Hindu god photo on beer bottle: ಬಿಯರ್ ಬಾಟಲಿಯ ಮೇಲೆ ಹಿಂದೂ ದೇವರ ಚಿತ್ರ ಮುದ್ರಿಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದ ಮೂರ್ಖ ಸಂಸ್ಥೆ; ಉತ್ಪನ್ನ ಮಾರಾಟ ನಿಲ್ಲಿಸದಿದ್ದರೆ ನಡೇಯೋದೆ ಬೇರೆ, ಹಿಂದೂ ಸಂಘಟನೆಗಳ ವಾರ್ನಿಂಗ್!

Hindu god photo on beer bottle: ಜಗತ್ತಿನಲ್ಲಿ ಎಲ್ಲವನ್ನು ಸಹಿಸುವವನು ಹಿಂದು. ಹಾಗಾಗಿಯೇ ಹಿಂದೂಗಳ ಮೇಲೆ ನಡೆದಷ್ಟು ದೌರ್ಜನ್ಯ ಮತ್ತೆ ಯಾರ ಮೇಲೆಯೂ ನಡೆದಿಲ್ಲ. ಹಿಂದೂಗಳು ಏನೆ ಮಾಡಿದರೂ ಸುಮ್ಮನಿರುತ್ತಾರೆ, ಯಾವುದೇ ಪ್ರತಿರೋಧ ತೋರುವುದಿಲ್ಲ ಎನ್ನುವ ಕಾರಣಕ್ಕಾಗಿ ಈ ರೀತಿ ಮಾಡಲಾಗುತ್ತಿತ್ತು. ಆದರೆ ಈಗ ಹಿಂದೂಗಳು ಜಾಗೃತರಾಗಿದ್ದಾರೆ. ದೌರ್ಜನ್ಯ ನಡೆಸುವ ಯೋಚನೆ ಮಾಡಿದರೂ ಹಿಂದೂಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ. ಆದರೂ ಕೆಲವೊಂದು ವಿದೇಶಿ ಕಂಪನಿಗಳು ತಮ್ಮ ಚಾಳಿಯನ್ನು ಬಿಟ್ಟಂತೆ ಕಾಣುವುದಿಲ್ಲ. ಇಲ್ಲೊಂದು ಮದ್ಯ ತಯಾರಿಸುವ ಕಂಪನಿ ತನ್ನ ಮದ್ಯದ ಬಾಟಲಿ ಮೇಲೆ ಲಕ್ಷ್ಮಿದೇವಿಯ ಭಾವಚಿತ್ರ ಮುದ್ರಿಸಿದೆ. ಈ ಮೂಲಕ ಹಿಂದೂಗಳ ಅವಹೇಳನ ಮಾಡಲು ಮುಂದಾಗಿದೆ.

ಬ್ರೀಟನ್ನಲ್ಲಿ ಬ್ರೂಯಿಂಗ್ ಕಂಪನಿಯ ಬಿಯರ್ ಬಾಟಲಿಗಳ ಬಗ್ಗೆ ಗದ್ದಲ ಪ್ರಾರಂಭವಾಗಿದೆ. ಬಿಯೇನ್ ಮಂಗರ್ ಎನ್ನುವ ಹೆಸರಿನ ಈ ಕಂಪನಿಯ ತನ್ನ ಬಿಯರ್ ಬಾಟಲಿಗಳ ಮೇಲೆ ಲಕ್ಷ್ಮಿದೇವಿಯ ಭಾವಚಿತ್ರ ಮುದ್ರಿಸಿದೆ. ಸದ್ಯ ಈ ವಿಚಾರ ಮುನ್ನೆಲೆಗೆ ಬಂದಿದ್ದು, ಸಾಕಷ್ಟು ಪ್ರತಿರೋಧ ವ್ಯಕ್ತವಾಗಿದೆ. ಕಂಪನಿಯು ತನ್ನ ಈ ಉತ್ಪನ್ನವನ್ನು ಹಿಂದಕ್ಕೆ ಪಡೆದು ಲಕ್ಷ್ಮಿದೇವಿಯ ಭಾವಚಿತ್ರವನ್ನು ತೆಗೆಯದಿದ್ದರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಹಿಂದೂ ಸಂಘಟನೆಗಳು ನೀಡಿದೆ. ಬ್ರಿಟನ್ನಲ್ಲಿರುವ ಹಿಂದೂಗಳು ಮತ್ತು ಭಾರತೀಯರಿಗೆ ಸಂಬಂಧಿಸಿದ ಕುರಿತು ಧ್ವನಿ ಎತ್ತುವ ಸಾಮಾಜಿಕ ವೇದಿಕೆಯಾದ ಇನ್ಸೈಟ್ ಯುಕೆ ಈ ಬಗ್ಗೆ ಮಾಹಿತಿ ನೀಡಿದೆ.

ಮದ್ಯವನ್ನು ತಯಾರಿಸುವ ಬಿಯೇನ್ ಮಂಗರ್ ಕಂಪನಿ ವಿರುದ್ಧ ಇನ್ಸೈಟ್ ಯುಕೆ ಸಂಘಟನೆ ಪ್ರತಿಭಟನೆ ನಡೆಸಿದೆ. ಕಂಪನಿಯು ಹಿಂದೂಗಳ ಭಾವನೆಗೆ ಧಕ್ಕೆ ತರುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದೆ.

ಬಿಯರ್ ಬಾಟಲಿಯ ಮೇಲೆ ಹಿಂದೂ ದೇವರ ಫೋಟೊ ಹಾಕುವುದನ್ನು ಬ್ರಿಟನ್ನಲ್ಲಿ ಇರುವ ಹಿಂದೂ ಸಮುದಾಯವೂ ವಿರೋಧಿಸಿದೆ. ಬಿಯರ್ ಬಾಟಲಿ ಮೇಲಿನ ವಿವಾದಾತ್ಮಕ ಹಾಗೂ ಹಿಂದೂಗಳ ಭಾವನೆಗೆ ಧಕ್ಕೆ ತರುವ ಫೋಟೋವನ್ನು ತೆಗೆಯುವಂತೆ ಆಗ್ರಹಿಸಿದೆ. ಒಂದು ವೇಳೆ ಫೋಟೋವನ್ನು ತೆಗೆಯದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಹಿಂದೂಗಳ ಭಾವನೆಗೆ ಧಕ್ಕೆ ತರಲು ವಿದೇಶಿ ಕಂಪನಿಗಳು ಪ್ರಯತ್ನ ನಡೆಸಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ ಈ ರೀತಿಯ ಅನೇಕ ಪ್ರಕರಣಗಳು ನಡೆದಿವೆ. ೨೦೨೧ರಲ್ಲಿ ಪ್ರೆಂಚ್ ಬ್ರೂಯಿಂಗ್ ಕಂಪನಿಯಾದ ಗ್ರಾನೇಡ್-ಸುರ್ ಗ್ಯಾರೋನ್ ಮಾರುಕಟ್ಟೆಯಲ್ಲಿ ಶಿವನ ಭಾವಚಿತ್ರವಿರುವ ಬಿಯರ್ ಬಾಟಲಿ ಬಿಡುಗಡೆ ಮಾಡಿತ್ತು. ಆಗಲೂ ದೊಡ್ಡ ಪ್ರಮಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಹಿಂದೂಗಳ ಆಕ್ರೋಶಕ್ಕೆ ಮಣಿದ ಕಂಪನಿ ಆ ಫೋಟೊವನ್ನು ತೆಗೆದುಹಾಕಿತ್ತು.

Comments are closed.