Cooking oil price reduced: ಅಡುಗೆ ಎಣ್ಣೆ ಬೆಲೆಯಲ್ಲಿ ಬಾರಿ ಕುಸಿತ: ಮತ್ತಷ್ಟು ಬೆಲೆ ಇಳಿಕೆ ಖಚಿತ. ಎಷ್ಟಾಗಲಿದೆ ಗೊತ್ತೇ ಅಡುಗೆ ಎಣ್ಣೆ??

Cooking oil price reduced: ವಿದೇಶದಲ್ಲಿ ಈಗ ದುರ್ಬಲವಾದ ಪರಿಸ್ಥಿತಿ ಇರುವ ಕಾರಣ ಎಣ್ಣೆ ಹಾಗೂ ಎಣ್ಣೆಕಾಳುಗಳ ಬೆಲೆಯಲ್ಲಿ ಮಂಗಳವಾರ ಕೂಡ ಇಳಿಕೆ ಕಂಡುಬಂದಿದೆ. ಸಾಸಿವೆ ಎಣ್ಣೆ, ಸೋಯಾಬೀನ್ ಎಣ್ಣೆ ಎಣ್ಣೆಕಾಳು, ಕಚ್ಚಾ ಪಾಮ್ ಆಯ್ಲ್, ಪಾಮೋಲಿನ್ ಆಯ್ಲ್ ಹಾಗೂ ಹತ್ತಿಬೀಜದ ಆಯ್ಲ್ ನ ಬೆಲೆಯಲ್ಲಿ ಇಳಿಕೆ ಆಗಿದೆ. ಆದರೆ ಕಡಲೆ ಎಣ್ಣೆ ಮತ್ತು ಎಣ್ಣೆಕಾಳುಗಳ ಬೆಲೆ ಹಾಗೆಯೇ ನಿಂತಿದೆ. ಸೂರ್ಯಕಾಂತಿ ಎಣ್ಣೆ ಮತ್ತು ಸೋಯಾಬೀನ್ ಎಣ್ಣೆಯ ಮೇಲೆ ವಿಶೇಷವಾಗಿ ಗಮನ ಕೊಡಬೇಕು ಎಂದು ಮಲೇಷ್ಯಾ ಚಿಕಾಗೋ ಎಕ್ಸ್ಛೇಂಜ್ ಮೂಲಗಳ ಪ್ರಕಾರ ತಿಳಿದುಬಂದಿದೆ. ನಮ್ಮ ದೇಶದಲ್ಲಿ ಸೂರ್ಯಕಾಂತಿ ಬೀಜದ ಬೆಲೆ ಎಂ.ಎಸ್.ಪಿ ಯಲ್ಲಿ ಕ್ವಿಂಟಾಲ್ ಗೆ 6,400 ರೂಪಾಯಿ ಆಗಿದೆ. ಇದರ ಎಣ್ಣೆಯ ಬೆಲೆ ಒಂದು ಲೀಟರ್ ಗೆ 135 ರೂಪಾಯಿ ಆಗಿದೆ.

ಇನ್ನು ಆಮದು ಮಾಡಿಕೊಳ್ಳುವ ಸೂರ್ಯಕಾಂತಿ ಎಣ್ಣೆಯ ಬೆಲೆ ಒಂದು ಲೀಟರ್ಗೆ 89 ರೂಪಾಯಿ ಆಗಿದೆ. ಒಂದು ಕ್ವಿಂಟಾಲ್ ಬೆಲೆ 6400 ಆಗಿದ್ದರು ಕೂಡ ಅದನ್ನು ಖರೀದಿ ಮಾಡುತ್ತಿರುವುದು 4200 ರೂಪಾಯಿಗಳಿಗೆ ಆಗಿದೆ. ಇದು ಮುಂದುವರೆದರೆ, ರೈತರಿಗೆ ಹಾಗೂ ಇದೇ ಉದ್ಯಮ ನಡೆಸುವವರಿಗೆ ಹಾನಿ ಆಗುವುದಂತೂ ಖಂಡಿತ ಎನ್ನುತ್ತಾರೆ ಉದ್ಯಮಿಗಳು. ಕೇವಲ ಎರಡು ತಿಂಗಳ ಹಿಂದೆ ಬೆಲೆ ಹೇಗಿತ್ತು ಎಂದು ನೋಡಿದರೆ, ಸೂರ್ಯಕಾಂತಿ ಎಣ್ಣೆಯ ಬೆಲೆ ಕಚ್ಚಾ ಪಾಮ್ ಆಯ್ಲ್ ಗಿಂತ ಒಂದು ಲೀಟರ್ ಗೆ 40 ರೂಪಾಯಿ ಜಾಸ್ತಿಯಿತ್ತು, ಆದರೆ ಈಗ 10 ರಿಂದ 12 ರೂಪಾಯಿ ಅಷ್ಟಿದೆ. ಹೀಗೆ ಆಗಿರುವುದು ಮೃದು ಎಣ್ಣೆಯ ಮೇಲೆ ಟ್ಯಾಕ್ಸ್ ಹೆಚ್ಚಿಸುವ ಪರಿಸ್ಥಿತಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತಿದೆ.

ಇವುಗಳ ಬೆಲೆ ಎಷ್ಟಿದೆ ಎಂದು ನೋಡುವುದಾದರೆ. ಸಾಸಿವೆ ಎಣ್ಣೆ ಕಾಳು ಪ್ರತಿ ಕ್ವಿಂಟಾಲ್‌ ಗೆ 5,370 ರಿಂದ 5,420 ರೂಪಾಯಿಗಳು. ನೆಲಗಡಲೆ – ಕ್ವಿಂಟಾಲ್‌ ಗೆ 6,825 ರಿಂದ 6,885 ರೂಪಾಯಿಗಳು. ನೆಲಗಡಲೆ ಸಂಸ್ಕರಿಸಿದ ಎಣ್ಣೆ ಒಂದು ಟಿನ್‌ ಗೆ 2,560 ರಿಂದ 2,825 ರೂಪಾಯಿಗಳು. ಸಾಸಿವೆ ಎಣ್ಣೆ ದಾದ್ರಿ ಒಂದು ಕ್ವಿಂಟಾಲ್‌ ಗೆ 11,150 ರೂಪಾಯಿಗಳು. ಸಾಸಿವೆ ಪಕ್ಕಿ ಘನಿ ಒಂದು ಟಿನ್ ಗೆ 1,765 ರಿಂದ 1,795 ರೂಪಾಯಿಗಳು. ಸಾಸಿವೆ ಕಚ್ಚಿ ಘನಿ ಒಂದು ಟಿನ್ ಗೆ 1,725 ಇಂದ 1,850 ರೂಪಾಯಿಗಳು. ಎಳ್ಳೆಣ್ಣೆ ಗಿರಣಿ ವಿತರಣೆ ಒಂದು ಕ್ವಿಂಟಾಲ್‌ ಗೆ 18,900 ರಿಂದ 21,000 ರೂಪಾಯಿಗಳು

Comments are closed.