ಕರುನಾಡ ಚಕ್ರವರ್ತಿ ಶಿವಣ್ಣ ರವರನ್ನು ಸೋಲಿಸಿದ ಕಾಫಿ ನಾಡು ಚಂದ್ರು: ಮತ್ತೊಮ್ಮೆ ಆಗಿದ್ದೇನು ಗೊತ್ತೇ??

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ಡಾರೆ. ಯಾವುದೋ ಮೂಲೆಯಲ್ಲಿ ಕುಳಿತು ವೀಡಿಯೋ ಮಾಡಿ ಪೋಸ್ಟ್ ಮಾಡಿ ದೇಶಾದ್ಯಂತ ಗುರುತಿಸಿಕೊಳ್ಳುತ್ತಿದ್ದಾರೆ. ಈಗ ಸೆಲಿಬ್ರೆಟಿಗಳು ಅಂದ್ರೆ ಸಿನಿಮಾ ನಾಯಕ. ನಾಯಕಿಯರು, ಕ್ರಿಕೆಟಿಗರು ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲಿಅತೀ ಹೆಚ್ಚು ಫಾಲೋವರ್ಸ್ ಹೊಂದಿರುವವರು ಕೂಡ ಸೆಲಿಬ್ರೆಟಿಗಳೆ!

ಹೌದು, ಸೋಶಿಯಲ್ ಮಿಡಿಯಾ ಸ್ಟಾರ್ ಗಳ ಸಂಖ್ಯೆ ಇಂದು ಹೆಚ್ಚಾಗಿದೆ.  ರಾತ್ರೆ ಬೆಳಗಾಗುವುದರ ಒಳಗೆ ಒಂದೇ ಒಂದು ವಿಡಿಯೋ ಮೂಲಕ ವೈರಲ್ ಆದವರು ಸಾಕಷ್ಯು ಜನ. ಅಂತವರಲ್ಲಿ ಸದ್ಯ ಕಾಫಿ ನಾಡ ಚಂದು ಅವರ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಚಿಕ್ಕಮಗಳೂರಿನ ಮೂಲದವರರಾದ ಕಾಫಿ ನಾಡ ಚಂದು ಪುನೀತ್ ರಾಜಕುಮಾರ ಅವರ ದೊಡ್ಡ ಅಭಿಮಾನಿ. ಆಟೋ ಓಡಿಸುವ ಉದ್ಯೋಗ ಮಾಡುತ್ತಿರುವ ಚಂದು ತಮ್ಮ ಆಟೋದಲ್ಲಿ ಪುನೀತ ಅವರ ಫೋಟೊವನ್ನು ಇಟ್ಟು ಅದಕ್ಕೆ ದಿನವೂ ಹಾರ ಹಾಕಿ ಪೂಜೆ ಮಾಡಿಯೇ ಕೆಲಸ ಆರಂಭಿಸಿತ್ತಾರೆ.

ಇನ್ನು ಕಾಫಿ ನಾಡ ಚಂದು ಫೇಮಸ್ ಆಗಿದ್ದು, ಅವರ ವಿಶಿಷ್ಟವಾದ ಬರ್ತಡೆ ಹಾಡುಗಳ ಮೂಲಕ. ಇಂದು ಯಾರದ್ಡೇ ಬರ್ತಡೆ ಆದ್ರೂ ಕಾಫಿ ನಾಡ ಚಂದು ಹಾಡಿನ ಸ್ಟ್ರೈಲ್ ನಲ್ಲಿಯೇ ಹಾಡನ್ನ ಹೇಳಲಾಗುತದೆ. ಅಷ್ಟು ಫೇಮಸ್ ಆಗಿಬಿಟ್ತಿದ್ದಾರೆ ಚಂದು. ಇನ್ನು ಚಂದು ಅವರು ತಮ್ಮದೇ ದಾಟಿಯಲ್ಲಿ ಬೇರೆ ಹಾಡುಗಳನ್ನೂ ಹೇಳುತ್ತಾ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುತ್ತಿದ್ದಾರೆ.

ಚಂದು ಅವರ ಫಾಲೇವರ್ಸ್ ಮೊದಲು ನಾಲ್ಕುನೂರು ಜನರನ್ನು ಮೀರಿರಲಿಲ್ಲ. ಆದ್ರೆ ಅದೃಷ್ಟ ನೋಡಿ ಒಂದು ನಾಲ್ಕು ಲಕ್ಷಕ್ಕೂ ಅಧಿಕ ಫಾಲೋವರ್ಸ್ ನ್ನು ಹೊಂದ್ದಾರೆ. ಹೌದು, ಬಂದು ಅವರ ಇನ್ಸ್ಟಾ ಗ್ರಾಮ್ ನಲ್ಲಿ ಎರಡು ಖಾತೆಯನ್ನು ಹೊಂದಿದ್ದಾರೆ. ಒಂದು ಖಾತೆಯಲ್ಲಿ ಎರಡು ಲಕ್ಶಕ್ಕೂ ಅಧಿಕ ಫಾಲೋವರ್ಸ್ ಇದ್ದು, ಕನ್ನಡದ ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯ, ಹಾಗೂ ನಟ ಶಿವರಾಜ್ ಕುಮಾರ್ ಅವರನ್ನೂ ಮೀರಿಸಿದ್ದಾರೆ. ಇದು ಅಧಿಕೃತ ಸೈಟ್ ಇರಬಹುದು ಎಂದು ಹೇಳಲಾಗುತ್ತಿದೆ.

ಕಾಫಿ ನಾಡ ಚ್ಂದು ಇಂದು ಲಕ್ಷಾಂತರ ಫಾಲೋವರ್ಸ್ ಗಳಾನ್ನು ಗಳಿಸಿಕೊಳ್ಳಲು ಅವರ ಒಳ್ಳೆಯ ಗಣವೂ ಕಾರಣ. ತಾನು ಹೋಗುವ ದಾರಿಯಲ್ಲಿ ಯಾರೇ ಅಪಘಾತಕ್ಕೆ ಒಳಗಾದರೂ ಕೂಡಲೇ ಅವರ ನೆರವಿಗೆ ಧಾವಿಸುತ್ತಾರೆ ಚಂದು. ಹಾಗಾಗಿ ಅವರಿಗೆ ಸಣ್ಣ ಪುಟ್ಟ ಸನ್ಮಾನಗಳನ್ನೂ ಮಾಡಲಾಗಿದೆ. ಇನ್ನು ಕಾಫಿ ನಾಡ ಚಂದು ಅವರ ಖ್ಯಾತಿ ಹೆಚ್ಚುತ್ತಿದ್ದಂತೆ ಅವರನ್ನು ಬಿಗ್ ಬಾಸ್ ಸ್ಪರ್ಧಿಯಾಗಿ ಕಳುಹಿಸಬೇಕು ಎಂದು ಎಲ್ಲರೂ ಅಭಿಪ್ರಾಯ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ಹೆಸರನ್ನು ಪೋಸ್ಟ್ ಮಾಡುತ್ತಿದ್ದಾರೆ. ಹಾಗಾಗಿ ಚಂದು ಬಿಗ್ ಬಾಸ್ ಗೂ ಹೋಗುತ್ತಾರಾ ಅನ್ನೋ ದು ಹಲವರ ಕುತೂಹಲ! ಕಾಫಿ ನಾಡ ಚಂದು ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

Leave A Reply

Your email address will not be published.