India-china-clash:ಗಡಿಯಲ್ಲಿ ಚೀನಾ ಸೈನಿಕರ ತಗಾದೆ; ಭಾರತ ಕೊಟ್ಟಿತು ದಿಟ್ಟ ಉತ್ತರಕ್ಕೆ ಪಲಾಯನ ಮಾಡಿದ ಕೆಂಪು ಸೈನಿಕರು; ಈ ಗಡಿ ವಿವಾದಕ್ಕೆ ಕಾರಣವಾದರೂ ಏನು?

India-china-clash: ಭಾರತ ಈಗ ವಿಶ್ವದ 5 ಪ್ರಭಲ ಆರ್ಥಿಕ ಶಕ್ತಿ ಹೊಂದಿರುವ ರಾಷ್ಟ್ರಗಳಲ್ಲಿ ಬಂದು ನಿಂತಿದೆ. ಭಾರತದಲ್ಲಿ ಸೈನ್ಯವನ್ನು ಸಾಕಷ್ಟು ಬಲಪಡಿಸಲಾಗಿದೆ. ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಗಳನ್ನು ಒದಗಿಸಲಾಗಿದೆ. ಅತ್ಯಾಧುನಿಕ ಹೆಲಿಕಾಪ್ಟರ್, ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೂಲಕ ಹಿಂದೆಂದಿಗಿಂತಲೂ ಸೈನ್ಯಕ್ಕೆ ಶಕ್ತಿ ತುಂಬಿದೆ ಕೇಂದ್ರ ಸರ್ಕಾರ. ಅಲ್ಲದೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಪ್ರತಿವರ್ಷ ದೀಪಾವಳಿ ಹಬ್ಬವನ್ನು ಸೈನಿಕರ ಜೊತೆ ಆಚರಿಸುವ ಮೂಲಕ ಸೈನಿಕರಿಗೆ ಮನೋಸ್ಥೈರ್ಯ ತುಂಬುತ್ತಿದ್ದಾರೆ. ನಮ್ಮ ಸೈನಿಕರ ಶಕ್ತಿಯನ್ನು ಅರಿತೂ ಚೀನಾ ಆಗಾಗ ಭಾರತದ ಗಡಿ ಪ್ರದೇಶದಲ್ಲಿ ಜಗಳ ಮಾಡುತ್ತಲೇ ಇರುತ್ತದೆ. ಇದಕ್ಕೆ ಸೈನಿಕರು ಸಹ ದಿಟ್ಟವಾಗಿ ಉತ್ತರಿಸಿ ಹಿಮ್ಮೆಟ್ಟಿಸುತ್ತಿದ್ದಾರೆ.

ಚೀನಾವು ಯಾವ ಯಾವ ದೇಶಗಳೊಂದಿಗೆ ಗಡಿಪ್ರದೇಶಗಳನ್ನು ಹಂಚಿಕೊಂಡಿದೆಯೋ ಆ ಎಲ್ಲ ದೇಶಗಳ ಜೊತೆ ವಿವಾದವನ್ನು ಸಹ ಹೊಂದಿದೆ. ಪದೇ ಪದೇ ತನ್ನ ಸೈನಿಕರ ಮೂಲಕ ಕಿರಿಕಿರಿ ಮಾಡಿಸುತ್ತ ಇರುತ್ತದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ ತವಾಂಗ್ ಪ್ರಾಂತ್ಯವನ್ನು ಕಬಳಿಸುವ ಉದ್ದೇಶದಿಂದ ನಿನ್ನೆ ಅಲ್ಲಿ ತನ್ನ ಕಿರಿಕ್ ಮಾಡಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿದೆ.
ಅರುಣಾಚಲ ಪ್ರದೇಶದಲ್ಲಿ ಭಾರತವು ಸಾರ್ವಭೌಮತ್ವ ಹೊಂದಿರುವದನ್ನು ವಿಶ್ವವೇ ಒಪ್ಪಿಕೊಂಡರೂ ಚೀನಾಕ್ಕೆ ಮಾತ್ರ ಯಾಕೋ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ಅರುಣಾಚಲ ಪ್ರದೇಶದ ಜಾಗವು ತಮ್ಮದು ಎಂದು ಆಗಾಗ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಈಗ ತವಾಂಗ್ ಪ್ರದೇಶವನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸಿ ಮುಖಭಂಗ ಅನುಭವಿಸಿದೆ. ಇದನ್ನೂ ಓದಿ: Agriculture Loan:ರೈತರಿಗೆ ಸಾಲ ನೀಡಲು ಬ್ಯಾಂಕ್ ಗಳ ಡ್ರಾಮಾ; ಸರ್ಕಾರಿ ಸಬ್ಸಿಡಿ ಯೋಜನೆಗಳು ಮಣ್ಣುಪಾಲು; ರೈತರಿಗೆ ಯಾಕೆ ತಲುಪುತ್ತಿಲ್ಲ ಸರ್ಕಾರಿ ಯೋಜನೆ?

ಭಾರತದ ಈಶಾನ್ಯ ರಾಜ್ಯಗಳಲ್ಲಿ ಅರುಣಾಚಲ ಪ್ರದೇಶ ದೊಡ್ಡ ರಾಜ್ಯವಾಗಿದೆ. ಟಿಬೇಟ್, ಭೂತಾನ್, ಮಯನ್ಮಾರ್ ಜೊತೆ ಈ ರಾಜ್ಯ ಗಡಿಯನ್ನು ಹಂಚಿಕೊಂಡಿದೆ. ಈಶಾನ್ಯ ಭಾರತದ ಪಾಲಿಗೆ ಅರುಣಾಚಲ ಪ್ರದೇಶವು ರಕ್ಷಣಾ ಕವಚದಂತೆ ಇದೆ. ಟಿಬೇಟ್, ಬ್ರಹ್ಮಪುತ್ರಾ ಕಣಿವೆಯಲ್ಲಿರುವುದರಿಂದ ತವಾಂಗ್ ಪ್ರದೇಶಕ್ಕೆ ಭಾರೀ ಮಹತ್ವವಿದೆ. ಈ ತವಾಂಗ್ ಮೇಲೆ ಹಿಡಿತ ಸಾಧಿಸಿ ಈ ಮೂಲಕ ಈಶಾನ್ಯ ಭಾರತದ ರಾಜ್ಯಗಳನ್ನು ವಶಪಡಿಸಿಕೊಳ್ಳುವುದು ಚೀನಾದ ತಂತ್ರಗಾರಿಕೆಯಾಗಿದೆ. ಅರುಣಾಚಲ ಪ್ರದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೆ ಭೂತಾನ್ ದೇಶಕ್ಕೆ ನುಗ್ಗುವುದು ಚೀನಾಗೆ ಸುಲಭವಾಗಲಿದೆ. ಟಿಬೇಟ್ನಲ್ಲಿ ಬೌದ್ದರು ಬಹುಸಂಖ್ಯಾತರಾಗಿದ್ದು, ತವಾಂಗ್ನಲ್ಲಿ ಬೌದ್ಧ ಮಂದಿರವಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಏಷ್ಯಾದಲ್ಲಿ ಭಾರತವು ಬಲಿಷ್ಟವಾಗಿ ಬೆಳೆಯುತ್ತಿರುವುದನ್ನು ಚೀನಾ ಸಹಿಸಿಕೊಳ್ಳುತ್ತಿಲ್ಲ. ತನಗೆ ಯಾರೂ ಕೂಡ ಪೈಪೋಟಿದಾರರು ಇರಲೇಬಾರದು ಎನ್ನುವುದು ಚೀನಾದ ಉದ್ದೇಶವಾಗಿದೆ. ಹಾಗಾಗಿಯೇ ಆಗಾಗ ಕಿರಿಕ್ ಮಾಡುತ್ತಲೇ ಇರುತ್ತದೆ.

Comments are closed.