Darshan Case:ಜೈಲಿನಲ್ಲಿ ಆರೋಗ್ಯವಾಗಿರುವ ಗಟ್ಟಿ ನಿರ್ಧಾರ ಮಾಡಿದ ದರ್ಶನ್- ಏನು ಮಾಡುತ್ತಿದ್ದಾರೆ ಗೊತ್ತೇ??

Darshan Case: ರೇಣುಕಾ ಸ್ವಾಮಿ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜುಲೈ 18ರವರೆಗೆ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮ್ಮ 17 ಸಹಚರರ ಜೊತೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು ಜೈಲಿನಿಂದ ಈಗಾಗಲೇ ದರ್ಶನ್ ರವರ ಬಗ್ಗೆ ಸಾಕಷ್ಟು ಸುದ್ದಿಗಳು ಕೇಳಿ ಬರ್ತಿದೆ. ಇನ್ನು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಈಗ ಏನು ಮಾಡೋದಕ್ಕೆ ಹೊರಟಿದ್ದಾರೆ ಎನ್ನುವಂತಹ ಸುದ್ದಿ ಕೂಡ ಜೈಲಿನಿಂದ ಕೇಳಿ ಬರ್ತಾ ಇದೆ.

ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೈಲಿನ ಊಟ ಹಿಡಿಸುತ್ತಿಲ್ಲ ಹಾಗೂ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನುವ ಕಾರಣಕ್ಕಾಗಿ ಮನೆಯ ಆಹಾರ ಬೇಕು ಹಾಗೂ ಮನೆಯ ಹಾಸಿಗೆ ಬೇಕು ಎನ್ನುವ ರಿಟ್ ಅರ್ಜಿಯನ್ನು ಕೋರ್ಟಿಗೆ ಸಲ್ಲಿಸಿದರು. ಆದರೆ ಕೋಲ್ಟ್ ಈ ಅರ್ಜಿಯನ್ನು ಜುಲೈ 18ರವರೆಗೆ ಮುಂದೂಡಿದ ಎಂಬುದಾಗಿ ತಿಳಿದು ಬಂದಿದ್ದು ಇದು ಕೂಡ ಅವರಿಗೆ ಬೇಸರವನ್ನ ಮೂಡಿಸಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಈ ರೀತಿಯ ಘಟನೆಗಳು ಅವರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಬಾರದು ಎನ್ನುವ ಕಾರಣಕ್ಕಾಗಿ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹೊಸ ವಿಚಾರದ ಮೊರೆ ಹೋಗಿದ್ದಾರೆ.

ಯೋಗದ ಮೊರೆ ಹೋದ ದರ್ಶನ್!

ಈಗಾಗಲೇ ಭೇದಿ ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುತ್ತಿರುವಂತಹ ದರ್ಶನ್ ರವರು ಜೈಲಿನಲ್ಲಿರುವ ಸಮಯವನ್ನು ಅಷ್ಟೊಂದು ಇಷ್ಟಪಡುತ್ತಿಲ್ಲ ಅಂತ ನಾವು ಈಗಾಗಲೇ ತಿಳಿದುಕೊಳ್ಳಬಹುದು. ಇನ್ನು ಈ ಸಂದರ್ಭದಲ್ಲಿ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಯೋಗದ ಮೊರೆ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಯೋಗಭ್ಯಾಸವನ್ನು ಮಾಡುವುದಕ್ಕೆ ಪ್ರಾರಂಭ ಮಾಡಿದ್ದಾರೆ ಎಂಬುದಾಗಿ ಜೈಲಿನ ಅಧಿಕಾರಿಗಳು ಕೂಡ ನೋಡಿದ್ದು ಅವರಿಗೂ ಕೂಡ ಇದು ನಿರಳತೆಯನ್ನು ಮೂಡಿಸಿದೆ. ಜೈಲಿನಲ್ಲಿ ಒಂಟಿಯಾಗಿ ಸಮಯವನ್ನು ಕಳೆಯುತ್ತಿರುವಂತಹ ದರ್ಶನ್ ರವರು ಜೈಲಿನ ಗ್ರಂಥಾಲಯದಿಂದ ಪುಸ್ತಕವನ್ನು ಪಡೆದುಕೊಂಡು ಓದುತ್ತಿದ್ದಾರಂತೆ.

ರೇಣುಕಾ ಸ್ವಾಮಿ ಪ್ರಕರಣದಲ್ಲಿ ಮುಂದೆ ಏನಾಗಬಹುದು ಎನ್ನುವಂತಹ ಚಿಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಕಾಡುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಸದ್ಯಕ್ಕೆ ಇರುವಂತಹ ನ್ಯಾಯಾಂಗ ಬಂಧನ ಜುಲೈ 18ರವರೆಗೆ ಇರಲಿದೆ ಆದರೆ ಅಲ್ಲಿಂದ ಮುಂದೆ ಯಾವ ತೀರ್ಪು ಬರಲಿದೆ ಎನ್ನುವುದನ್ನು ಕೂಡ ಕಾದು ನೋಡಬೇಕಾಗಿದೆ. ಸದ್ಯಕ್ಕಂತು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮಾಡಿರುವಂತಹ ಕೃತ್ಯಕ್ಕಾಗಿ ಜೈಲಿನಲ್ಲಿ ಪರಿತಪಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಇತ್ತೀಚಿಗೆ ಜೈಲಿಗೆ ಹೋಗಿ ಬಂದ ಪ್ರತಿಯೊಬ್ಬ ಅವರ ಸ್ನೇಹಿತರು ಕೂಡ ಈ ವಿಚಾರದ ಬಗ್ಗೆ ಗೊಂದಲ ಒಂದು ರೀತಿಯಲ್ಲಿ ಮಾತನಾಡಿದ್ದಾರೆ ಅನ್ನೋದು ತಿಳಿದುಬರುವ ವಿಚಾರ.

Comments are closed.