ಅಡುಗೆ ಮಾಡುವಾಗ ಈ ಕೆಲವು ಟಿಪ್ಸ್ ನ್ನು ನೆನಪಿಟ್ಟುಕೊಂಡರೆ ಅಡುಗೆ ಮಾಡೋದೂ ಸುಲಭ, ಸಮಯವೂ ಉಳಿಯುತ್ತೆ!

ಅಡುಗೆ ಮಾಡುವುದು ಒಂದು ಕಲೆ, ಎಲ್ಲರಿಗೂ ಸುಲಭವಾಗಿ ಅಡುಗೆ ಮಾಡಲು ಬರುವುದಿಲ್ಲ ಅಂದಹಾಗೆ ಅಡುಗೆ ಮನೆಯಲ್ಲಿ ಕೇವಲ ಆಹಾರ ಪದಾರ್ಥಗಳನ್ನ ಬೇಯಿಸೋದು ಮಾತ್ರ ಅಡಿಕೆ ಎನಿಸಿಕೊಳ್ಳುವುದಿಲ್ಲ ನಾವು ಅಡುಗೆ ಮನೆಯನ್ನು ಹೇಗೆ ಇಟ್ಟುಕೊಳ್ಳುತ್ತೇವೆ ಅಡುಗೆಯನ್ನು ಎಷ್ಟು ಬೇಗ ಎಷ್ಟು ಸುಲಭವಾಗಿ ಮಾಡುತ್ತೇವೆ ಎನ್ನುವುದು ಕೂಡ ತುಂಬಾನೇ ಮುಖ್ಯ. ಹಾಗಾಗಿ ಮಹಿಳೆಯರ ಸ್ಥಾನವನ್ನು ಬೇರೆ ಯಾರು ತುಂಬಲು ಸಾಧ್ಯವೇ ಇಲ್ಲ.

ಇತ್ತೀಚಿನ ದಿನಗಳಲ್ಲಿ ಸರಿಯಾಗಿ ಬೇಯಿಸ್ಕೊಂಡು ತಿನ್ನೋದಕ್ಕೂ ಜನರಿಗೆ ಟೈಮ್ ಇಲ್ಲ ತಿನ್ನೋದಕ್ಕೂ ಕೂಡ ಪುರುಸೊತ್ತಿಲ್ಲ. ಹಾಗೆ ಮನೆಯಲ್ಲಿ ಅಡುಗೆ ಮಾಡಿಕೊಂಡು ಮನೆಯಲ್ಲಿಯೇ ಇರುವ ಗೃಹಿಣಿಯರ ಸಂಖ್ಯೆಯು ಕಡಿಮೆ. ಯಾಕೆಂದರೆ ಇಂದು ಹೆಣ್ಣು ಮಕ್ಕಳು ಹೊರಗಡೆ ಹೋಗಿ ದುಡಿದು ಬರುತ್ತಾರೆ. ಮನೆಯಲ್ಲಿಯೇ ಕುಳಿತು ಅಡುಗೆ ಮಾಡುತ್ತಾ ದಿನ ಕಳೆಯುವವರ ಸಂಖ್ಯೆ ಬಹಳ ಕಡಿಮೆ. ಆದರೆ ಹೊರಕ್ಕೆ ಹೋಗಿ ದುಡಿಯಬೇಕು ಮನೆಯಲ್ಲಿ ಅಡುಗೆಯನ್ನು ಮಾಡಬೇಕು ಇಂತಹ ಸಂದರ್ಭದಲ್ಲಿ ಈ ಎರಡು ಜವಾಬ್ದಾರಿಯನ್ನ ನಿಭಾಯಿಸುವುದು ಮಹಿಳೆಯರಿಗೆ ಅಷ್ಟು ಸುಲಭವಲ್ಲ ಹಾಗಾಗಿ ಅಡುಗೆಯ ಕೆಲಸದಲ್ಲಿ ಕೆಲವು ಸುಲಭ ವಿಧಾನಗಳನ್ನು ಅನುಸರಿಸಬೇಕು. ನಾವು ಹೇಳುವ ಈ ಕೆಲವು ಟಿಪ್ಸ್ ಗಳು ನಿಮಗೆ ನಿಜವಾಗಿಯೂ ಅಡುಗೆ ಮಾಡಲು ಸುಲಭ ಹಾಗೂ ಬೇಗ ಆಗುವಂತೆ ಮಾಡುತ್ತವೆ.

ಮೊದಲನೆಯದಾಗಿ ಪಾಲಾಕ್ ಸೊಪ್ಪನ್ನ ಅಡುಗೆ ಬಳಸುವುದಾದರೆ ಪಾಲಕ್ ಸೊಪ್ಪನ್ನ ಬೇಯಿಸಿ ನಂತರ ರುಬ್ಬುವ ಅಭ್ಯಾಸ ಸಾಕಷ್ಟ ಜನರಿಗೆ ಇರುತ್ತೆ ಆದರೆ ಮೊದಲು ಪಾಲಕ್ ಸೊಪ್ಪನ್ನು ರುಬ್ಬಿ ಬಳಿಕ ಬೇಯಿಸಿದರೆ ಪಾಲಕ್ ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಉಳಿಯುತ್ತೆ ಜೊತೆಗೆ ಪಾಲಕ್ ಬೇಗ ಬೇಯುತ್ತದೆ ಇನ್ನು ಹಾಲು ಪಾಲಾಕ್ ಮಾಡುವಾಗ ಪಾಲಕ್ ಸೊಪ್ಪನ್ನು ಒಂದು ಐದು ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಅದ್ದಿ ಬಳಿಕ ಬೇಯಿಸಿದರೆ ಪಾಲಕ್ ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಉಳಿದುಕೊಳ್ಳುತ್ತದೆ.

ಇನ್ನು ಗಟ್ಟಿಯಾಗಿರುವ ಬಾದಾಮಿ ಸ್ಲೈಸ್ ಮಾಡೋದು ತುಂಬಾ ಕಷ್ಟ ಅಂತಹ ಸಂದರ್ಭದಲ್ಲಿ ನೀವು ಬಾದಾಮಿಯನ್ನು ಕತ್ತರಿಸುವುದಕ್ಕೂ ಮೊದಲು ಒಂದು ಗಂಟೆ ಫ್ರಿಡ್ಜ್ ನಲ್ಲಿ ಇಡಿ ಬಳಿಕ ಅದನ್ನ ತೆಳುವಾಗಿ ಸುಲಭವಾಗಿ ಕತ್ತರಿಸಬಹುದು.

ಚಳಿಗಾಲದಲ್ಲಿ ದೋಸೆ ಅಥವಾ ಇಡ್ಲಿಗೆ ಹಿಟ್ಟನ ರುಬ್ಬಿಟ್ರೆ ಅದು ಬೆಳಿಗ್ಗೆ ಆಗುವಾಗ ಹುಲಿ ಬರುವುದಿಲ್ಲ ಅಂದರೆ ಬೇಗ ಹುಳಿಯಾಗುವುದಿಲ್ಲ ಆಗ ದೋಸೆಯಾಗಲಿ ಇಡ್ಲಿ ಆಗಲಿ ಸಾಕಷ್ಟು ಮೆತ್ತಗೆ ಬರುವುದಿಲ್ಲ. ಹಾಕಿದ್ದಾಗ ಚಳಿಗಾಲದಲ್ಲಿ ಹಿಟ್ಟು ಬೇಗ ಉಬ್ಬಿಕೊಳ್ಳಬೇಕು ಅಂದ್ರೆ ಅಕ್ಕಿ ರುಬ್ಬುವಾಗ ಸ್ವಲ್ಪ ಬಿಸಿ ನೀರಿನ ಸೇರಿಸಿ ಅಥವಾ ದೋಸೆ ಹಿಟ್ಟನ್ನ ರುಬ್ಬಿದ ಮೇಲೆ ಬಿಸಿ ನೀರಿನ ಮೇಲೆ ಹಿಟ್ಟಿನ ಪಾತ್ರೆಯನ್ನು ಇಡಿ. ಹೀಗೆ ಮಾಡಿದರೆ ಬೆಳಿಗ್ಗೆ ಆಗುವಷ್ಟರಲ್ಲಿ ಹಿಟ್ಟು ಚೆನ್ನಾಗಿ ಹುದುಗಿರುತ್ತೆ.

ಇನ್ನು ಹಸಿಮೆಣಸಿನಕಾಯಿಯನ್ನು ಹಾಗೆಯೇ ಫ್ರಿಡ್ಜ್ ನಲ್ಲಿಟ್ಟರೆ ಬೇಗ ಹಾಳಾಗುತ್ತೆ. ಹಾಗಾಗಿ ಹಸಿಮೆಣಸಿನಕಾಯಿ ತೊಟ್ಟನ್ನು ತೆಗೆದು ಒಂದು ಸ್ಟೀಲ್ ಡಬ್ಬದಲ್ಲಿ ಹಾಕಿ ಫ್ರಿಜ್ಜಿನಲ್ಲಿಯೇ ಇಟ್ಟರೆ ಹೆಚ್ಚು ದಿನ ಬಾಳಿಕೆ ಬರುತ್ತದೆ. ಅದೇ ರೀತಿ ಯಾವುದೇ ಸೊಪ್ಪು ಅಥವಾ ಕರಿಬೇವಿನ ಎಲೆಗಳನ್ನು ತೊಳೆದು ಅದರ ನೀರು ಇಂಗಿದ ಮೇಲೆ ಒಂದು ಕವರ್ ನಲ್ಲಿ ಹಾಕಿ ಫ್ರಿಜ್ಜಿನಲ್ಲಿಟ್ಟರೆ ಬೇಗ ಕೆಡುವುದಿಲ್ಲ.

ಇನ್ನು ತೊಗರಿ ಬೇಳೆ ಅಥವಾ ಹೆಸರು ಬೇಳೆ ಬೇಗ ಬೆಯಬೇಕು ಅಂದ್ರೆ ಐದು ನಿಮಿಷಗಳ ಕಾಲ ಬೇಳೆಯನ್ನು ನೀರಿನಲ್ಲಿ ನೆನೆಹಾಕಿ ನಂತರ ಕುಕ್ಕರ್ ನಲ್ಲಿ ಬೇಯಿಸಲು ಇಡುವಾಗ ಚಿಟಿಕೆ ಅರಿಶಿನ ಮತ್ತು ಸ್ವಲ್ಪ ತೆಂಗಿನ ಎಣ್ಣೆಯನ್ನು ಸೇರಿಸಿ ಬೆಳೆಯನ್ನ ಬೇಯಿಸಲು ಇಡಿ. ಹೀಗೆ ಮಾಡುವುದರಿಂದ ಬೇಳೆ ಬೇಗ ಬೇಯುತ್ತದೆ. ಸ್ನೇಹಿತರೆ ನಿಮಗೆ ಈ ಟಿಪ್ಸ್ ಗಳು ಇಷ್ಟವಾಗಿದ್ದರೆ ತಪ್ಪದೇ ನಮಗೆ ಕಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.