Surprise: ರಿಸೆಪ್ಶನ್ ಗೆ ರೆಡಿಯಾಗಿ ಸ್ಟೇಜ್ ಗೆ ಹುಡುಗಿ ಬರುತ್ತಿದ್ದಂತೆ ಮದುಮಗ ಮಾಡಿದ್ದೇನು ಗೊತ್ತಾ? ಅಬ್ಬಾ ಎಂಥವರನ್ನಾದರೂ ಬೆರಗಾಗಿಸುತ್ತೇ ನೋಡಿ, ರಾತ್ರೋ ರಾತ್ರಿ ವೈರಲ್ ಆಯ್ತು ವಿಡಿಯೋ!

Surprise: ಇದೀಗ ಪ್ರತಿಯೊಂದು ವಿಚಾರದಲ್ಲೂ ವಿಭಿನ್ನತೆಯನ್ನು ಹುಡುಕತ್ತಾನೆ ಮನುಷ್ಯ. ಯಾವುದೇ ಸಮಾರಂಭಗಳಾಗಲಿ, ಕೆಲಗಳಾಗಲಿ ಅದರಲ್ಲಿ ತಾನು ಏನಾದರೂ ಭಿನ್ನವಾಗಿ ಮಾಡಬೇಕು. ಆ ಮೂಲಕ ತಾನು ಸ್ಪೇಶಲ್ ಎಂದು ನಿರೂಪಿಸಬೇಕು ಎಂದು ಬಯಸುತ್ತಾನೆ. ಇದಕ್ಕೆ ಮದುವೆ ಸಮಾರಂಭವೂ ಹೊರತಲ್ಲ. ಎಷ್ಟೋ ಜನರು ವಿಭಿನ್ನವಾಗಿ ಮದುವೆ ಆಗುವ ಮೂಲಕ ಸುದ್ದಿಯಾಗಿದ್ದಾರೆ. ಇಲ್ಲಿಯೂ ವರನೊಬ್ಬ ತಾನು ವರಿಸುವ ಹುಡುಗಿಯ ಭಾವಚಿತ್ರ ಬಿಡಿಸುವ ಮೂಲಕ ಫೇಮಸ್ ಆಗಿದ್ದಾನೆ.

ಮಧೂ-ವರರು ವಿವಾಹದ ದಿನದಂದು ಒಬ್ಬರಿಗೊಬ್ಬರು ಉಡುಗೊರೆ ನೀಡುವುದು ಸಹ ಅಷ್ಟೇ ಮುಖ್ಯವಾಗಿದೆ. ಈ ದಿನ ನೀಡುವ ಉಡುಗೊರೆ ಎಷ್ಟೇ ಸಣ್ಣದಾಗಿರಲಿ, ದೊಡ್ಡದಾಗಿರಲಿ ಅದು ನೆನಪಿನಲ್ಲಿ ಉಳಿಯುತ್ತದೆ.
ವರುಣ್ ಜೆರ್ಸಾನಿಯಾ ಎಂಬ ಮದುಮಗ ತಮ್ಮ ಇನ್ಸಟಾ ಖಾತೆಯಲ್ಲಿ ತಮ್ಮ ಮಡದಿಗೆ ನೀಡಿದ ಮೊದಲ ಉಡುಗೊರೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೇದಿಕೆಯಲ್ಲಿ ಆಕೆಯ ಮುಂದೆಯೇ ಆಕೆ ಚಿತ್ರ ಬರೆದು ವಧುವಿನ ಕೆನ್ನೆ ಕೆಂಪಗಾಗುವಂತೆ ಮಾಡಿದ್ದಾನೆ. ಮತ್ತು ಆಕೆಯ ಸಂತೋಷವನ್ನು ಇಮ್ಮಡಿಗೊಳಿಸಿದ್ದಾರೆ. ಒಬ್ಬಬ್ಬರು ತಮ್ಮ ಪತ್ನಿ ಖುಷಿ ಪಡಿಸುವ ಸಲುವಾಗಿ ನೃತ್ಯ ಮಾಡುತ್ತಾರೆ, ಹಾಡು ಹಾಡುತ್ತಾರೆ ಆದರೆ ನಾನು ಅವಳ ಪೇಂಟಿಂಗ್ ಮಾಡಿ ಅವಳಿಗೆ ಉಡುಗೊರೆ ನೀಡಿದ್ದೇನೆ ಎಂದು ವರುಣ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:UPI Payment Refund:ನೀವು ಯಾರಿಗಾದರೂ ತಪ್ಪಾಗಿ ಹಣ ಕಳುಹಿಸಿದರೆ, ವಾಪಸ್ಸು ಪಡೆಯುವುದು ಹೇಗೆ ಗೊತ್ತೇ?? ಸುಲಭವಾಗಿ ವಾಪಾಸ್ ಪಡೆಯಿರಿ.

Groom surprise to bride1 | Live Kannada News
ಕಲಾವಿದ ವರುಣ್ ಜರ್ಸಾನಿಯಾ ಪತ್ನಿ ಜೊತೆ

ಕಲಾವಿದ ವರುಣ್ ಜೆರ್ಸಾನಿಯಾ ತಮ್ಮ ವಧುವಿನ ಎದುರೇ ಆಕೆಯ ಸುಂದರ ಚಿತ್ರವನ್ನು ಬಿಡಿಸಿದ್ದಾರೆ. ಕಪ್ಪು ಬಣ್ಣದ ಕುಂಚದಲ್ಲಿ ಆಕೆಯ ಚಿತ್ರ ಬರೆದಿದ್ದಾರೆ. ಈತ ಎಷ್ಟು ನಿಪುಣ ಕಲಾವಿದ ಎಂದರೆ ಆಕೆಯ ಚಿತ್ರವನ್ನು ತಲೆಕೆಳಗಾಗಿ ಬಿಡಿಸಿದ್ದ. ವಧು ತನ್ನ ಪತಿಯ ಚಾಣಾಕ್ಷತೆಗೆ ನಿಬ್ಬೆರಗಾಗಿದ್ದಳು ಎನ್ನುವುದು ವರುಣ್ ಹಂಚಿಕೊಂಡ ವಿಡಿಯೋದಿಂದ ತಿಳಿದುಬರುತ್ತದೆ. ಇದನ್ನೂ ಓದಿ: Bank Account:ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ಖಾತೆ ಇದೆಯೇ?? RBI ನೀಡಿರುವ ಹೊಸ ಮಾರ್ಗಸೂಚಿ ನೋಡಿದರೆ, ಇಂದೇ ಅಕೌಂಟ್ ಕ್ಲೋಸ್ ಮಾಡ್ತೀರಾ!

ಚಿತ್ರ ಬಿಡಿಸಿದ ನಂತರ ತನ್ನ ಪತ್ನಿಯನ್ನು ಕರೆದ ವರುಣ್ ಆಕೆಯನ್ನು ಚುಂಬಿಸಿ ತನಗೆ ಆಕೆ ಎಷ್ಟು ಸ್ಪೆಶಲ್ ಹಾಗೂ ತಾನು ಆಕೆಯನ್ನು ಎಷ್ಟು ಪ್ರೀತಿಸುತ್ತೇನೆ ಎನ್ನುವುದನ್ನು ನಿರೂಪಿಸಿದ್ದಾರೆ. ವರುಣ್ ಅವರು ಹಂಚಿಕೊಂಡ ವೀಡಿಯೋಗೆ ನೆಟ್ಟಿಗರು ಸಹ ಅಷ್ಟೇ ಪ್ರೀತಿಯಿಂದ ಕಮಿಂಟ್ ಮಾಡಿದ್ದಾರೆ. ನೀವು ನಿಮ್ಮ ಮದುವೆ ಆಗುವ ಹುಡುಗಿಗೆ ನೀಡಿದ ಉಡುಗೊರೆ ಬಹಳ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇನ್ನು ಕೆಲವು ನೆಟ್ಟಿಗರು ವರುಣ್ ಅವರ ಬುದ್ದಿವಂತಿಕೆಯ ಲೆವಲ್ಲೇ ಬೇರೆ ಎಂದು ಕಮಿಂಟ್ ಮಾಡಿದ್ದಾರೆ.

Comments are closed.