Film:ಮಹಾನಟಿ ಪ್ರಿಯಾಂಕಾ ರವರಿಗೆ ಹಾಗೂ ಮೇರು ನಟ ದರ್ಶನ್ ರವರಿಗೆ ಇದೆ ಹತ್ತಿರದ ಬಾಂಧವ್ಯ; ಏನು ಗೊತ್ತೇ??

ಕನ್ನಡ ಕಿರುತೆರೆಯ ವಿಚಾರಕ್ಕೆ ಬಂದರೆ ಜೀ ಕನ್ನಡ ವಿಶೇಷವಾದ ಸ್ಥಾನಮಾನವನ್ನು ಪ್ರೇಕ್ಷಕರಲ್ಲಿ ಹೊಂದಿದೆ ಹಾಗೂ ಇತ್ತೀಚಿಗಷ್ಟೇ ಮಹಾನಟಿ ರಿಯಾಲಿಟಿ ಶೋ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರನ್ನು ಸಂಪಾದನೆ ಮಾಡಿದ್ದು ಕೊನೆಗೂ ಈ ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ. ಈ ಕಾರ್ಯಕ್ರಮವನ್ನು ಪ್ರಿಯಾಂಕಾ ಅವರು ಗೆದ್ದಿದ್ದು, ವಿನ್ನರ್ ಆಗಿರುವಂತಹ ಪ್ರಿಯಾಂಕ ಅವರು ಬರೋಬ್ಬರಿ 15 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಗೆದ್ದಿದ್ದಾರೆ. ಎರಡನೇ ಸ್ಥಾನ ಪಡೆದುಕೊಂಡಿರುವಂತಹ ಧನ್ಯಶ್ರೀ 10 ಲಕ್ಷ ರೂಪಾಯಿಗಳ ಬಹುಮಾನ ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಪ್ರಿಯಾಂಕ ಅವರು ಬಹುತೇಕ ಎಲ್ಲಾ ವಿಭಾಗಗಳಲ್ಲಿಯೂ ಕೂಡ ಸೈ ಎನಿಸಿಕೊಳ್ಳುವ ಮೂಲಕ ಈ ಬಹುಮಾನವನ್ನು ಗೆದ್ದಿದ್ದಾರೆ ಎಂದು ಹೇಳಬಹುದು. ಡ್ಯಾನ್ಸ್ ಅಥವಾ ನಟನೆ ಯಾವುದೇ ವಿಭಾಗ ಆಗಿರಬಹುದು ಪ್ರಿಯಾಂಕಾ ಎಲ್ಲದರಲ್ಲೂ ಕೂಡ ತಮ್ಮ ಪ್ರತಿಭೆಯನ್ನು ತೋರಿಪಡಿಸಿ ಸಾಬೀತುಪಡಿಸುವ ಮೂಲಕ ಮೊದಲ ಬಹುಮಾನವನ್ನು ಗೆದ್ದಿದ್ದಾರೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಪ್ರಿಯಾಂಕ ಅವರಿಗೂ ಕೂಡ ದರ್ಶನ್ ರವರ ನೈಂಟಿದೆ ಅನ್ನೋದಾಗಿ ಕಾರ್ಯಕ್ರಮದ ವೇದಿಕೆ ಮೇಲೆ ತಿಳಿದು ಬಂದಿದೆ.

ಮಹಾ ನಟಿ ವಿನ್ನರ್ ಪ್ರಿಯಾಂಕ ಅವರಿಗೆ ಇದೇ ದರ್ಶನ್ ನಂಟು

ಪ್ರಿಯಾಂಕ ಅವರ ತಂದೆ ದರ್ಶನ್ ರವರ ಆಪ್ತ ಸ್ನೇಹಿತ ಎಂಬುದಾಗಿ ತಿಳಿದು ಬಂದಿದ್ದು, ಪ್ರಿಯಾಂಕ ಅವರು ಕೂಡ ಕಾರ್ಯಕ್ರಮಕ್ಕೆ ಬರುವುದಕ್ಕಿಂತ ಮುಂಚೆ ಅವರಿಗೆ ಮಾಹಿತಿಯನ್ನು ತಿಳಿಸಿ ಅವರ ಆಶೀರ್ವಾದವನ್ನು ಪಡೆದುಕೊಂಡು ಬಂದಿದ್ದೇನೆ ಎಂಬುದಾಗಿ ಕೂಡ ಹೇಳಿದ್ದಾರೆ. ಈ ವಿಚಾರವನ್ನು ಖುದ್ದಾಗಿ ಅವರೇ ವೇದಿಕೆ ಮೇಲೆ ತಿಳಿಸಿರೋದು. ಮಹಾನಟಿ ವೇದಿಕೆ ಮೇಲೆ ಪ್ರಿಯಾಂಕ ಅವರು ವಿನ್ನರ್ ಕಿರೀಟವನ್ನು ಧರಿಸಿರುವುದು ಪ್ರಿಯಾಂಕ ಅವರ ತಂದೆಯವರಿಗೂ ಕೂಡ ಹೆಮ್ಮೆಯನ್ನು ತರಿಸಿರುವುದು ವೇದಿಕೆ ಮೇಲೆ ಕಂಡುಬಂದಿದೆ.

ಇನ್ನು ಈ ಕಡೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ನ್ಯಾಯಾಂಗ ಬಂಧನ ಜುಲೈ 18ರವರೆಗೆ ಕೂಡ ಇದ್ದು ಅಲ್ಲಿಯತನಕ ದರ್ಶನ್ ರವರು ಜೈಲಿನಲ್ಲಿಯೇ ಇರಬೇಕಾಗಿರುತ್ತದೆ ಅನ್ನೋದನ್ನ ಕೋರ್ಟ್ ಕಡ್ಡಾಯಗೊಳಿಸಿದೆ. ದರ್ಶನ್ ರವರ ಮುಂದಿನ ಜೀವನ ಹೇಗಿರಬಹುದು ಅನ್ನೋದನ್ನ ಜುಲೈ 18ರ ತೀರ್ಪಿನ ನಂತರವೇ ನಾವು ಕಾದು ನೋಡಬೇಕಾಗಿದೆ. ‌ ಸದ್ಯ ಕಂತು ಈ ವಿಚಾರದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ಏನಾಗಬಹುದೇನೋ ಅಂತ ಕುತೂಹಲ ಕೂಡ ಅಭಿಮಾನಿಗಳು ಹಾಗೂ ದರ್ಶನ್ ರವರ ಆಪ್ತ ವಲಯದಲ್ಲಿ ಕೇಳಿ ಬರ್ತಾ ಇದೆ. ಏಕೆಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಡೇವಿಲ್ ಸಿನಿಮಾದ ಚಿತ್ರೀಕರಣಕ್ಕಾಗಿ ಕೂಡ ಹೋಗಬೇಕಾಗಿದ್ದು ಆ ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿದೆ ಎಂದು ಹೇಳಬಹುದಾಗಿದೆ. ಒಟ್ಟಾರೆಯಾಗಿ ಜುಲೈ 18ರಂದು ಹೊರಬರುವಂತಹ ತೀರ್ಪು ಸಾಕಷ್ಟು ಪ್ರಮುಖವಾಗಿದೆ ಅನ್ನೋದನ್ನ ನಾವಿಲ್ಲಿ ಗಮನಿಸಬೇಕಾಗುತ್ತದೆ.

Comments are closed.