ಮಿಸ್ ಇಂಡಿಯಾ 2022 ವಿನ್ನರ್ ಸಿನಿ ಶೆಟ್ಟಿ ಬಾಲಿವುಡ್ ಹೋಗೋಕೆ ಸಿದ್ದ!

ಕರಾವಳಿ ಬೆಡಗಿ ಸಿನಿ ಶೆಟ್ಟಿ ಈ ವರ್ಷದ ಮಿಸ್ ಇಂಡಿಯಾ 2022 ಆಗಿ ಹೊರಹೊಮ್ಮಿದ್ದಾರೆ. ಮಿಸ್ ಇಂಡಿಯಾ ಪಟ್ಟವನ್ನು ಗಳಿಸಿಕೊಂಡ ನಂತರ ಇತ್ತೀಚೆಗೆ ಮಂಗಳೂರಿಗೂ ಭೇಟಿ ನೀಡಿದ್ದರು. ಈ ಸಮಯದಲ್ಲಿ ತುಳು ಭಾಷೆಯಲ್ಲಿಯೂ ಮಾದ್ಯಮದ ಎದುರು ಮಾತನಾಡಿದ್ದು ಹೈಲೈಟ್ ಆಗಿತ್ತು.

ಹೌದು, ಕರ್ನಾಟಕದ ಅದರಲ್ಲೂ ಮಂಗಳೂರಿನ ಬೆಡಗಿ, ಇಂದು ಮಿಸ್ ಇಂಡಿಯಾ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಐಶ್ಚರ್ಯಾ ರೈ ಈ ಸ್ಥಾನದಲ್ಲಿ ನಿಂತಾಗಲೂ ನಮಗೆ ಅಷ್ಟೇ ಸಂತೋಷವಾಗಿತ್ತು. ಕಾರಣ ನಟಿ ಐಶ್ಚರ್ಯಾ ರೈ ಕೂಡ ಕರಾವಳಿಯ ಮೂಲದವರು.  ಸಿನಿ ಶೆಟ್ಟಿ ಮಿಸ್ ಇಂಡಿಯಾ 2022 ಕಿರೀಟವನ್ನು ಮೂಡಿಗೆರೆಸಿಕೊಂಡ ಮೇಲೆ ಇದೀಗ ಮಿಸ್ ವರ್ಲ್ಡ್ ಕಡೆಗೆ ದೃಷ್ಟಿ ನೆಟ್ಟಿದ್ದಾರೆ. ಹೌದು, ಮಿಸ್ ವರ್ಲ್ಡ್ ಪಟ್ಟವನ್ನು ತಮ್ಮದಾಗಿಸಿಕೊಳ್ಳೋದಕ್ಕೆ ಸಿನಿ ಶೆಟ್ಟಿ ಈಗಾಗಲೇ ತುಂಬಾ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಅತ್ಯುತ್ತಮ ಕೋಚ್ ಗಳನ್ನು ಹೊಂದಿರುವ ಸಿನೆ ಶೆಟ್ಟಿ, ಮಿಸ್ ವರ್ಡ್ ಆಗುವುದಕ್ಕೆ ಏನೆಲ್ಲಾ ಪ್ರಿಪರೇಷನ್ ಬೇಕು ಅವೆಲ್ಲವನ್ನು ಅಚ್ಚುಕಟ್ಟಾಗಿ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ಸಿನೆ ಶೆಟ್ಟಿ ಎಲ್ಲಾ ಮಾಡೆಲ್ ಗಳಂತೆ ಬಾಲಿವುಡ್ ಗೆ ಬರುತ್ತಾರೆ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಇದಕ್ಕೆ ಉತ್ತರಿಸಿದ ಮಿಸ್ ಇಂಡಿಯಾ ಸಿನಿ ಶೆಟ್ಟಿ, ನನಗೆ ಇಷ್ಟವಾಗುವಂತಹ ಉತ್ತಮವಾದ ಅವಕಾಶ ಬಂದ್ರೆ ಖಂಡಿತವಾಗಿಯೂ ನಾನು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ. ಆದರೆ ಸದ್ಯಕ್ಕೆ ಮಾತ್ರ ನನ್ನ ಟಾರ್ಗೆಟ್ ಇರೋದು ಮಿಸ್ ವರ್ಲ್ಡ್ ಕಿರೀಟದ ಮೇಲೆ ಅಂತ ಸಿನಿ ಶೆಟ್ಟಿ ತನ್ನ ಮುಂದಿನ ಗುರಿಯ ಬಗ್ಗೆ ತಿಳಿಸಿದ್ದಾರೆ.

ಇನ್ನು ಚಿಕ್ಕ ವಯಸ್ಸಿನಿಂದಲೂ ಮಾಡಲಿಂಗ್ ಬಗ್ಗೆ ಹೆಚ್ಚು ಆಸಕ್ತಿ ಇದ್ದ ಸಿನಿ ಶೆಟ್ಟಿ ಅವರು ಚಿಕ್ಕ ವಯಸ್ಸಿನಿಂದಲೂ ಐಶ್ವರ್ಯ ರೈ ಹಾಗೂ ಮೊದಲ ನೋಡಿಕೊಂಡು ಬೆಳೆದವರು. ಇನ್ನು ನನಗೆ ಜೀವನದ ಮೌಲ್ಯವನ್ನು ಕಲಿಸಿದ ತಂದೆ ತಾಯಿಗಳೆ ನನಗೆ ಸ್ಪೂರ್ತಿ ಅಂತೀನಿ ಶೆಟ್ಟಿ ಹೇಳಿಕೊಂಡಿದ್ದಾರೆ. ಮಾಧ್ಯಮಕ್ಕೆ ಸಂದರ್ಶನವನ್ನು ಕೊಡುವ ವೇಳೆ ಸಿನಿ ಶೆಟ್ಟಿ, ತಮ್ಮ ಸ್ಥಳೀಯ ಭಾಷೆ ತುಳುವಿನಲ್ಲಿಯೂ ಕೂಡ ಮಾತನಾಡಿದ್ದು ವಿಶೇಷವಾಗಿತ್ತು. ಅಂದಹಾಗೆ ಸದ್ಯದಲ್ಲಿ ಸಿನಿ ಶೆಟ್ಟಿ ಅವರನ್ನು ತೆರೆಯ ಮೇಲೆ ಕಾಣುವ ಸಾಧ್ಯತೆ ಇದೆ ಎನ್ನುವುದು ಅವರ ಸಂದರ್ಶನದಿಂದಲೇ ತಿಳಿಯುತ್ತೆ.

Leave A Reply

Your email address will not be published.