ್ಷಯ ತೃತೀಯದ ಶುಭ ಮಹೂರ್ತ!

ಪಂಚಾಂಗದ ಅನುಸಾರವಾಗಿ ಮೇ 10 ರಂದು ಅಕ್ಷಯ ತೃತೀಯ ವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯದ ಶುಭ ಪರಿಣಾಮ ಎನ್ನುವುದು ಮೇ 10ರ ಬೆಳಿಗ್ಗೆ 4.16ಕ್ಕೆ ಪ್ರಾರಂಭವಾಗಿ ಮೇ 11ರ 2.51 ವರೆಗೆ ಇರಲಿದೆ.

ಚಿನ್ನ ಖರೀದಿ ಮಾಡುವುದಕ್ಕೆ ಉತ್ತಮ ಸಮಯ!

ಮೊದಲ ಮುಹೂರ್ತ: ಬೆಳಗ್ಗೆ 8:55 ನಿಂದ 10.36.
ಎರಡನೇ ಮಹೂರ್ತ: ಮಧ್ಯಾಹ್ನ 12.16 ನಿಂದ 4.56 ವರೆಗೆ.
ಮೂರನೇ ಮುಹೂರ್ತ: ಸಂಜೆ 4:56 ನಿಂದ ರಾತ್ರಿ 9: 32 ವರೆಗೆ.

ಪೂಜಾ ವಿಧಿಗಳು!

ಅಕ್ಷಯ ತೃತೀಯದ ದಿನದಂದು ಬೇಗ ಎದ್ದು ಸ್ನಾನ ಮಾಡಿ ಶುಚಿಯಾಗಿ ಹಳದಿ ಬಟ್ಟೆಯನ್ನು ಧರಿಸಬೇಕು. ಭಗವಾನ್ ಶ್ರೀ ವಿಷ್ಣು ಹಾಗೂ ಲಕ್ಷ್ಮೀದೇವಿಯ ಪೂಜೆ ಮಾಡಿ ದೇವರಿಗೆ ಧೂಪ ಹಾಗೂ ದೀಪವನ್ನು ಹಚ್ಚಬೇಕು. ವಿಷ್ಣು ಸಹಸ್ರ ನಾಮವನ್ನು ಜಪಿಸಿದ ನಂತರ ದೇವರ ಕೋಣೆಯಲ್ಲಿ ಇರುವಂತಹ ಪ್ರತಿಯೊಂದು ದೇವರಿಗೂ ಪೂಜೆಯನ್ನು ಸಮರ್ಪಿಸಿ ಆರತಿ ಎತ್ತ ಬೇಕು. ಅಗತ್ಯ ಇರುವಂತಹ ಬಡವರಿಗೆ ನಿಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಆರ್ಥಿಕ ದಾನವನ್ನು ಮಾಡಬೇಕು.

ಅಕ್ಷಯ ತೃತೀಯದ ದಿನದಂದು ಏನು ಮಾಡಬೇಕು?

ಅಕ್ಷಯ ತೃತೀಯ ದಿನದಂದು ಶ್ರೀ ವಿಷ್ಣು ಹಾಗೂ ಮಹಾಲಕ್ಷ್ಮಿ ದೇವಿಯ ಪೂಜೆ ಮಾಡಬೇಕು ಹಾಗೂ ವಿಷ್ಣುವಿನ ಸಹಸ್ರನಾಮ ಹಾಗೂ ರಾಮ ಸ್ತೋತ್ರವನ್ನು ಜಪಿಸಬೇಕು. ಅಕ್ಷಯ ತೃತೀಯದ ದಿನದಂದು ಪಿತೃಗಳ ಹೆಸರಿನಲ್ಲಿ ದಾನ ಕಾರ್ಯವನ್ನು ಮಾಡಬೇಕು. ಗೃಹಪ್ರವೇಶ ಮಾಡುವುದಕ್ಕೆ ಅಕ್ಷಯ ತೃತೀಯ ಉತ್ತಮ ದಿನವಾಗಿದ್ದು ಹೊಸ ವ್ಯಾಪಾರವನ್ನು ಪ್ರಾರಂಭ ಮಾಡಬೇಕು ಅಂತ ಇದ್ರೆ ಅದಕ್ಕೂ ಕೂಡ ಇದು ಹೇಳಿ ಮಾಡಿಸಿದ ದಿನ. ಈ ದಿನದಂದು ಒಂದು ಕಣ್ಣಿನ ತೆಂಗಿನಕಾಯಿಯನ್ನು ಕೆಂಪು ಬಟ್ಟೆಯನ್ನು ಸುತ್ತಿ ಹಣ ಇಡುವ ಜಾಗದಲ್ಲಿ ಇಡಬೇಕು ನಿಮಗೆ ಒಳ್ಳೆಯದಾಗುತ್ತದೆ.

ಅಕ್ಷಯ ತೃತೀಯ ದಿನದಂದು ಏನೆಲ್ಲ ಮಾಡಬಾರದು?

ಈ ಸಮಯದಂದು ಮನೆಯ ನಿರ್ಮಾಣ ಕಾರ್ಯವನ್ನು ಮಾಡುವುದು ಒಳ್ಳೆಯದಲ್ಲ. ಭಗವಾನ್ ವಿಷ್ಣುವಿಗೆ ತುಳಸಿ ಎಂದರೆ ಇಷ್ಟ ಹೀಗಾಗಿ ಅಕ್ಷಯ ತೃತೀಯ ದಿನದಂದು ತುಳಸಿ ಎಲೆಯನ್ನು ತುಂಡರಿಸುವುದು ಸರಿಯಲ್ಲ. ಈ ದಿನ ಮಾಂಸ ಸೇವನೆ ನಿಷಿದ್ಧವಾಗಿದ್ದು ಯಾವುದೇ ಕಾರಣಕ್ಕೂ ಮಾಂಸ ಸೇವನೆಯನ್ನು ಮಾಡಬೇಡಿ. ವಿಶೇಷವಾಗಿ ಈ ದಿನದಂದು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಿ. ಈ ದಿನದಂದು ಬೆಳ್ಳಿ ಚಿನ್ನವನ್ನು ಖರೀದಿ ಮಾಡುವುದು ಶುಭ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಹಣ ಇಲ್ಲದೆ ಹೋದಲ್ಲಿ ನೀವು ಇವುಗಳ ಬದಲಿಗೆ ಕವಡೆಯನ್ನು ಕೂಡ ಖರೀದಿ ಮಾಡಬಹುದಾಗಿದೆ.

Comments are closed.