Kannada serial: ಅಮೃತಧಾರೆ ಧಾರವಾಹಿಯ ಜಯದೇವ್ ಪಾತ್ರಧಾರಿಯ ನಿಜ ಪರಿಚಯ ನಿಮಗೆ ಗೊತ್ತಾ? ಇಲ್ಲಿದೆ ನೋಡಿ ನಿಮಗೆ ಗೊತ್ತಿಲ್ದೆ ಇರೋ ವಿಚಾರ!

Kannada serial: ಜೀ ಕನ್ನಡ ವಾಹಿನಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅತ್ಯಂತ ಕ್ವಾಲಿಟಿ ಧಾರವಾಹಿಗಳನ್ನು ಪ್ರೇಕ್ಷಕರಿಗೆ ನೀಡುವುದಕ್ಕೆ ಹೆಸರುವಾಸಿಯಾಗಿದೆ. ಈ ಧಾರವಾಹಿಯಲ್ಲಿ ಮಲ್ಲಿ ಗಂಡನ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಜೈದೇವ್ ಬಗ್ಗೆ ನೀವೆಲ್ಲರೂ ತಿಳಿದುಕೊಂಡಿದ್ದೀರಿ. ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ಅವರ ನಿಜ ಜೀವನದ ಪರಿಚಯದ ಬಗ್ಗೆ. ತೆರೆಯ ಮೇಲೆ ಖಡಕ್ ಆಗಿ ಕಾಣಿಸಿಕೊಳ್ಳುವಂತಹ ಈ ವ್ಯಕ್ತಿಯ ನಿಜವಾದ ಹೆಸರು ಹಾಗೂ ಅವರ ಪರಿಚಯವನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಇವರ ಹೆಸರು ರಾಣವ್ ಗೌಡ. ಸಾಕಷ್ಟು ಧಾರಾವಾಹಿಗಳಲ್ಲಿ ಇವರು ನಟಿಸಿರಬಹುದು ಆದರೆ ಇವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿರುವಂತಹ ಧಾರವಾಹಿ ಎಂದರೆ ಅದು ಅಮೃತದಾರೆ. ಧಾರವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಕೂಡ ಪ್ರೇಕ್ಷಕರ ಮನಸ್ಸನ್ನು ಸೆಳೆಯುವುದಕ್ಕೆ ಯಶಸ್ವಿಯಾಗಿದ್ದಾರೆ ಅಂತ ಹೇಳಬಹುದಾಗಿದೆ. ಕೇವಲ ಧಾರವಾಹಿಗೆ ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಸಿನಿಮಾಗಳಲ್ಲಿ ಕೂಡ ಮುಂದಿನ ದಿನಗಳಲ್ಲಿ ಭವಿಷ್ಯದಲ್ಲಿ ವಿಲನ್ ಆಗುವಂತಹ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದ್ದಾರೆ ಅನ್ನೋದನ್ನ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಅಮೃತದಾರೆ ಧಾರವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು ಕೂಡ ರಾಣವ್ ಗೌಡ ಯಾವುದೇ ಸಿನಿಮಾ ವಿಲನ್ ಕೂಡ ಕಡಿಮೆ ಇಲ್ಲದಂತೆ ಖಡಕ್ ಪರ್ಫಾರ್ಮೆನ್ಸ್ ತೋರಿಸ್ತಾ ಇದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರು ಸಿನಿಮಾಗಳಲ್ಲಿ ನಟನೆ ಮಾಡಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ ಎಂಬುದಾಗಿ ಹೇಳಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗ ಇದ್ದು ಅದರಲ್ಲೂ ವಿಶೇಷವಾಗಿ ಮಹಿಳಾ ಅಭಿಮಾನಿಗಳ ಬಳಗ ಇವರಿಗೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಕೇವಲ ಧಾರವಾಹಿಯಲ್ಲಿ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಕೂಡ ನಟಿಸಬಹುದೆಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.

ಧಾರವಾಹಿಯಲ್ಲಿ ಈಗಾಗಲೇ ತಮಗೆ ನೀಡಿರುವಂತಹ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಎಲ್ಲರ ಬಾಯಲ್ಲೂ ಕೂಡ ಜೈದೇವ್ ಪಾತ್ರ ಕೇಳಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ಇವರು ಅವಕಾಶ ಸಿಕ್ಕರೆ ಚಿತ್ರರಂಗದಲ್ಲಿ ಕೂಡ ಉತ್ತಮವಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದಾಗಿದೆ. ಈ ಹಿಂದೆ ಸುಧಾರಾಣಿ ಅವರ ಸಿನಿಮಾದಲ್ಲಿ ಅವರ ಜೊತೆಗೆ ಬಾಲ ನಟನಾಗಿ ಕಾಣಿಸಿಕೊಂಡಿದ್ದ ಇವರು ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಯಾವುದೇ ರೀತಿಯ ಪಾತ್ರಗಳನ್ನು ಕೂಡ ಸಿನಿಮಾದಲ್ಲಿ ಮಾಡಬಲ್ಲರು. ಇನ್ನು ಅಮೃತಧಾರೆ ಧಾರವಾಹಿಯ ಬಗ್ಗೆ ಮಾತನಾಡುವುದಾದರೆ ಈ ಧಾರವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ರವರ ಜುಗಲ್ಬಂದಿ ಎಲ್ಲರಿಗೂ ಕೂಡ ಇಷ್ಟವಾಗಿದೆ. ಆರಂಭದಿಂದಲೂ ಕೂಡ ಜೀ ಕನ್ನಡ ಪ್ರೇಕ್ಷಕರಿಗೆ ಫೇವರೆಟ್ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವಂತಹ ಈ ಧಾರವಾಹಿ ರೇಟಿಂಗ್ ವಿಚಾರದಲ್ಲಿ ಕೂಡ ಸಾಕಷ್ಟು ಉತ್ತಮ ರೇಟಿಂಗ್ ಪಡೆದುಕೊಳ್ಳುತ್ತಿದೆ.

Comments are closed.