Cricket News:ಜಡ್ಡು ಹೋದರೆ ಏನಂತೆ ಅವರ ಸ್ಥಾನವನ್ನು ತುಂಬುವ ಟಾಪ್ ಮೂರು ಆಟಗಾರರು ಯಾರು ಗೊತ್ತೇ??

Cricket News: ಈ ಟಿ 20 ವಿಶ್ವಕಪ್ ನಂತರ ಭಾರತೀಯ ಕ್ರಿಕೆಟ್ ತಂಡದಿಂದ ಟಿ ಟ್ವೆಂಟಿ ಫಾರ್ಮೆಟ್ ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ ಅವರ ಜೊತೆಗೆ ಭಾರತೀಯ ಕ್ರಿಕೆಟ್ ತಂಡದ ಸಾರ್ವಕಾಲಿಕ ಸರ್ವ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವಂತಹ ಜಡೆಜಾ ಅವರು ಕೂಡ ನಿವೃತ್ತಿಯನ್ನು ಘೋಷಿಸಿದ್ದಾರೆ. ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ಹಾಗೂ ವಿಶೇಷವಾಗಿ ಫೀಲ್ಡಿಂಗ್ ವಿಚಾರದಲ್ಲಿ ಜಡೆಜಾ ಅವರನ್ನು ಮೀರಿಸುವಂತಹ ಮತ್ತೊಬ್ಬ ಭಾರತೀಯ ಆಟಗಾರನನ್ನು ನಾವು ಕಾಣೋದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

ಹೀಗಿದ್ದರೂ ಕೂಡ ಅವರ ನಿವೃತ್ತಿಯಿಂದಾಗಿ ಅವರ ಸ್ಥಾನವನ್ನು ಬೇರೆ ಆಟಗಾರರು ತುಂಬಬೇಕಾಗಿರುವುದು ಈಗ ಟಿ 20 ಫಾರ್ವರ್ಟ್ ನಲ್ಲಿ ಅತ್ಯಂತ ಅಗತ್ಯವಾಗಿದೆ ಅನ್ನೋದು ಸತ್ಯ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ರವೀಂದ್ರ ಜಡೇಜಾ ಅವರ ಸ್ಥಾನವನ್ನು ತುಂಬಾ ಬಲ್ಲಂತಹ ಆಟಗಾರರು ಯಾರು ಅನ್ನೋದನ್ನ ತಿಳಿದುಕೊಳ್ಳೋಣ!

ಈ ಆಟಗಾರರು ರವೀಂದ್ರ ಜಡೆಜಾ ಅವರ ಸ್ಥಾನವನ್ನು ಟಿ ಟ್ವೆಂಟಿ ಕ್ರಿಕೆಟ್ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ತುಂಬಬಹುದು!

  • ರಿಯಾನ್ ಪರಾಗ್: ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಟವಾಡುವಂತಹ ಈ ಯುವ ಆಟಗಾರ ಸ್ಥಳದ ಪರವಾಗಿ ಬ್ಯಾಟಿಂಗ್ ವಿಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಆರಂಭಿಕ ಕ್ರಮಾಂಕದಲ್ಲಿ ಮ್ಯಾಜಿಕ್ ಮಾಡಬಲ್ಲಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ ಅನ್ನೋದನ್ನ ಈಗಾಗಲೇ ಕಳೆದು ಹೋದ ಐಪಿಎಲ್ ಸೀಸನ್ ನಲ್ಲಿ ಸಾಬೀತುಪಡಿಸಿ ತೋರಿಸಿದ್ದಾರೆ. 22 ವರ್ಷ ವಯಸ್ಸಿನ ರಿಯಾನ್ ಪರಾಗ್ ಸಾಕಷ್ಟು ಟೀಕೆ ಟಿಪ್ಪಣಿಗಳನ್ನು ಎದುರಿಸಿದರೂ ಕೂಡ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡಬೇಕು ಎನ್ನುವಂತಹ ಅವರ ಹುಮ್ಮಸ್ಸು ಕಳೆದ ಬಾರಿ ಐಪಿಎಲ್ ನಲ್ಲಿ ಬೆಸ್ಟ್ ಪರ್ಫಾರ್ಮೆನ್ಸ್ ನೀಡುವುದಕ್ಕೆ ಕಾರಣವಾಗಿದೆ. ಇವರು ಬ್ಯಾಟಿಂಗ್ ಆಲ್ ರೌಂಡರ್ ಆಗಿದ್ದು ರವೀಂದ್ರ ಜಡೇಜಾ ಅವರ ಸ್ಥಾನವನ್ನು ತುಂಬಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ.
  • ವಾಷಿಂಗ್ಟನ್ ಸುಂದರ್: ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಈಗಾಗಲೇ ಆಟವಾಡಿರುವಂತಹ ಈ ಆಟಗಾರ ಅದಾಗಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಕಷ್ಟು ಗಮನಾರ್ಹ ಪ್ರದರ್ಶನವನ್ನು ಭಾರತೀಯ ಕ್ರಿಕೆಟ್ ತಂಡದ ಪರವಾಗಿ ನೀಡಿದ್ದಾರೆ. ಐಪಿಎಲ್ ನಲ್ಲಿ ಟಿ20 ಫಾರ್ಮೆಟ್ ನಲ್ಲಿ ಕೂಡ ಬೆಸ್ಟ್ ಪರ್ಫಾರ್ಮೆನ್ಸ್ ನೀಡುವಂತಹ ಸಾಮರ್ಥ್ಯವನ್ನು ಹೊಂದಿರುವಂತಹ ಯುವ ಆಲ್-ರೌಂಡರ್ ಆಟಗಾರ. ಆಡಿರುವಂತಹ 15 ಟಿ 20 ಪಂದ್ಯಗಳಲ್ಲಿ ಸಿಕ್ಕಿರುವಂತಹ ಅವಕಾಶದಲ್ಲಿ 107 ರನ್ ಬಾರಿಸಿದ್ದಾರೆ ಹಾಗೂ 34 ವಿಕೆಟ್ ಪಡೆದುಕೊಂಡಿದ್ದಾರೆ.
  • ಕೃಣಾಲ್ ಪಾಂಡ್ಯ: ಹಾರ್ದಿಕ್ ಪಾಂಡ್ಯ ಅವರ ಸಹೋದರ ಆಗಿರುವಂತಹ ಇವರು ಕೂಡ ಆಲ್-ರೌಂಡರ್ ಎನ್ನುವಂತಹ ಕ್ಯಾಟಗರಿಯಲ್ಲಿ ಸಾಕಷ್ಟು ಗಮನಾರ್ಹ ಪ್ರದರ್ಶನವನ್ನು ನೀಡಿರುವಂತಹ ಅನುಭವವನ್ನು ಹೊಂದಿದ್ದಾರೆ. ಆಡಿರುವಂತಹ 111 ಟಿ 20 ಪಂದ್ಯಗಳಲ್ಲಿ 1647 ರನ್ ಬಾರಿಸಿ 117 ಉರುಳಿಸಿದ್ದಾರೆ. ಇದುವರೆಗೂ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡುವಂತಹ ಗ್ಯಾರಂಟಿ ಅವಕಾಶಗಳು ಸಿಕ್ಕಿಲ್ಲ ಆದರೆ ಮುಂದಿನ ದಿನಗಳಲ್ಲಿ ಅದರ ನಿರೀಕ್ಷೆಯಲ್ಲಿದ್ದಾರೆ.

Comments are closed.