Loan: ಇಂತವರಿಗೆ ಸಿಗಲಿದೆ ಸರ್ಕಾರದಿಂದ ಸಬ್ಸಿಡಿ ಸಾಲ; ಮೊದಲು ಅಪ್ಲೈ ಮಾಡಿದವರಿಗೆ ಸಿಗತ್ತೆ!

Loan: ವೈದ್ಯಕೀಯ ಶಿಕ್ಷಣ ಹೀಗೆ ನಾನಾ ವಿಧದ ಕ್ಯಾಟಗರಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಲಿಂಗಾಯಿತ ಅಭಿವೃದ್ಧಿ ನಿಗಮದಿಂದ ಸಾಲ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಸಾಲ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ ಆಗಸ್ಟ್ 31 ಕೊನೆಯ ದಿನಾಂಕ ಆಗಿರುವ ಕಾರಣದಿಂದಾಗಿ ಈ ದಿನಾಂಕದ ಒಳಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕಾಗಿರುತ್ತದೆ ಎಂಬುದಾಗಿ ನಿಗಮದಿಂದ ಅಧಿಕೃತವಾಗಿ ತಿಳಿಸಲಾಗಿದೆ.

  • ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿರುವಂತ ಜನರಿಗೆ ಬಸವ ಬೆಳಗು ಯೋಜನೆ ಅನ್ನು ಪರಿಚಯಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಲಿಂಗಾಯತ ಕುಟುಂಬದ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3.5 ಲಕ್ಷಗಳಿಗಿಂತ ಹೆಚ್ಚು ಆಗಿರಬಾರದು.
  • ಎಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯಗಳಂತಹ ಪ್ರೊಫೆಷನಲ್ ಕೋರ್ಸ್ ಗಳಿಗೆ ಸಾಲು ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ರೂ. 1 ಲಕ್ಷಗಳಿಂದ ಪ್ರಾರಂಭಿಸಿ 5 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯವನ್ನು ಒದಗಿಸಲಾಗುತ್ತದೆ. ಕೇವಲ ಎರಡು ಪ್ರತಿಶತ ಬಡ್ಡಿದರವನ್ನು ವಿಧಿಸಲಾಗುತ್ತದೆ.
  • ಇನ್ನೊಂದು ಪ್ರಮುಖ ಯೋಜನೆ ಆಗಿರುವಂತಹ ವಿದೇಶ ವಿದ್ಯಾ ವಿಕಾಸ ಯೋಜನೆಯಡಿಯಲ್ಲಿ ಕೂಡ ಸಾಲ ಸೌಲಭ್ಯ ನೀಡಲಾಗುತ್ತದೆ ಹಾಗೂ ಇದಕ್ಕಾಗಿ ಆ ವೀರಶೈವ ಲಿಂಗಾಯಿತ ಕುಟುಂಬದ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಗಳ ಒಳಗೆ ಇರಬೇಕು. ಇದಕ್ಕಾಗಿ ಅವರು ವಿದೇಶಿ ವಿವಿಗಳಲ್ಲಿ ಪೋಸ್ಟ್ ಡಾಕ್ಟರಲ್, ಪಿ ಎಚ್ ಡಿ ಅಥವಾ ಮಾಸ್ಟರ್ ಮಾಡಿರಬೇಕು. ಡಿಗ್ರಿ ಕೋರ್ಸ್ ಗಳಲ್ಲಿ ಹೈಯರ್ ಎಜುಕೇಶನ್ ಪಡೆದುಕೊಳ್ಳುವುದಕ್ಕಾಗಿ ವಿದೇಶಕ್ಕೆ ಹೋಗಬೇಕು ಅಂತ ಅಂದ್ರೆ ಈ ನಿಗಮದಿಂದ ಒಂದು ವರ್ಷಕ್ಕೆ ಹತ್ತು ಲಕ್ಷ ರೂಪಾಯಿಗಳ ರೀತಿಯಲ್ಲಿ ಮೂರು ವರ್ಷಗಳವರೆಗೆ ಮ್ಯಾಕ್ಸಿಮಮ್ ಕಡಿಮೆ ಬಡ್ಡಿಯಲ್ಲಿ 20 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಅವರು ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್ ಅನ್ನು ಸಬ್ಮಿಟ್ ಮಾಡಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.
  • ಕಾಯಕ ಕಿರಣ ಯೋಜನೆ ಅಡಿಯಲ್ಲಿ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡಿಕೊಳ್ಳುವುದಕ್ಕಾಗಿ ವೀರಶೈವ ಲಿಂಗಾಯಿತ ಸಮಾಜದ ಯುವಕರಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಉದಾಹರಣೆಗೆ 1 ಲಕ್ಷಗಳ ಸಾಲವನ್ನು ನೀಡಿದರೆ ಸಬ್ಸಿಡಿ ರೂಪದಲ್ಲಿ 20,000ಗಳನ್ನ ನೀಡಲಾಗುತ್ತದೆ. ಅಂದರೆ ಉಳಿದ ಕೇವಲ 80000 ಹಣಕ್ಕೆ ನೀವು ಕೇವಲ ನಾಲ್ಕು ಪ್ರತಿಶತದ ಬಡ್ಡಿ ದರದ ರೂಪದಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗಿರುತ್ತದೆ. ಇದು ಕೇವಲ ಉದಾಹರಣೆ ಅಷ್ಟೇ, ಇದೇ ರೀತಿಯಲ್ಲಿ ಸಾಲವನ್ನು ನೀವು ಲೆಕ್ಕಾಚಾರ ಮಾಡಬಹುದಾಗಿದೆ.
  • ಭೋಜನಾಲಯ ಕೇಂದ್ರ ಯೋಜನೆ ಅಡಿಯಲ್ಲಿ ಕೂಡ ಹೋಟೆಲ್ ಉದ್ಯಮವನ್ನು ಮಾಡುವುದಕ್ಕೆ ಸಾಲ ಸೌಲಭ್ಯ ದೊರಕುತ್ತದೆ. ಉದಾಹರಣೆಗೆ ಇದರಲ್ಲಿ 5 ಲಕ್ಷ ಸಾಲವನ್ನು ಪಡೆದುಕೊಂಡಿದ್ದರೆ 4.60 ಲಕ್ಷಗಳನ್ನು ಮಾತ್ರ ನೀವು ಸಾಲರೂಪದಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ. 40,000 ಸಬ್ಸಿಡಿ ಆಗಿರುತ್ತದೆ. 20*30 ಕಟ್ಟಡವನ್ನು ನೀವು ಇದಕ್ಕಾಗಿ ಹೊಂದಿರಬೇಕಾಗಿರುವುದು ಅಗತ್ಯವಾಗಿದೆ.
  • ವಿಭೂತಿ ಘಟಕ ಯೋಜನೆ ಅಡಿಯಲ್ಲಿ ವಿಭೂತಿ ತಯಾರಿಕೆ ಮಾಡುವವರಿಗೆ ಸಾಲವನ್ನು ನೀಡಲಾಗುತ್ತದೆ ಹಾಗೂ ಇವರ ವಾರ್ಷಿಕ ಆದಾಯ 3.50 ಲಕ್ಷ ರೂಪಾಯಿಗಳಿಗಿಂತ ಕಮ್ಮಿ ಆಗಿರಬೇಕು. ವಯಸ್ಸಿನ ಮಿತಿ 18 ರಿಂದ 55 ವರ್ಷದ ಒಳಗೆ ಇರಬೇಕು. ಇಲ್ಲಿ ಕೂಡ ಒಂದು ವೇಳೆ ಸಾಲ 4 ಲಕ್ಷ ಬೇಕಾಗಿದ್ದರೆ ನಿಗಮ 3.60 ಲಕ್ಷ ರೂಪಾಯಿಗಳ ಸಾಲವನ್ನು ಮಾತ್ರ ನಿಮಗೆ ಪಾವತಿ ಮಾಡುವುದಕ್ಕೆ ನೀಡುತ್ತದೆ ಹಾಗೂ ಉಳಿದ 40,000ಗಳನ್ನ ಸಬ್ಸಿಡಿ ರೂಪದಲ್ಲಿ ನಿಮಗೆ ರಿಯಾಯಿತಿ ಕೊಡುತ್ತದೆ. ಅದು ಕೂಡ ಕೇವಲ ಮೂರು ಪ್ರತಿಶತ ಬಡ್ಡಿ ದರದಲ್ಲಿ.

ಇದೇ ರೀತಿ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಬಾಡಿಗೆ ವಾಹನವನ್ನು ಚಲಾಯಿಸುವುದಕ್ಕೆ ಸಾಲ ಸೌಲಭ್ಯವನ್ನು ನೀಡುವುದು ಹಾಗೂ ಅದರಲ್ಲಿ ಕೂಡ 50% ಸಬ್ಸಿಡಿಯನ್ನು ನೀಡುವುದು, ಇನ್ನು ಸ್ವಯಂ ಉದ್ಯೋಗ ಸಾಲ ಯೋಜನೆ ಅಡಿಯಲ್ಲಿ 20 ಪ್ರತಿಶತದ ಸಬ್ಸಿಡಿ ದರದೊಂದಿಗೆ ಸಾಲ ಸೌಲಭ್ಯ ನೀಡುವುದು ಸೇರಿದಂತೆ ಸಾಕಷ್ಟು ಯೋಜನೆಗಳನ್ನು ನೀವು ವೀರಶೈವ ಲಿಂಗಾಯಿತ ನಿಗಮದ ಅಡಿಯಿಂದ ಪಡೆದುಕೊಳ್ಳಬಹುದಾಗಿದೆ.

Comments are closed.