Job opportunity:  ಪೋಸ್ಟ್ ಆಫೀಸ್ ನಲ್ಲಿ ಇದೆ ಖಾಲಿ ಹುದ್ದೆಗಳು: ತಿಂಗಳಿಗೆ 63 ಸಾವಿರ ಸಂಬಳ. ಈಗಲೇ ಅರ್ಜಿ ಹಾಕಿ ಕೆಲಸ ಗಿಟ್ಟಿಸಿ.

Job opportunity: ಕೇಂದ್ರ ಸರ್ಕಾರದಲ್ಲಿ ಕೆಲಸ ಬೇಕು ಎಂದು ಕನಸು ಕಾಣುತ್ತಿರುವವರಿಗೆ ಭಾರತ ಅಂಚೆ ಕಚೇರಿ ಈಗ ಒಂದು ಒಳ್ಳೆಯ ಅವಕಾಶ ನೀಡಿದೆ. ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅವಕಾಶ ನೀಡಲಾಗಿದ್ದು, 58 ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳು ಖಾಲಿ ಇದೆ. ಇದಕ್ಕಾಗಿ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31, ಕೆಲಸಕ್ಕೆ ಅಪ್ಲೈ ಮಾಡುವುದಕ್ಕಿಂತ ಮೊದಲು ಈ ಕೆಲಸದ ಪೂರ್ತಿ ಮಾಹಿತಿ, ಬೇಕಿರುವ ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ ಎಲ್ಲದರ ಬಗ್ಗೆ ಮಾಹಿತಿಗಾಗಿ ಪೂರ್ತಿ ಓದಿ.

ಕೆಲಸ ಖಾಲಿ ಇರುವುದು ಚೆನ್ನೈ ಸಿಟಿಯಲ್ಲಿ6, ಸೆಂಟ್ರಲ್  ಪ್ರದೇಶ 9, ಎಎಂ, ಎಎಂ ಪ್ರದೇಶ 25, ದಕ್ಷಿಣ ಚೆನ್ನೈ 3, ಪಶ್ಚಿಮ ಚೆನ್ನೈ 15. ಈ ಕೆಲಸಕ್ಕೆ ಅಪ್ಲೈ ಮಾಡುವವರು ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ ಪಾಸ್ ಆಗಿರಬೇಕು. ಕೆಲಸಕ್ಕೆ ಅಪ್ಲೈ ಮಾಡುವ ಅಭ್ಯರ್ಥಿಗಳ ವಯಸ್ಸು, 2023ರ ಮಾರ್ಚ್ 31ಕ್ಕೆ 18 ರಿಂದ 27 ವರ್ಷದ ಒಳಗೆ ಇರಬೇಕು. ಇನ್ನು ಇವರಿಗೆ ಸಿಗುವ ತಿಂಗಳ ಸಂಬಳ, ₹19,900 ರೂಪಾಯಿಯಿಂದ ₹63,200 ರೂಪಾಯಿಯವರೆಗು ಇರುತ್ತದೆ. ಇಂಡಿಯನ್ ಪೋಸ್ಟಲ್ ಡಿಪಾರ್ಟ್ಮೆಂಟ್ ಇಂದ ಸಿಕ್ಕಿರುವ ಮಾಹಿತಿಯ ಪ್ರಕಾರ ಆಯ್ಕೆಯಾಗುವ ಅಭ್ಯರ್ಥಿಗೆ ಚೆನ್ನೈನಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಇಲ್ಲಿ ಇರುವ ವಯೋಮಿತಿ ಸಡಿಲಿಕೆ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ, ಮಾಜಿ ಸೈನಿಕ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 8 ವರ್ಷ, ಮಾಜಿ ಸೈನಿಕ ಓಬಿಸಿ ಅಭ್ಯರ್ಥಿಗಳಿಗೆ 6 ವರ್ಷ. ಈ ಪೋಸ್ಟ್ ಗೆ ಡ್ರೈವಿಂಗ್ ಟೆಸ್ಟ್ ಮೂಲಕ ಇಂಟರ್ವ್ಯೂ ಮಾಡಲಾಗುತ್ತದೆ. ಅಭ್ಯರ್ಥಿಗಳು ಅಪ್ಲಿಕೇಶನ್ ಅನ್ನು ಅಧಿಕೃತ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ, ಪೂರ್ತಿ ಭರ್ತಿ ಮಾಡಿ, ಅದನ್ನು ಅಲ್ಲಿ ನೀಡಿರುವ ವಿಳಾಸಕ್ಕೆ ಪೋಸ್ಟ್ ಮೂಲಕ ಕಳಿಸಬೇಕು. ಅರ್ಜಿ ಸಲ್ಲಿಸಲು ಫೆಬ್ರವರಿ 27ರಿಂದ ಶುರುವಾಗಿದ್ದು, ಮಾರ್ಚ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ.

Comments are closed.