Kuri Pratap: ಇಬ್ಬರು ಕಾಮೆಡಿಯನ್ಸ್ ನಡ್ವೆ ಸೀರಿಯಸ್ ಸಮರ; ಕುರಿ ಪ್ರತಾಪ್ ಮತ್ತೆ ಸುನಿಲ್ ಮಧ್ಯೆ ನಿಜವಾಗಲೂ ನಡೆದಿದ್ದೇನು?

Kuri Pratap: ಕುರಿ ಸುನಿಲ್ ಎನ್ನುವಂತಹ ಕಲಾವಿದನ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ ಎಂಬುದಾಗಿ ನಾವು ಭಾವಿಸುತ್ತೇವೆ ಯಾಕೆಂದರೆ ಕುರಿ ಬಾಂಡ್ ಕಾರ್ಯಕ್ರಮದ ಮೂಲಕ ಕುರಿ ಸುನಿಲ್ ಹಾಗೂ ಕುರಿ ಪ್ರತಾಪ್ ರವರು ಕನ್ನಡದ ಪ್ರೇಕ್ಷಕರಿಗೆ ಸಾಕಷ್ಟು ಹತ್ತಿರವಾಗಿದ್ದಾರೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಎಲ್ಲರಿಗೂ ಕೂಡ ಒಂದು ಮನ್ನಣೆ ನೀಡಿದ್ದು ಇದೇ ಕಾರ್ಯಕ್ರಮ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಜಯ್ ಸಿನಿಮಾದ ಮೂಲಕ ಸಿನಿಮಾದಲ್ಲಿ ಕೂಡ ಇವರು ಕಾಣಿಸಿಕೊಂಡು ನಿಮ್ಮನ್ನು ನಗಿಸುವಂತಹ ಪ್ರಯತ್ನ ಮಾಡಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಇವರು ನೀಡಿರುವಂತಹ ಒಂದು ಸಂದರ್ಶನದಲ್ಲಿ ಕುರಿ ಪ್ರತಾಪ್ ಹಾಗೂ ಚಿಕ್ಕಣ್ಣ ಅವರಿಗೆ ಬೈದಿರೋದ್ರಿಂದ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ನನ್ನ ತುಳಿದುಕೊಂಡು ಅವರು ಮೇಲೆ ಬಂದರೂ ಆದರೆ ನಾನು ಇವತ್ತಿಗೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದೀನಿ ಹಾಗೂ 18 ಸಿನಿಮಾಗಳು ಬಿಡುಗಡೆಯಾಗುವುದಕ್ಕೆ ಬಾಕಿ ಇದೆ ನನಗೇನು ಅವಕಾಶ ಕಮ್ಮಿಯಾಗಿಲ್ಲ ಅವರಿಗೆ ಬೈದೆ ಅಂದಾಕ್ಷಣ. ಅವರನ್ನ ಚಿತ್ರರಂಗಕ್ಕೆ ಎಂಟ್ರಿ ನೀಡೋ ಹಾಗೆ ಮಾಡಿದ್ದೇ ನಾನು ಅವಕಾಶ ಕೊಡಿಸಿದ್ದೆ ನಾನು ಆದರೆ ನನ್ನನ್ನೇ ತಿಳಿದುಕೊಂಡು ಹೋದರು ಎಂಬುದಾಗಿ ಸುನಿಲ್ ಹೇಳಿಕೊಂಡಿದ್ದಾರೆ.

ನಾನೇ ಅವರನ್ನು ಬೆಳೆಸಿದ್ದು ಅವರಿಗೆ ನಾನೇ ಸಿನಿಮಾದಲ್ಲಿ ಅವಕಾಶ ಕೊಡೋ ಹಾಗೆ ಮಾಡಿದ್ದು ಆದರೆ ನನ್ನನ್ನೇ ತಿಳಿದುಕೊಂಡು ಹೋದರು ಹಾಗೂ ಎಲ್ಲೂ ಕೂಡ ಒಮ್ಮೆ ನನ್ನನ್ನು ಅವರು ಚಿತ್ರರಂಗದಲ್ಲಿ ಅವಕಾಶ ಕೊಡಿಸಿದ್ದು ಸುನಿಲ್ ಎನ್ನುವುದಾಗಿ ಹೇಳಿಕೊಂಡಿಲ್ಲ ಎಂಬುದಾಗಿ ಹೇಳಿದ್ದಾರೆ. ನಾನು ಕೂಡ ಅಷ್ಟೇ ಕೊಚ್ಚಿ ಮೇಲೆ ಕಲ್ಲನ್ನು ಎಸೆದರೆ ಅದು ನಮ್ಮ ಮೈ ಮೇಲೆ ಬೀಳುತ್ತದೆ ಅಂತ ಅವರಿಂದ ದೂರಾನೆ ಇದ್ದೇನೆ ಎಂಬುದಾಗಿ ಕೂಡ ಹೇಳಿದ್ದಾರೆ.

ಶಿವಕಾಶಿ ಎನ್ನುವ ಸಿನಿಮಾದಲ್ಲಿ ಇಬ್ಬರು ಜೊತೆಯಾಗಿ ನಟಿಸುವ ಮೂಲಕ ಇವರಿಬ್ಬರ ನಡುವೆ ಜಗಳ ಪ್ರಾರಂಭವಾಗಿತ್ತು ಎನ್ನುವುದಾಗಿ ಕುರಿ ಸುನಿಲ್ ಹೇಳುತ್ತಾರೆ. ಆ ಸಂದರ್ಭದಲ್ಲಿ ಕುರಿ ಸುನಿಲ್ ರವರ ಡೇಟ್ಸ್ ಇಶ್ಯೂ ಆಗ್ತಾ ಇತ್ತು. ಆಗ ಕುರಿ ಪ್ರತಾಪ್ ರವರು ಎಲ್ಲೂ ಡೇಟ್ಸ್ ಕೊಡೋದಕ್ಕೆ ಹೋಗಬೇಡ ನಿನ್ನ ಬದಲಿಗೆ ಚಿಕ್ಕಣ್ಣನ ಹಾಕೊಳ್ತೀನಿ ಹೇಳ್ತಾ ಇದ್ದ. ಇಲ್ಲಿಂದಲೇ ಇವರಿಬ್ಬರ ನಡುವೆ ಮನಸ್ತಾಪಗಳು ಪ್ರಾರಂಭವಾಗಿ ಇದು ದೊಡ್ಡ ಮಟ್ಟಕ್ಕೆ ತಿರುಗಿತು ಎಂಬುದಾಗಿ ಅವರು ಹೇಳ್ತಾರೆ. ನನ್ನ ಬಿಟ್ಟು ಚಿಕ್ಕಣ್ಣನ ಸಿನಿಮಾ ಆಗಿ ಹಾಕೊಳ್ತೀನಿ ಅಂದ್ರೆ ಅದರ ಅರ್ಥ ಏನು ಎನ್ನುವುದಾಗಿ ಕೂಡ ಇಂದಿಗೂ ಕುರಿ ಸುನಿಲ್ ಪ್ರಶ್ನಿಸುತ್ತಾರೆ. ಇವತ್ತಿಗೂ ಕೂಡ ಕುರಿ ಸುನಿಲ್ ಹಾಗೂ ಕುರಿ ಪ್ರತಾಪ್ ರವರ ಮುಸುಕಿನ ಗುದ್ದಾಟ ಸಾಕಾಷ್ಟು ಸಂದರ್ಶನಗಳಲ್ಲಿ ಕಂಡು ಬರುತ್ತಲೇ ಇರುತ್ತವೆ.

Comments are closed.