Jadeja comeback:ವರ್ಷ ಆದ್ಮೇಲೆ ವಾಪಾಸ್ ಬಂದ ಜಡೆದ, ರಣಜಿ ಪಂದ್ಯದಲ್ಲಿಯೇ ದೊಡ್ಡದಾಗಿ ಆಸ್ಟ್ರೇಲಿಯಾಗೆ ಸಿಗ್ನಲ್ ಕೊಟ್ಟಿದ್ದು ಹೇಗಿತ್ತು ಗೊತ್ತೇ?

Jadeja comeback: ಭಾರತದಲ್ಲಿ ಕ್ರಿಕೆಟ್ಗೆ ಇನ್ನಿಲ್ಲದ ಕ್ರೇಜ್ ಇದೆ. ಅದಕ್ಕಾಗಿಯೇ ಎಷ್ಟೋ ಜನ ಯುವಕರು, ವಿದ್ಯಾರ್ಥಿಗಳು ಕ್ರಿಕೆಟ್ ನತ್ತ ಒಲವು ತೋರಿಸುತ್ತಿದ್ದಾರೆ. ಭಾರತ ತಂಡಕ್ಕೆ ಆಯ್ಕೆಯಾಗಬೇಕು ಎಂದರೆ ಹಂತ ಹಂತವಾಗಿ ಆಟ ಆಡಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಎಂದರೆ ರಣಜಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಭಾರತ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ. ಆದರೆ ಭಾರತ ತಂಡದಲ್ಲಿ ಆಟವಾಡಿದ್ದ ರವೀಂದ್ರ ಜಡೇಜ ಅವರು ಇದೀಗ ರಣಜಿ ಆಟದಲ್ಲಿಯೂ ಮಿಂಚಿದ್ದಾರೆ.

ಹೌದು, ಚೆನ್ನೈನಲ್ಲಿ ನಡೆಯುತ್ತಿರುವ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ರವೀಂದ್ರ ಜಡೇಜ ಅವರು ೭ ವಿಕೇಟ್ಗಳನ್ನು ಉರುಳಿಸುವ ಮೂಲಕ ಮಿಂಚಿದ್ದಾರೆ.ಸೌರಾಷ್ಟ್ರ ತಂಡದ ಪರವಾಗಿ ರವೀಂದ್ರ ಜಡೇಜ ಅವರು ಆಟವಾಡುತ್ತಿದ್ದು, ಆ ತಂಡದ ನಾಯಕನ ಸ್ಥಾನವನ್ನು ವಹಿಸಿಕೊಂಡಿದ್ದಾರೆ. ತಮಿಳುನಾಡು ಹಾಗೂ ಸೌರಾಷ್ಟ್ರ ನಡುವೆ ನಡೆದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ ಒಂದು ವಿಕೇಟ್ ಮಾತ್ರ ಪಡೆದಿದ್ದರು ರವೀಂದ್ರ ಜಡೇಜ. ಆದರೆ ಎರಡನೇ ಇನ್ನಿಂಗ್ಸ್ ವೇಳೆಗೆ ಫಾರ್ಮ್ಗೆ ಮರಳಿದ ರವೀಂದ್ರ ಜಡೇಜ ಅವರು ೧೭.೧ ಓವರ್ ಮಾಡಿ ೭ ವಿಕೇಟ್ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: Kranti Collection: ಕ್ರಾಂತಿ ಚಿತ್ರಕ್ಕೆ ಮೊದಲ ದಿನವೇ ಮೋಸ ! ರೊಚ್ಚಿಗೆದ್ದ ಅಭಿಮಾನಿಗಳು ಮಾಡಿದ್ದೇನು ? ಡಿ ಬಾಸ್ ಶಾಕ್!

ರವೀಂದ್ರ ಜಡೇಜ ಅವರ ಬೌಲಿಂಗ್ಗೆ ಆಟ ಆಡುವಲ್ಲಿ ತಮಿಳುನಾಡು ತಂಡ ವಿಫಲವಾಯಿತು. ಇದರಿಂದಾಗಿ ತಮಿಳುನಾಡು ತಂಡವು ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ ೧೩೩ ರನ್ ಗಳಿಸಲು ಮಾತ್ರ ಶಕ್ಯವಾಯಿತು. ತಮಿಳುನಾಡು ತಂಡವು ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ್ದರಿಂದ ಒಟ್ಟು ೨೬೫ರನ್ಗಳನ್ನು ಗಳಿಸಿಕೊಂಡಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಸೌರಾಷ್ಟ್ರ ತಂಡವು ೪ ರನ್ ಗಳಿಸುವಷ್ಟರಲ್ಲಿ ಒಂದು ವಿಕೇಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ಸಂಕಷ್ಟದಿಂದ ಯಾವ ಆಟಗಾರ ಪಾರು ಮಾಡುತ್ತಾನೆ ಎಂದು ಕಾದು ನೋಡಬೇಕಾಗಿದೆ. ಇದನ್ನೂ ಓದಿ: Darshan Talk in Interview: ಮತ್ತೊಮ್ಮೆ ಬಳಸಬಾರದ ಪದ ಬಳಸಿದ ದರ್ಶನ್, ಆದರೂ ಖಡಕ್ ಆಗಿತ್ತು ಎಂದ ಫ್ಯಾನ್ಸ್. ಗಾಂಧಿ ನಗರದವರಿಗೆ ಎಚ್ಚರಿಕೆ ಕೊಟ್ಟು ಹೇಳಿದ್ದೇನು ಗೊತ್ತೇ??

ಫೆ.೯ರಿಂದ ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಘೋಷಿಸಲಾದ ಆಟಗಾರರ ಪಟ್ಟಿಯಲ್ಲಿ ರವೀಂದ್ರ ಜಡೇಜ ಅವರ ಹೆಸರೂ ಇದೆ.೨೦೨೨ರ ಏಷ್ಯ ಕಪ್ ಟೂರ್ನಿಯಲ್ಲಿ ಗಾಯಗೊಂಡ ನಂತರ ರವೀಂದ್ರ ಜಡೇಜ ಅವರು ಕ್ರಿಕೆಟ್ನಿಂದ ದೂರವೇ ಇದ್ದರು. ಆದರೆ ಆಟ ಆಡುವ ಆಸಕ್ತಿಯನ್ನು ಮಾತ್ರ ಕಳೆದುಕೊಂಡಿರಲಿಲ್ಲ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಬೇಕು ಎಂದು ನಿನ್ನ ಫಿಟ್ನೆಸ್ ಸಾಭೀತು ಪಡಿಸಬೇಕು ಎಂದು ಬಿಸಿಸಿಐ ರವೀಂದ್ರ ಜಡೇಜ ಅವರಿಗೆ ಸೂಚನೆ ನೀಡಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ರವೀಂದ್ರ ಜಡೇಜ ಅವರು ರಣಜಿ ಪಂದ್ಯದಲ್ಲಿ ಮಿಂಚುವ ಮೂಲಕ ಆಸ್ಟ್ರೇಲಿಯಾ ಪಂದ್ಯದಲ್ಲೂ ನಾನು ಮಿಂಚಲಿದ್ದೇನೆ ಎನ್ನುವ ಮುನ್ಸೂಚನೆ ನೀಡಿದ್ದಾರೆ.

Comments are closed.