BSNL: 70 ದಿನಗಳ ವ್ಯಾಲಿಡಿಟಿ ಹೊಂದಿರುವಂತಹ ಹೊಸ ರಿಚರ್ಡ್ ಪ್ಲಾನನ್ನು ಪರಿಚಯಿಸಿದ BSNL!

BSNL: ಬಿಎಸ್ಎನ್ಎಲ್ ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಸಾಕಷ್ಟು ಗ್ರಾಹಕರನ್ನು ಹೊಂದಿರುವಂತಹ ನಂಬಿಕೆ ಸರ್ಕಾರದ ಅಧೀನದಲ್ಲಿ ಇರುವಂತಹ ಕಂಪನಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಹಾಗೂ ಏರ್ಟೆಲ್ ಗಳಂತಹ ಖಾಸಗಿ ಕಂಪನಿಗಳು ಬಂದಿದ್ದರು ಕೂಡ ಬಿಎಸ್ಎನ್ಎಲ್ ಸಂಸ್ಥೆ ಅತ್ಯಂತ ಕಡಿಮೆ ರಿಚಾರ್ಜ್ ಮೌಲ್ಯದ ಲಾಭವನ್ನು ಗ್ರಾಹಕರಿಗೆ ನೀಡುವ ಮೂಲಕ ಇವತ್ತಿಗೂ ಕೂಡ ಭಾರತೀಯ ಟೆಲಿಕಾಂ ಇಂಡಸ್ಟ್ರಿಯ ಗ್ರಾಹಕರ ಅತ್ಯಂತ ನಂಬಿಕಸ್ತ ಕಂಪನಿಗಳಲ್ಲಿ ಒಂದಾಗಿದೆ. ಇನ್ನು ತನ್ನ ಗ್ರಾಹಕರನ್ನು ಸಳೆಯುವುದಕ್ಕಾಗಿ ತನ್ನ ಪೋರ್ಟ್ಫೋಲಿಯೋದಲ್ಲಿ ಹೊಸದಾಗಿ ಜಾರಿಗೆ ತಂದಿರುವಂತಹ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಆ ರೀಚಾರ್ಜ್ ಪ್ಲಾನ್ ಯಾವುದು ಅನ್ನೋದನ್ನ ತಿಳಿಯೋಣ.

BSNL ಪರಿಚಯಿಸಿದೆ 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ರೀಚಾರ್ಜ್ ಪ್ಲಾನ್!

BSNL ಸಂಸ್ಥೆ ಹೊಸದಾಗಿ ಜಾರಿಗೆ ತಂದಿರುವಂತಹ ರೀಚಾರ್ಜ್ ಪ್ಲಾನ್ 197 ರಿಚಾರ್ಜ್ ಪ್ಲಾನ್ ಆಗಿದೆ. ಪ್ರಮುಖವಾಗಿ ಗ್ರಾಹಕರು ಈ ರಿಚಾರ್ಜ್ ಪ್ಲಾನ್ ನಲ್ಲಿ 70 ದಿನಗಳ ಅಂದರೆ ಎರಡು ತಿಂಗಳಿಗಿಂತಲೂ ಹೆಚ್ಚಿನ ವ್ಯಾಲಿಡಿಟಿಯನ್ನು ಪಡೆದುಕೊಳ್ಳಬಹುದಾಗಿದೆ. ಎರಡು ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಡೇಟಾ ಅನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಈ ಇಂಟರ್ನೆಟ್ ಸೇವೆಯನ್ನು ಕೇವಲ 15 ದಿನಗಳ ವರೆಗೆ ಮಾತ್ರ ಪಡೆದುಕೊಳ್ಳಬಹುದಾಗಿದೆ. ಅನ್ಲಿಮಿಟೆಡ್ ಕಾಲಿಂಗ್ ಸೇವೆಯನ್ನು ಪಡೆದುಕೊಳ್ಳುವುದರ ಮೂಲಕ ಹೆಚ್ಚಾಗಿ ತಮ್ಮ ಕುಟುಂಬ ಹಾಗು ಸ್ನೇಹಿತರ ಜೊತೆಗೆ ಫೋನ್ ನಲ್ಲಿ ಮಾತನಾಡುವಂತಹ ಗ್ರಾಹಕರಿಗೆ ಇದು ಲಾಭದಾಯಕವಾಗಿದೆ.

ಈ ರಿಚಾರ್ಜ್ ಪ್ಲಾನ್ ನಲ್ಲಿ ಪ್ರತಿದಿನ ನೂರು ಉಚಿತ ಎಸ್ಎಂಎಸ್ ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳಲ್ಲಿ ನೀವು ಗಮನಿಸಬಹುದು ರಿಚಾರ್ಜ್ ಪ್ಲಾನ್ ಮುಗಿದ ನಂತರ ಹೊರಗೆ ಹೋಗುವ ಕರೆಗಳು ಹಾಗೂ ಒಳಗೆ ಹೋಗುವ ಕರೆಗಳು ಎರಡು ಕೂಡ ನಿರ್ಬಂಧಗೊಳ್ಳುತ್ತವೆ. ಆದರೆ ಬಿಎಸ್ಎನ್ಎಲ್ ನಲ್ಲಿ ಈ ರೀತಿಯ ಯಾವುದೇ ತಡೆಯನ್ನು ಗ್ರಾಹಕರಿಗೆ ಕಂಪನಿ ವಿಧಿಸುವುದಿಲ್ಲ. ಹೀಗಾಗಿ ಈ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ.

ಬಿಎಸ್ಎನ್ಎಲ್ ಸಂಸ್ಥೆ ಬೇರೆ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಲಾಭವನ್ನು ನೀಡುವಂತಹ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸುವುದರಲ್ಲಿ ಸದಾ ಕಾಲ ಮುಂದಿರುತ್ತದೆ. ಎಲ್ಲಕ್ಕಿಂತ ಪ್ರಮುಖ ವಿಚಾರ ಏನಂದರೆ ಬಿಎಸ್ಎನ್ಎಲ್ ಸಂಸ್ಥೆ ಸರ್ಕಾರಿ ಸಂಸ್ಥೆ ಆಗಿರುವ ಕಾರಣದಿಂದಾಗಿ ಬೇರೆ ನೆಟ್ವರ್ಕ್ಗಳಿಗೆ ಹೋಲಿಸಿದರೆ ಇದು ಬಹುತೇಕ ಎಲ್ಲಾ ಹಳ್ಳಿ ಪ್ರದೇಶ ಹಾಗೂ ನೆಟ್ವರ್ಕ್ ಸಿಗದಂತಹ ಪ್ರದೇಶಗಳಲ್ಲಿ ಕೂಡ ಗ್ರಾಹಕರಿಗೆ ನೆಟ್ವರ್ಕ್ ಅನ್ನು ಒದಗಿಸುವ ಕೆಲಸ ಮಾಡುತ್ತದೆ.

Comments are closed.