Relationship: ಹಾಸಿಗೆಯ ವಿಚಾರದದಲ್ಲಿ ಗಂಡ ಹಾಗೂ ಹೆಂಡತಿಯ ನಡುವೆ ಫುಲ್ ಜಗಳ: ಕೊನೆಗೆ ಕಬ್ಬಡ್ಡಿ ಆಡದೆ ಏನು ಮಾಡಿಕೊಂಡಿದ್ದಾರೆ ಗೊತ್ತೇ?

Relationship: ಸ್ನೇಹಿತರೆ, ಸಂಬಂಧ ಯಾವುದೇ ಇರಲಿ, ಅಲ್ಲಿ ಪ್ರೀತಿ ಮತ್ತು ವಿಶ್ವಾಸ ಇದ್ರೆ ಆ ಸಂಬಂಧದಲಿ ಶಾಶ್ವತ ಸಂತೋಷವಿರುತ್ತದೆ. ಅದರಲ್ಲೂ ವೈವಾಹಿಕ ವಿಷಯಗಳಲ್ಲಿ, ದಂಪತಿಗಳಿಬ್ಬರೂ ತುಂಬಾ ಅನ್ಯೋನ್ಯವಾಗಿರಬೇಕು. ಎಲ್ಲದರಲ್ಲೂ ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳಬೇಕು. ಪರಸ್ಪರ ಅರ್ಥ ಮಾಡಿಕೊಳ್ಳಬೇಕು.  ಪ್ರತಿ ಕ್ಷಣವನ್ನೂ ಒಟ್ಟಾಗಿ ಆನಂದಿಸಬೇಕು. ಪತಿ ಪತ್ನಿಯರ ನಡುವೆ, ಜಗಳ ಎನ್ನುವುದು ಸಾಮಾನ್ಯ. ಎಷ್ಟೇ ಚೆನ್ನಾಗಿದ್ದರೂ ಕೆಲವೊಮ್ಮೆ ಸಣ್ಣ ಪುಟ್ಟ ಜಗಳಗಳು ನಡೆಯುತ್ತಲೇ ಇರುತ್ತವೆ. ಹಾಗೆ ಜಗಳ ಇದ್ದರೆ ಒಂತರಾ ಚೆನ್ನಾಗಿಯೂ ಇರುತ್ತೆ ಬಿಡಿ. ಆದರೆ ಅದೇ ಜಗಳ ದೊಡ್ದದಾದರೆ ಅದರಿಂದ ಸಮಸ್ಯೆಗಳು ಸೃಷ್ಟಿಯಾಗೋದು ಖಂಡಿತ.

ಗಂಡ ಹೆಂದತಿ ಜಗಳ ಉಂಡು ಮಲಗುವ ತನಕ ಎನ್ನುವಂತೆಯೇ ಇರಬೇಕು. ಆದರೆ ಕೆಲವೊಮ್ಮೆ ಹೀಗಾಗುತ್ತೆ ನೋಡಿ. ಮಧ್ಯರಾತ್ರಿ ಬೆಡ್ ರೂಮ್ ನಲ್ಲಿ ಮಲಗುವ ಮಂವದ ಬಗ್ಗೆ ಪತಿ ಪತ್ನಿ ನಡುವೆ ಗಲಾಟೆ ಆಗಿತ್ತು.  ಗಲಾಟೆ ತಾರಕಕ್ಕೆ ಹೋಯಿತು. ಆಗ ಪತಿ ಹೆಂಡತಿಗೆ ಹೊಡೆದಿದ್ದಾನೆ. ಆಕೆ ತಡ ಮಾಡಲಿಲ್ಲ. ಕೂಡಲ್ ಪೋಲಿಸ್ ಸ್ಟೇಶನ್ ಮೆಟ್ಟಿಲೇರಿದ್ದಾಳೆ. ಆತನನ್ನು ಪೋಲಿಸರು ಬಂಧಿಸಿದ್ದಾರೆ. ಇಬ್ಬರು ಗಂಡ ಹೆಂಡತಿ ಅಲ್ವಾ? ಅಂದಮೇಲೆ ಇಬ್ಬರ ನಡುವೆ ಮಂಚಕ್ಕಾಗಿ ಜಗಳ ಯಾಕೆ ಎನ್ನುವ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಇದಕ್ಕೂ ಕಾರಣ ಇದೆ ನೋಡಿ. ಇದನ್ನೂ ಓದಿ: Relationship: ರಜಾ ಇದೆ ಎಂದು ಭಾನುವಾರದಂದು ಪತಿ-ಪತ್ನಿ ಒಂದಾಗಲು ಪ್ರಯತ್ನಿಸಿದರೆ ಆಗುವ ಅಪಾಯ ತಪ್ಪಿಸುವುದಕ್ಕೆ ದೇವರು ಬರಲ್ಲ ಯಾಕೆ ಗೊತ್ತೇ?

ಮಹಾರಾಷ್ಟ್ರದ ರಾಜಧಾನಿ ಮುಂಬೈನ ಬೋರಿವ್ಲಿ ಪ್ರದೇಶದಲ್ಲಿ ವಾಸಿಸುವ ಈ ದಂಪತಿಗಳು ಕಳೆದ ಕೆಲವು ವರ್ಷಗಳಿಂದ ಜಗಳವಾಡುತ್ತಿದ್ದರು. ಈ ಜಗಳ ದ್ವೇಷಕ್ಕೂ ತಿರುಗಿತು. ಕೊನೆಗೆ ಪತಿಯ ಕಾಟ ಸಹಿಸಲಾಗದೇ ಪತ್ನಿ ಕಳೆದ ವರ್ಷ ವಿಚ್ಛೇದನ ಕೇಳಿದ್ದಳು. ಆದರೆ, ಪತಿ ಇದಕ್ಕೆ ಒಪ್ಪಲಿಲ್ಲ.

ಗಂಡ ಹೆಂಡತಿ ಇಬ್ಬರೂ ಒಪ್ಪಿದರೆ ಮಾತ್ರ ಕೋರ್ಟ್ ವಿಚ್ಛೇದನ ನೀಡುತ್ತದೆ. ಆದರೆ, ಪತಿ ಒಪ್ಪದೇ ಇದ್ದ ಕಾರಣ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರು. ಇವರ ನಡುವೆ ಗಂಡ ಹೆಂಡತಿ ನಡುವೆ ನಡೆಯಬೇಕಾದ ಯಾವ ವಿಷಯಗಳೂ ನಡೆಯುತ್ತಿರಲಿಲ್ಲ ಮನೆಯಲ್ಲಿ ವಸ್ತುಗಳು, ಕೆಲಸಗಳನ್ನು ಸಮಾನವಾಗಿ ಹಂಚಿಕೊಂಡರು. ಟಿವಿ ಮತ್ತು ಹಾಸಿಗೆಯಂತಹ ಬೇರ್ಪಡಿಸಲಾಗದ ವಿಷಯಗಳನ್ನು ಟೈಮಿಂಗ್ ಮೇಲೆ ಇಬ್ಬರೂ ಬಳಸಿಕೊಳ್ಳಲು ಶುರು ಮಾಡಿದರು. ಇದನ್ನೂ ಓದಿ: Politics: ಕೊನೆಗೂ ದೇಶದ ಈ ಪರಿಸ್ಥಿತಿಗೆ ಅಲ್ಲಾಹ್ ನೇ ಕಾರಣ ಅಂದು ಬಿಟ್ರಲ್ಲ ಸಚಿವರು? ಈಗ ಎಲ್ಲಿದೆ ಮಿತ್ರ ರಾಷ್ಟ್ರಗಳ ಪಡೆ?!

ಹೀಗಿರುವಾಗ ಕಳೆದ ಶನಿವಾರ (ಜನವರಿ 28) ರಾತ್ರಿ ಒಂದು ಗಂಟೆ ಹೊತ್ತಿಗೆ ಹಾಸಿಗೆ ಮೇಲೆ ಮಲಗಿದ್ದ ಪತ್ನಿಯನ್ನು ಪತಿ ಜೋರಾಗಿ ಕೂಗಿ ಎಬ್ಬಿಸಿದ್ದಾನೆ. ತನಗೆ ಕಷ್ಟವಾಗುತ್ತಿದೆ. ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಳ್ಳಲು ಬೆಡ್ ಬಿಟ್ಟುಕೊಡಬೇಕು ಎಂದು ಹೆಂಡತಿಯನ್ನು ಕೇಳಿದನು. ಅವಳು ಅದಕ್ಕೆ ಒಪ್ಪಲಿಲ್ಲ. ಇದು ನನ ಟೈಮ್ ನಾನು ಹಾಸಿಗೆಯಿಂದ ಇಳಿಯುವುದಿಲ್ಲ ಎಂದು  ಹೇಳಿದ್ದಾಳೆ.

ಇದೇ ಕಾರಣಕ್ಕೆ ಒಬ್ಬರ ನಡುವೆ ಜೋರು ಜೋರಾಗಿ ಜಗಳವಾಗಿದೆ. ಸಿಟ್ಟಿನಲ್ಲಿ ಆತ ಪತ್ನಿಯ ಕೆನೆಗೆ ಭಾರಿಸಿದ್ದಾನೆ. ಅಷ್ಟೇ.. ಆತನ ಏಟು ಕಿವಿಗೆ ತಗುಲಿದೆ. ಪತ್ನಿ ತನ್ನ ಸ್ನೇಹಿತೆಯ ಸಹಾಯದಿಂದ ಆಸ್ಪತ್ರೆಗೆ ತೆರಳಿದ್ದಾಳೆ ಅವಳನ್ನು ಪರೀಕ್ಷಿಸಿದ ವೈದ್ಯರು ಕಿವಿಯ ಒಳಭಾಗಕ್ಕೆ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ನಂತರ ಆಕೆ ಅಲ್ಲಿಂದ ನೇರವಾಗಿ ಬೋರಿವ್ಲಿ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ  ಪೊಲೀಸರು ಆಕೆಯ ಪತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 325 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ. ಈ ಘಟನೆಯನ್ನು ಕೇಳಿದ ನೆಟ್ಟಿಗರು  ಕಮೆಂಟ್ ಮಾಡಿದ್ದಾರೆ. ಆತನ ಮೇಲೆ ಸಹಾನುಭೂತಿ ತೋರಿಸಿದ್ದಾರೆ. ಒಟ್ತಿನಲ್ಲಿ ಗಂದ ಹೆಂಡತಿ ಹಾಸಿಗೆಗಾಗಿ ಜಗಳವಾಡಿ ದೂರವಾಗಿದ್ದಾರೆ.  

Comments are closed.