LIC Plan:ನೀವು 150 ರೂ. ಹೂಡಿಕೆ ಮಾಡಿದರೆ ಸಾಕು, ನಿಮಗೆ ಸಿಗುತ್ತದೆ 8 ಲಕ್ಷದವರೆಗೆ ಹಣ; ಹೂಡಿಕೆ ಮಾಡೋದು ಹೇಗೆ ಗೊತ್ತಾ?

LIC Plan: ಪ್ರತಿಯೊಬ್ಬ ಮನುಷ್ಯನಿಗೂ ಭವಿಷ್ಯದ ಚಿಂತೆ ಇದ್ದೆ ಇರುತ್ತದೆ. ಹಾಗಾಗಿಯೇ ದುಡಿದ ಹಣದಲ್ಲಿ ಕೆಲವೊಂದಿಷ್ಟು ಭಾಗವನ್ನು ಉಳಿತಾಯ ಮಾಡಲು ಬಯಸುತ್ತಾನೆ. ಈ ಉಳಿತಾಯವನ್ನು ಹಲವು ರೀತಿಯಲ್ಲಿ ಮಾಡಬಹುದು. ನೀವು ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು, ಬ್ಯಾಂಕ್ಗಳಲ್ಲಿ ಎಫ್ಡಿ ಇಡಬಹುದು ಅಥವಾ ಜೀವ ವಿಮಾ ಕಂಪನಿಗಳಲ್ಲಿ ಹೂಡಿಕೆ ಮಾಡಬಹುದು. ಹೀಗೆ ಮಾಡುವುದರಿಂದ ನೀವು ಉಳಿತಾಯ ಮಾಡುವ ಹಣ ನಿಮ್ಮ ಭವಿಷ್ಯಕ್ಕೆ ಅಥವಾ ನಿಮಗೆ ಕಷ್ಟ ಎದುರಾದಾಗ ಇನ್ನೊಬ್ಬರ ಬಳಿ ಕೈಚಾಚುವುದನ್ನು ತಪ್ಪಿಸುತ್ತದೆ.

ಭಾರತದಲ್ಲಿರುವ ಹಲವು ಜೀವ ವಿಮಾ ಕಂಪನಿಗಳಿವೆ. ಆದರೆ ದೊಡ್ಡ ಹಾಗೂ ಸರ್ಕಾರಿ ಜೀವ ವಿಮಾ ಕಂಪನಿ ಎಂದರೆ ಅದು ಲೈಫ್ ಕಾರ್ಪೋರೇಶನ್ ಆಫ್ ಇಂಡಿಯಾ. ಇದರಲ್ಲಿ ಈಗಾಗಲೇ ಕೊಟ್ಯಂತರ ಮಂದಿ ಹೂಡಿಕೆ ಮಾಡಿದ್ದಾರೆ. ಎಲ್ಐಸಿಯು ಕಾಲ ಕಾಲಕ್ಕೆ ಹೊಸ ಹೊಸ ಪಾಲಿಸಿಗಳನ್ನು ಬಿಡುಗಡೆ ಮಾಡುತ್ತ ಇರುತ್ತದೆ. ಈಗ ಎಲ್ಐಸಿಯು ಜೀವನ್ ತರುಣ್ ಯೋಜನೆ ಬಿಡುಗಡೆ ಮಾಡಿದೆ. ಇದನ್ನೂ ಓದಿ: Jio Recharge Plan: 129 ರೂ. ರೀಚಾರ್ಜ್ ಮಾಡಿದ್ರೆ ಒಂದು ವರ್ಷದ ವರೆಗೆ ಎಲ್ಲಾ ಸೌಲಭ್ಯ  ಫ್ರೀ.. ಫ್ರೀ.. ಫ್ರೀ.. ಏನೆಲ್ಲಾ ಸಿಗಲಿದೆ ಗೊತ್ತೇ?

ಏನಿದು ಜೀವನ್ ತರುಣ್ ಯೋಜನೆ?

ಇದರಲ್ಲಿ ಭಾಗವಹಿಸುವ ನಾನ್ -ಲಿಂಕ್ಡ್ ಸೀಮಿತ ಯೋಜನೆಯಾಗಿದೆ. ನಿಮ್ಮ ಮಕ್ಕಳ ಸುರಕ್ಷತೆಗಾಗಿ ನೀವು ಉಳಿತಾಯ ಮಾಡಬಹುದು. ಮಕ್ಕಳ ಶಿಕ್ಷಣ ಹಾಗೂ ಇತರ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನೀವು ಈ ಜೀವನ್ ತರುಣ್ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು. ಈ ಪಾಲಿಸಿಯನ್ನು ನಿಮ್ಮ ಮಗು ಹುಟ್ಟಿದ ಮೂರು ತಿಂಗಳಿನಿಂದ ಹಿಡಿದು 12 ವರ್ಷದೊಳಗೆ ತೆಗೆದುಕೊಳ್ಳಬಹುದು. ಇದನ್ನೂ ಓದಿ: Maruti Suzuki Offer: ಮಾರುತಿ ಸುಜುಕಿ ಸ್ಟಾಕ್ ಕ್ಲಿಯರೆನ್ಸ್ ಗಾಗಿ ಕೊಡುತ್ತಿರುವ ಭರ್ಜರಿ ಡಿಸೌಂಟ್ ಹೇಳಿದ್ರೆ ನೀವು ಇಂದೇ ಕಾರ್ ಬುಕ್ ಮಾಡುತ್ತೀರಿ!

ಈ ಪಾಲಿಸಿಯಲ್ಲಿ ನೀವು ನಿಮ್ಮ ಮಗುವಿಗೆ 20 ವರ್ಷ ತುಂಬುವವರೆಗೆ ನೀವು ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮೂರು ತಿಂಗಳು, 6 ತಿಂಗಳು, ಒಂದು ವರ್ಷದ ಪ್ರಿಮಿಯಂನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ಹೂಡಿಕೆ ಮಾಡೋದು ಹೇಗೆ?
ಈ ಜೀವನ್ ತರುಣ್ ಯೋಜನೆಯಲ್ಲಿ ನೀವು ಪ್ರತಿದಿನ 150 ರೂ. ಹೂಡಿಕೆ ಮಾಡಿದಲ್ಲಿ ವಾರ್ಷಿಕ ಪ್ರಿಮಿಯಂ 54,೦೦೦ ರೂ. ಆಗಿರುತ್ತದೆ. ಅಂದರೆ ನೀವು ೮ ವರ್ಷ ಹೂಡಿಕೆ ಮಾಡಿದರೆ ನೀವು ಒಟ್ಟು ಪಾವತಿಸಿದ ಹಣ 4,32,೦೦೦ ರೂ. ಆಗಿರುತ್ತದೆ. ಇದರೊಂದಿಗೆ ನಿಮ್ಮ ಹೂಡಿಕೆಯ ಮೇಲೆ ನಿಮಗೆ 2,47,೦೦೦ರೂ. ಬೋನಸ್ ಸಿಗುತ್ತದೆ. ಈ ಪಾಲಿಸಿಯ ವಿಮಾ ಮೊತ್ತ 5 ಲಕ್ಷ ರೂ. ಆಗಿದೆ. ಆನಂತರ ನೀವು ಲಾಯಲ್ಟಿ ಬೋನಸ್ ಆಗಿ 97,೦೦೦ರೂ. ಪಡೆಯುತ್ತಿರಿ. ಒಟ್ಟಾರೆ ನೀವು ಈ ಪಾಲಿಸಿಯಡಿಯಲ್ಲಿ ಪಡೆಯುವ ಹಣ 8,44,೦೦೦ರೂ. ಆಗಿರುತ್ತದೆ.
ಪಾಲಿಸಿದಾರನು ಪಾಲಿಸಿ ಪಾವತಿ ಮಾಡುತ್ತಿರುವ ಅವಧಿಯಲ್ಲಿ ಮರಣ ಹೊಂದಿದರೆ ಪ್ರಿಮಿಯಂ, ಹೆಚ್ಚುವರಿ ಪ್ರಿಮಿಯಂ, ರೈಡರ್ ಪ್ರಿಮಿಯಂ, ಬಡ್ಡಿ ಹಾಗೂ ತೆರಿಗೆಯನ್ನು ತೆಗೆದುಹಾಕಿದ ನಂತರ ಮೊತ್ತವನ್ನು ನೀಡಲಾಗುತ್ತದೆ. ಇದನ್ನೂ ಓದಿ:BSNL recharge plan: ಕೇವಲ 49 ರೂಪಾಯಿಗೆ ಭರ್ಜರಿ ಆಫರ್ ಬಿಟ್ಟ ಬಿ ಎಸ್ ಏನ್ ಎಲ್; ಜಿಯೋ ಏರ್ಟೆಲ್ ಕಂಪನಿ ಗಳು ಶಾಕ್! ಯಾವ ಆಫರ್ ಗೊತ್ತೇ?

Comments are closed.