Kannada film: ಆ ಒಂದು ಸಿನಿಮಾಕ್ಕೆ ಜಯಂತಿಗಿಂತ ಮಂಜುಳಾನೆ ಸರಿ ಅಂತ ರಾಜಕುಮಾರ ಹೇಳಿದ್ದು ಯಾಕೆ?! ಅಣ್ಣಾವ್ರು ಕೇವಲ ನಟನೆ ಮಾತ್ರ ಅಲ್ಲ ಈ ಕೆಲಸವನ್ನು ಮಾಡುತ್ತಿದ್ದರಾ?!!

Kannada Film: ಡಾಕ್ಟರ್ ರಾಜಕುಮಾರ್ (Dr. Rajkumar) ಅವರು ಕನ್ನಡ ನಾಡಿಕರ ಮನಸ್ಸಿನಲ್ಲಿ ಅಣ್ಣಾವ್ರು ಎಂದೆ ಈಗಲೂ ಉಳಿದುಕೊಂಡಿದ್ದಾರೆ. ಇದಕ್ಕೆ ಕಾರಣ ಅವರ ಅತ್ಯುತ್ತಮ ಅಭಿನಯ ಮಾತ್ರವಲ್ಲ ಅವರ ಅತ್ಯುತ್ತಮ ವ್ಯಕ್ತಿತ್ವ ಕೂಡ ಹೌದು. ಡಾಕ್ಟರ್ ರಾಜಕುಮಾರ್ ಕೇವಲ ಒಬ್ಬ ನಟ ಆಗಿರಲಿಲ್ಲ ಅವರು ಮನಸ್ಸು ಮಾಡಿದರೆ ನಿರ್ದೇಶಕರಾಗಿ ನಿರ್ಮಾಪಕರಾಗಿ, ಹಾಡುಗಾರರಾಗಿ ಹೀಗೆ ಇನ್ನೂ ಹಲವಾರು ಕಾರಣಗಳಿಂದ ಮತ್ತಷ್ಟು ಹೆಸರು ಗಳಿಸಬಹುದಿತ್ತು. ಡಾಕ್ಟರ್ ರಾಜಕುಮಾರ್ ಅವರ ಅಭಿನಯದ ಸಂಪತ್ತಿಗೆ ಸವಾಲು ಎನ್ನುವ ಸಿನಿಮಾ 1974ರಲ್ಲಿ ತೆರೆಗೆ ಬರುತ್ತೆ. ಈ ಸಿನಿಮಾ ಆಗಿನ ಕಾಲದಲ್ಲಿ ಎಷ್ಟು ಹಿಟ್ ಆಯ್ತು ಅಂದ್ರೆ ಈಗಲೂ ಕನ್ನಡದ ಕ್ಲಾಸಿಕ್ ಸಿನಿಮಾ (Classic Film) ದ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿದೆ.್

ಮೊದಲ ಬಾರಿಗೆ ಯಾರೇ ಕೂಗಾಡಲಿ ಹಾಡಿದ ಅಣ್ನಾವ್ರು;

ಸಂಪತ್ತಿಗೆ ಸವಾಲು ಸಿನಿಮಾದಲ್ಲಿ ಯಾರೇ ಕೂಗಾಡಲಿ ಹಾಡನ್ನು ಡಾಕ್ಟರ್ ರಾಜಕುಮಾರ್ ಅವರು ಮೊದಲ ಬಾರಿಗೆ ಹಾಡುತ್ತಾರೆ ಅಲ್ಲಿಂದ ಅವರ ಗಾಯನದ ಜರ್ನಿ ಕೂಡ ಆರಂಭವಾಗುತ್ತೆ. ಸಂಪತ್ತಿಗೆ ಸವಾಲ್ ಸಿನಿಮಾದ ಎಲ್ಲಾ ಹಾಡನ್ನು ಚೀ ಉದಯಶಂಕರ್ ಹಾಗೂ ಆರ್ ಎನ್ ಜಯ ಗೋಪಾಲ ಬರೆದಿದ್ದಾರೆ. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಎಂವಿ ಶೇಷಗಿರಿ ರಾವ್. ಇನ್ನು ರಾಜಕುಮಾರ ಈ ಸಿನಿಮಾದಲ್ಲಿ ಹಾಡುವುದಕ್ಕೆ ಆರಂಭಿಸಿದರು ಹಿಂದೆಯೂ ಒಂದು ಕಥೆ ಇದೆ.

ಈ ಸಿನಿಮಾಕ್ಕೆ ಹಾಡನ್ನು ಜಿಕೆ ವೆಂಕಟೇಶ್ ಅವರು ಕಾಂಪೋಸ್ ಮಾಡಿದ್ದರು. ಪಿ ಬಿ ಶ್ರೀನಿವಾಸ್ ಈ ಹಾಡನ್ನು ಹಾಡಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಕಾರಣಾಂತರಗಳಿಂದ ಬಿಬಿ ಶ್ರೀನಿವಾಸ್ ಈ ಹಾಡನ್ನು ಹಾಡಲು ಸಾಧ್ಯವಾಗುವುದಿಲ್ಲ. ಆಗ ವೆಂಕಟೇಶ್ ಅವರು ಅಣ್ನಾವ್ರ ಕೈನಲ್ಲಿ ಈ ಹಾಡನ್ನು ಹಾಡಿಸುವ ಸವಾಲು ಕೈಗೆತ್ತಿಕೊಳ್ಳುತ್ತಾರೆ. ಅಷ್ಟೇ, ರಾಜಕುಮಾರ್ ಅಲ್ಲಿಂದ ಅತ್ಯುತ್ತಮ ಗಾಯಕ ಎನಿಸಿಕೊಳ್ಳುತ್ತಾರೆ ರಾಜಕುಮಾರ್ ಅವರ ಎಷ್ಟೋ ಸಿನಿಮಾಗಳಿಗೆ ಅವರೇ ಹಾಡೋದಕ್ಕೂ ಶುರು ಮಾಡುತ್ತಾರೆ ಸಂಪತ್ತಿಗೆ ಸವಾಲ್ ಸಿನಿಮಾದ ಯಾರೇ ಕೂಗಾಡಲಿ ಹಾಡು ಸೂಪರ್ ಡೂಪರ್ ಹಿಟ್ ಆಗುತ್ತೆ.

ಸಂಪತ್ತಿಗೆ ಸವಾಲ ಸಿನಿಮಾ ಸಾಹುಕಾರ ಎನ್ನುವ ನಾಟಕ. ಈ ನಾಟಕವನ್ನು ಸಿನಿಮಾ ಆಗಿಸುವಲ್ಲಿ ಹಲವರು ಸೋಲುತ್ತಾರೆ. ಆದರೆ ಈ ನಾಟಕವನ್ನು ನೋಡಿದ್ದ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಇದನ್ನು ಸಿನಿಮಾ  ಮಾಡಲೇಬೇಕು ಎಂದು ಬಯಸುತ್ತಾರೆ ನಂತರ ಎ. ವಿ ಶೇಷಗಿರಿ ರಾವ್ ಅವರು ಈ ಸಿನಿಮಾಕ್ಕೆ ದುರ್ಗಿ ಪಾತ್ರದಲ್ಲಿ ಜಯಂತಿ ಅವರನ್ನು ಆಯ್ಕೆ ಮಾಡಿರುತ್ತಾರೆ.

ರಾಜಕುಮಾರ್ ಅವರನ್ನು ಈ ಬಗ್ಗೆ ಅಭಿಪ್ರಾಯವನ್ನು ಕೇಳಿದಾಗ ಜಯಂತಿಗಿಂತಲೂ ಮಂಜುಳಾ ಸೂಟ್ ಆಗುತ್ತಾರೆ ಎಂದು ಅಭಿಪ್ರಾಯ ಸೂಚಿಸುತ್ತಾರೆ. ರಾಜ್ ಹೇಳಿದಂತೆ ಮಂಜುಳಾ ಅವರನ್ನ ಈ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆ ಮಾಡಲಾಗುತ್ತೆ. ರಾಜಕುಮಾರ ಯೋಚನೆ ತಪ್ಪಾಗಿರುವುದಿಲ್ಲ. ಮಂಜುಳಾ ದುರ್ಗಿಯಾಗಿ ಈ ಸಿಮಿನಾವನ್ನೇ ಆವರಿಸಿಕೊಂಡು ಬಿಡುತ್ತಾರೆ. ಹಾಗೆ ಅವರನ್ನು ಜನರು ಪ್ರೀತಿಯಿಂದ ಗೆಲ್ಲಿಸುತ್ತಾರೆ. ಈ ಸಿನಿಮಾದಲ್ಲಿ ವಜ್ರಮುನಿ, ಬಾಲಕೃಷ್ಣ ಮೊದಲಾದವರ ಅಭಿನಯವೂ ಅದ್ಭುತ.

Comments are closed.