ಕೇವಲ ಹತ್ತು ಲಕ್ಷದ ಒಳಗಡೆ ಅದ್ಭುತ ಮನೆಯನ್ನು ನಿರ್ಮಿಸುವುದು ಹೇಗೆ ಗೊತ್ತೇ?? 

ಸ್ನೇಹಿತರೆ, ಸ್ವಂತ ಮನೆ ಕಟ್ಟುವುದು ಹಲವರ ಕನಸು. ಈ ಕನಸನ್ನು ನನಸಾಗಿಸಿಕೊಳ್ಳುವುದಕ್ಕಾಗಿಯೇ ಜೀವನಪರ್ಯಂತ ಪರ್ಯಂತ ದುಡಿಯುತ್ತಾರೆ. ಕೆಲವರು ಈ ಕನಸನ್ನು ಯಶಸ್ವಿಯಾಗಿ ಈಡೇರಿಸಿಕೊಳ್ಳುತ್ತಾರೆ. ಅದರೆ ಮನೆಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆಯೇ ಇದೆಯಲ್ಲ ಹಾಗೆ ಮನೆ ನಿರ್ಮಾಣ ಅಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಖರ್ಚಾಗುತ್ತೆ. ಅದರಲ್ಲೂ ಈಗಿನ ದರದಲ್ಲಿ ಒಂದು ಮನೆ ನಿರ್ಮಾಣ ಮಾಡುವುದು ಅಂದ್ರೆ ತುಂಬಾನೇ ಖರ್ಚಾಗುತ್ತೆ. ಎಷ್ಟೋ ಜನ ತಮ್ಮ ಖರ್ಚನ್ನ ಮೀರಿ ಮನೆಗಾಗಿ ಸಾಲ ಮಾಡಿಕೊಳ್ಳುವುದೂ ಇದೆ.

ಆದರೆ ಚಿಂತೆ ಬೇಡ ಅತ್ಯಂತ ಕಡಿಮೆ ಬಜೆಟ್ ನಲ್ಲಿಯೂ ಹೇಗೆ ಮನೆ ನಿರ್ಮಾಣ ಮಾಡಬಹುದು ಅಂತ ನಾವು ಹೇಳ್ತೀವಿ. ಹೌದು ಈ ಕೆಳಗಿನ ವಿಡಿಯೋ ನೋಡಿದ್ರೆ ಕೇವಲ ಹತ್ತು ಲಕ್ಷದಲ್ಲಿ ಎಷ್ಟು ಸುಂದರವಾದ ಒನ್ ಬಿ ಹೆಚ್ ಕೆ ಮನೆಯನ್ನು ನಿರ್ಮಿಸಿಕೊಳ್ಳಬಹುದು ಎನ್ನುವ ಸಂಪೂರ್ಣ ಮಾಹಿತಿ ನಿಮಗೆ ದೊರೆಯುತ್ತೆ.

ಈ ಮನೆ 30-40 ಸೈಟ್ ನಲ್ಲಿ ಕಟ್ಟಿರುವ ಮನೆ. ಇಲ್ಲಿ ಪಾರ್ಕಿಂಗ್ ನಿಂದ ಹಿಡಿದು ಯುಟಿಲಿಟಿಯ ವರೆಗೆ ಎಲ್ಲಾ ರಿತಿಯ ವ್ಯವಸ್ಥೆಗಳೂ ಇವೆ. ಮನೆಗೆ ಗ್ರಾನೈಟ್ ಬಳಸಲಾಗಿದೆ. ಉತ್ತಮ ಬಾಳಿಕೆ ಬರುವ ವುಡ್ ಬಳಸಿದ ಬಾಗಿಲುಗಳನ್ನೂ ನೀವಿಲ್ಲಿ ಕಾಣಬಹುದು. ಒಂದು ಹಾಲ್, ರೂಮ್ ಹಾಗೂ ಅಡುಗೆ ಮನೆಯಿದೆ. ಹಾಲ್ ನಲ್ಲಿ ಸುಸಜ್ಜಿತವಾದ ದೇವರ ಮನೆಯೂ ಇದೆ. ನೀವೂ ಕೂಡ ಬಜೆಟ್ ಫ್ರೆಂಡ್ಲಿ ಮನೆ ನಿರ್ಮಿಸಿಕೊಳ್ಳುವುದಕ್ಕೆ ಎದುರು ನೋಡುತ್ತಿದ್ದರೆ ಈ ವಿಡಿಯೋ ನಿಮಗೆ ಖಂಡಿತವಾಗಿಯೂ ಸಹಾಯವಾಗಬಹುದು ನೋಡಿ.

Leave A Reply

Your email address will not be published.