ಸಾಂತಾಲಿ ಸೀರೆಯುಟ್ಟು ಪ್ರಮಾಣ ವಚನ ಸ್ವೀಕಾರ ; ದ್ರೌಪದಿ ಮುರ್ಮ ತೊಟ್ಟ ಈ ಸೀರೆಯ ವಿಶೇಷತೆ ಏನು ಗೊತ್ತಾ!

ಇವರು ನಿಜಕ್ಕೂ ನಮ್ಮ ದೇಶಕ್ಕೆ ಹೆಮ್ಮೆ. ಬುಡಕಟ್ಟು ಜನಾಂಗದಲ್ಲಿ ಜನಿಸಿ ಇಂದು ಇಷ್ಟು ದೊಡ್ಡ ಹುದ್ದೆಯನ್ನು ಅಲಂಕರಿಸಿದ್ದಾರೆ ಎಂದರೆ ಸಾಧನೆ ಮಾಡುವುದಕ್ಕೆ ಯಾವ ಜಾತಿ ಧರ್ಮವೂ ಅಡ್ಡಬರುವುದಿಲ್ಲ ಎನ್ನುವುದನ್ನು ಸಾಬೀತು ಪಡಿಸುತ್ತದೆ. ಹೌದು, ಇದೀಗ ದೇಶದ ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮ ಆಯ್ಕೆಯಾಗಿದ್ದಾರೆ. ಇವರು ದೇಶದ ಮೊದಲ ಬುಡಕಟ್ಟು ಜನಾಂಗದ ರಾಷ್ಟ್ರಪತಿ ಹಾಗೂ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಿದ್ದಾರೆ.

ದ್ರೌಪದಿ ಮುರ್ಮ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಶ್ವೇತ ವರ್ಣದ. ನಮಮ್ ತಿರಂಗಾ ಧ್ವಜದ ಬಾರ್ಡರ್ ಇರುವ ಸೀರೆಯನ್ನ ಉಟ್ಟಿದ್ದರು. ಈ ಸೀರೆ ಸಾಂತಾಲಿ ಸೀರೆ. ಇಂದು ಬಹಳ ಟ್ರೆಂಡಿಂಗ್ ನಲ್ಲಿರುವ ಸೀರೆಯೂ ಹೌದು! ಹಾಗಾದರೆ ಈ ಸೀರೆಯ ವಿಶೇಷತೆಯೇನು ತಿಳಿಯೋಣ!

ಈ ಸೀರೆ ಒಡಿಸ್ಸಾದ ಸಾಂತಾಲಿ ಮಹಿಳೆಯರು ವಿಶೇಷ ಸಂದರ್ಭದಲ್ಲಿ ಬಳಸುವಂತದ್ದು. ಸಾಂತಾಲಿ ಸೀರೆಯನ್ನು ಅಸ್ಸಾಂ, ಛತ್ತೀಸ್‌ಘಡ್, ಜಾರ್ಖಂಡ್ , ಮಧ್ಯ ಪ್ರದೇಶ ಈ ಭಾಗಗಳ ಸಾಂಪ್ರದಾಯಿಕ ಸೀರೆ ಎಂದು ಪರಿಗಣಿಸಲಾಗಿದೆ. ಸಾಂಪ್ರದಾಯಿಕವಾದ ಈ ಸೀರೆಯಲ್ಲಿ 3 ಬಿಲ್ಲಿನ ಗುರುತುಗಳು ಇದ್ದು, ಇದು ಹೆಣ್ಣಿನ ಸ್ವಾವಲಂಬನೆಯ ಸಂಕೇತವಾಗಿದೆ. ಈಗಿನ ದಿನಗಳಲ್ಲಿ ಈ ಸೀರೆಯ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳಾನ್ನು ಮಾಡಲಾಗಿದೆ. ನವಿಲು, ಹೂಗಳು, ಬಾತುಕೋಳಿ ಮೊದಲಾದ ವಿನ್ಯಾಸವನ್ನು ಇದರಲ್ಲಿ ಕಾಣಬಹುದು.  ವಿಭಿನ್ನ ಕಲರ್‌ ಕಾಂಬಿನೇಷನ್‌ ಕೂಡ ಬಳಸಿ ಯುವತಿಯರನ್ನು ಆಕರ್ಷಿಸಸಲಾಗುತ್ತಿದೆ.

ಉತ್ತರ ಭಾರತದಲ್ಲಿ ಮಾತ್ರವಲ್ಲದೇ ಎಲ್ಲಾ ಕಡೆ ಸಾಂತಾಲಿ ಸೀರೆಯ ಬೇಡಿಕೆ ಹೆಚ್ಚಾಗಿದೆ.  ಇನ್ನು ಈ ಸೀರೆಯ ಬೆಲೆ ನೋಡುವುದಾದರೆ, ಸಾಂತಾಲಿ ಸೀರೆ ಕೇವಲ 500 ರುಪಾಯಿಯಿಂದ ಆರಂಭವಾಗುತ್ತದೆ.  ಎರಡು ಮೂರು ಸಾವಿರ ರೂಪಾಯಿಗಳಿಗೆ  ಉತ್ತಮ ಗುಣಮಟ್ಟದ ಸೀರೆ ಸಿಗುತ್ತದೆ. ಅತ್ಯಂತ ಸಿಂಪಲ್ ಆಗಿರುವ ಈ ಸೀರೆ ನೋಡುವುದಕ್ಕೆ ತುಂಬಾನೇ ಆಕರ್ಷಣೀಯವಾಗಿ ಕಾಣಿಸುತ್ತದೆ!

Leave A Reply

Your email address will not be published.