Astrology: ಶುರುವಾಗುತ್ತಿದೆ ಕುಬೇರ ರಾಜ ಯೋಗ – ಈ ರಾಶಿಗಳು ಮುಟ್ಟಿದೆಲ್ಲಾ ಚಿನ್ನ!

Astrology: ದೇವಗುರು ಗೃಹಸ್ಪತಿ ಸಂಕ್ರಮಣ ಸ್ಥಿತಿಯಲ್ಲಿ ಈ ಬಾರಿ ಕಂಡು ಬರಲಿದ್ದು ಇದರಿಂದಾಗಿ ಕೆಲವು ನಿರ್ದಿಷ್ಟ ರಾಶಿಯವರಿಗೆ 2020 ರ ವರೆಗೂ ಕೂಡ ಕುಬೇರ ರಾಜಯೋಗದಿಂದಾಗಿ ಕೈ ತುಂಬಾ ಹಣವನ್ನು ಸಂಪಾದನೆ ಮಾಡುವಂತಹ ಯೋಗ ನಿರ್ಮಾಣವಾಗಿದೆ. ಹಾಗಿದ್ರೆ ಬನ್ನಿ ಆ ಅದೃಷ್ಟವಂತ ರಾಶಿ ಅವರು ಯಾರು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮೇಷ ರಾಶಿ

ಈ ಸಂದರ್ಭದಲ್ಲಿ ಹಣಕಾಸಿನ ವಿಚಾರದಲ್ಲಿ ಮೇಷ ರಾಶಿಯವರು ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಕೂಡ ಅವೆಲ್ಲ ಕೂಡ ನಿವಾರಣೆ ಆಗಲಿದೆ. 2025ರ ಮೇ ತಿಂಗಳ ವರೆಗೂ ಕೂಡ ಗುರುವಿನ ಕೃಪಾಕಟಾಕ್ಷದಿಂದಾಗಿ ನಿರ್ಮಾಣವಾಗಿರುವಂತಹ ಕುಬೇರ ರಾಜಯೋಗದಿಂದಾಗಿ ನೀವು ಪ್ರತಿಯೊಂದು ಕ್ಷೇತ್ರಗಳಲ್ಲಿ ಕೂಡ ಸಮೃದ್ಧಿಯನ್ನು ಕಾಣಲಿದ್ದೀರಿ. ಕೈತುಂಬ ಹಣ ಕೂಡ ಸಿಗಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಂದರ್ಭದಲ್ಲಿ ಆಧ್ಯಾತ್ಮಿಕವಾಗಿ ನಿಮ್ಮ ಒಲವು ಸ್ವಲ್ಪ ಮಟ್ಟಿಗೆ ಹೆಚ್ಚಾಗಲಿದ್ದು ಸಾಕಷ್ಟು ಧಾರ್ಮಿಕ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಲಿದ್ದೀರಿ.

ಕರ್ಕ ರಾಶಿ

ಕುಬೇರ ರಾಜಯೋಗ ನಿರ್ಮಾಣವಾಗಿರುವುದೇ ಕರ್ಕ ರಾಶಿಯಲ್ಲಿ ಹೀಗಾಗಿ ಇದರ ಲಾಭ ಅನ್ನೋದು ಬೇರೆ ಎಲ್ಲ ರಾಶಿಯವರಿಗಿಂತ ಹೆಚ್ಚಾಗಿ ಕರ್ಕ ರಾಶಿ ಅವರಿಗೆ ಸಿಗಲಿದೆ. ಕರ್ಕ ರಾಶಿಯವರು ಈ ಸಂದರ್ಭದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಮಾಡಿದ್ದೆ ರಾಜ್ಯಭಾರ ಎನ್ನುವ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಲಾಟರಿಯಲ್ಲಿ ಹಣವನ್ನು ಗೆಲ್ಲುವಂತಹ ಅವಕಾಶ ಕೂಡ ಇದ್ದು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಕರ್ಕರಾಶಿಯವರು ಅದರಲ್ಲಿ ಗೆಲುವನ್ನು ಕಾಣಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸ್ಥಾನಮಾನಗಳನ್ನು ಪ್ರಮೋಷನ್ ರೂಪದಲ್ಲಿ ನೀಡಲಿದ್ದಾರೆ ಹಾಗೂ ಸಂಬಳದಲ್ಲಿ ಕೂಡ ಹೆಚ್ಚಳ ಕಂಡು ಬರಲಿದೆ.

ಸಿಂಹ ರಾಶಿ

ಗುರುವಿನ ಆಶೀರ್ವಾದದಿಂದಾಗಿ ನಿರ್ಮಾಣವಾಗಿರುವಂತಹ ಕುಬೇರ ರಾಜಯೋಗದಿಂದಾಗಿ ಸಿಂಹರಾಶಿಯವರು ಕೈತುಂಬ ಲಾಭವನ್ನು ಸಂಪಾದನೆ ಮಾಡಲಿದ್ದಾರೆ. ಸಾಕಷ್ಟು ಸಮಯಗಳಿಂದ ನೀವು ಮಾಡಬೇಕೆಂದಿರುವಂತಹ ಕೆಲಸಗಳನ್ನ ಈ ಸಂದರ್ಭದಲ್ಲಿ ಮಾಡಿ ಮುಗಿಸಲಿದ್ದೀರಿ. ಹೊಸ ಹೊಸ ಜವಾಬ್ದಾರಿಗಳು ಕೂಡ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮನ್ನು ಹುಡುಕಿಕೊಂಡು ಬರಲಿದ್ದು ಬಂದಿರುವಂತಹ ಈ ಸುವರ್ಣ ಅವಕಾಶವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಖಂಡಿತವಾಗಿ ನೀವು ಸಿಗುವಂತಹ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಜೀವನಪೂರ್ತಿ ಯಾವುದೇ ರೀತಿಯ ಕಷ್ಟ ಪಡಬೇಕಾದ ಅಗತ್ಯ ಇಲ್ಲ. ಕೈ ತುಂಬಾ ಸಂಪಾದನೆ ಮಾಡುವಂತಹ ಅವಕಾಶ ನಿಮಗೆ ಇಲ್ಲೇ ಸಿಗುತ್ತದೆ. ಜೀವನದಲ್ಲಿ ಯಾವುದೇ ವಸ್ತುಗಳನ್ನು ಅಥವಾ ಆಸೆ ಆಕಾಂಕ್ಷಿಗಳನ್ನು ಪೂರೈಸಿಕೊಳ್ಳಬೇಕು ಎನ್ನುವಂತಹ ಆಸೆ ಇದ್ರೆ ನೀವು ಈ ಸಂದರ್ಭದಲ್ಲಿ ಪೂರೈಸಿಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ನಿಮ್ಮಲ್ಲಿ ಹೆಚ್ಚಾಗುವಂತಹ ಆತ್ಮವಿಶ್ವಾಸದಿಂದಾಗಿ ಯಾವುದೇ ಕೆಲಸವನ್ನು ನಿಮಗೆ ನೀಡಿದರೂ ಕೂಡ ಅದನ್ನು ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಮಾಡಿ ಮುಗಿಸಲಿದ್ದೀರಿ. ಇದೇ ಕಾರಣಕ್ಕಾಗಿ ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಚರ್ಚೆ ಹೆಚ್ಚಾಗಲಿದೆ ಹಾಗೂ ನಿಮ್ಮ ಸಹೋದ್ಯೋಗಿಗಳು ಕೂಡ ನಿಮ್ಮ ಜೊತೆಗೆ ಕೆಲಸ ಮಾಡೋದಕ್ಕೆ ಇಷ್ಟಪಡಲಿದ್ದಾರೆ.

Comments are closed.