Politics: ಕೊನೆಗೂ ದೇಶದ ಈ ಪರಿಸ್ಥಿತಿಗೆ ಅಲ್ಲಾಹ್ ನೇ ಕಾರಣ ಅಂದು ಬಿಟ್ರಲ್ಲ ಸಚಿವರು? ಈಗ ಎಲ್ಲಿದೆ ಮಿತ್ರ ರಾಷ್ಟ್ರಗಳ ಪಡೆ?!

Politics: ಸದ್ಯ ಪಾಕಿಸ್ತಾನದ ಪರಿಸ್ಥಿತಿ ಅಯೋಮಯವಾಗಿದೆ. ತನ್ನ ಪರಿಸ್ಥಿತಿಗೆ ತನ್ನ ದುರ್ಬುದ್ಧಿಯೇ ಕಾರಣ ಅನ್ನೋದು ದೇಶಕ್ಕೆ ಗೊತ್ತಾದಂತೆ ಇದೆ. ಅಕ್ಕ ಪಕ್ಕದವರನ್ನೆಲ್ಲಾ ದೂರಿದ್ದು ಆಯ್ತು, ಇದೀಗ ನಮ್ಮ ಪರಿಸ್ಥಿತಿಗೆ ಆ ದೇವರೇ ಕಾರಣ ಅಂತ ಅಲ್ಲಾಹ್ ಮೇಲೆ ಆರೋಪ ಹೊರಿಸಿದ್ದಾರೆ ಹಣಕಾಸು ಸಚಿವ ಇಶಾಕ್ ದರ್.

ಕಳೆದ ಮೂರು ನಾಲ್ಕು ವರ್ಷಗಳಿಂದ ಪಾಕಿಸ್ತಾನದ ಆಡಳಿತ ಆಡಳಿತಪ್ಪಿದೆ. ಇದರ ಜೊತೆಗೆ ಉಗ್ರ ಹಸ್ತಕ್ಷೇಪ ಕೂಡ ಜನರ ಜೀವನವನ್ನು ಅಲ್ಲೋಲಕಲ್ಲೋಲ ಮಾಡಿದೆ. ಒಂದು ಮಾಹಿತಿಯ ಪ್ರಕಾರ ಪಾಕಿಸ್ತಾನದಲ್ಲಿ ಕೇವಲ 3 ವಾರಕ್ಕೆ ಆಗುವಷ್ಟು ವಿದೇಶಿ ವಿನಿಮಯ ಇದೆ.  ಸದಾ ನೆರೆಹೊರೆಯ ರಾಷ್ಟ್ರಗಳ ಮೇಲೆ ಕತ್ತಿ ಮಸೆಯುತ್ತಾ ಉಗ್ರರನ್ನು ರಕ್ಷಿಸುತ್ತಾ, ಪೋಷಿಸುತ್ತಾ ಬಂದ ಪಾಕಿಸ್ತಾನ ಸರ್ಕಾರ ಇದೀಗ ಪ್ರಪಂಚದ ಸಣ್ಣ ದೇಶಗಳಿಂದಲೂ ಕೂಡ ಸಹಾಯ ಹಸ್ತ ಬೇಡುತ್ತಿದೆ. ಇದನ್ನೂ ಓದಿ: K.L Rahul Marriage: ಬೇರೆಯವರು ಕೋಟಿ ಕೋಟಿ ಗಿಫ್ಟ್ ಕೊಡುತ್ತಿರುವಾಗ, ಮಾವ ಸುನಿಲ್ ಶೆಟ್ಟಿ, ರಾಹುಲ್ ಗೆ ಕೊಟ್ಟ ಗಿಫ್ಟ್ ಏನು ಗೊತ್ತೇ?? ತಿಳಿದರೆ ಇಂತ ಮಾವನೇ ಬೇಕು ಅಂತೀರಾ!

ಒಂದು ಕಡೆ ಉದ್ಯೋಗ ಇಲ್ಲದೆ ಊಟಕ್ಕೂ ಕಷ್ಟ ಪಡುತ್ತಿರುವ ಸಂದರ್ಭದಲ್ಲಿ ದೇಶದ ಎಲ್ಲಾ ಪರಿಸ್ಥಿತಿಗೂ ಆ ದೇವರೇ ಕಾರಣ ಅಂತ ಅಲ್ಲಾಹ್ ಮೇಲೆ ಎಲ್ಲಾ ಆರೋಪವನ್ನು ಹೊರಿಸಿದ್ದಾರೆ ಸಚಿವ ದರ್. ಅಂದಹಾಗೆ ಪಾಕಿಸ್ತಾನದ ರೂಪಾಯಿ ಮೌಲ್ಯ ಎಷ್ಟು ಕುಸಿದಿದೆ ಗೊತ್ತಾ? ಅಮೆರಿಕನ್ ಡಾಲರ್ ಮುಂದೆ 262 ರೂಪಾಯಿ ಕುಸಿತವನ್ನು ಕಂಡಿದೆ. ಸುಮಾರು ಎರಡು ದಶಕಗಳಲ್ಲಿಯೇ ಇಷ್ಟು ಕುಸಿತ ಕಂಡಿರಲಿಲ್ಲ. ಇದನ್ನೂ ಓದಿ: Jadeja comeback:ವರ್ಷ ಆದ್ಮೇಲೆ ವಾಪಾಸ್ ಬಂದ ಜಡೆದ, ರಣಜಿ ಪಂದ್ಯದಲ್ಲಿಯೇ ದೊಡ್ಡದಾಗಿ ಆಸ್ಟ್ರೇಲಿಯಾಗೆ ಸಿಗ್ನಲ್ ಕೊಟ್ಟಿದ್ದು ಹೇಗಿತ್ತು ಗೊತ್ತೇ?

ಎಲ್ಲಿದೆ ಮಿತ್ರ ರಾಷ್ಟ್ರಗಳು?

ಇನ್ನು ಐ ಎಂ ಎಫ್ ನ ಕನಿಷ್ಠ ಶರತ್ತುಗಳನ್ನು ಕೂಡ ಪಾಕಿಸ್ತಾನ ಪೂರೈಸಿಲ್ಲ ಹಾಗಾಗಿ ಅಲ್ಲಿಂದ ಯಾವುದೇ ರೀತಿಯ ಸಾಲ ಸೌಲಭ್ಯ ಸಿಗುವುದು ಡೌಟ್. ಹೇಗಾದರೂ ಮಾಡಿ ಐ ಎಂ ಎಫ್ ನಿಂದ ಸಾಲ ಕೊಡಿಸಪ್ಪ ಅಂತ ದೊಡ್ಡಣ್ಣನ ಮೊರೆ ಹೋಗಿದೆ ಪಾಕಿಸ್ತಾನ ಸರ್ಕಾರ. ಆದರೆ ಅಮೆರಿಕ ಈಗಾಗಲೇ ಕೈ ಚೆಲ್ಲಿ ಕುಳಿತಿದೆ.

ಭಾರತದಿಂದಲೂ ಪಾಕಿಸ್ತಾನಕ್ಕೆ ಮುಟ್ಟಿತು ಬಿಸಿ – ನೋಟಿಸ್ ಜಾರಿ – ಯಾವುದಕ್ಕೆ?

ಅದು 1960ರಲ್ಲಿ ಮಾಡಿಕೊಂಡ ಸಿಂಧೂ ನದಿಯ ಒಪ್ಪಂದ. ಆದರೆ ಪಾಕಿಸ್ತಾನ ಮಾತ್ರ ಒಪ್ಪಂದವನ್ನು ಅನುಷ್ಠಾನಗೊಳಿಸದೆ ತನಗೆ ಇಷ್ಟ ಬಂದ ಹಾಗೆ ವರ್ತಿಸುತ್ತಿತ್ತು. ಈ ಹಿನ್ನಲೆಯಲ್ಲಿ ಜನವರಿ 25ಕ್ಕೆ ಭಾರತದಿಂದ ಪಾಕಿಸ್ತಾನಕ್ಕೆ ನೋಟಿಸ್ ಹೋಗಿದೆ. ಏನು ಕೇವಲ 90 ದಿನಗಳ ಒಳಗೆ ಒಪ್ಪಂದದ ಉಲ್ಲಂಘನೆಯನ್ನು ಸರಿಪಡಿಸಿಕೊಳ್ಳಲು ಭಾರತ ಪಾಕಿಸ್ತಾನಕ್ಕೆ ಮತ್ತೊಂದು ಅವಕಾಶ ನೀಡಿದೆ. ಇನ್ನು ಶಾಶ್ವತ ಸಿಂಧು ಆಯೋಗದಲ್ಲಿ ಐದು ಬಾರಿ ಈ ವಿಷಯದ ಬಗ್ಗೆ ಚರ್ಚೆಗಳು ನಡೆದಿದ್ದರೂ ಪಾಕಿಸ್ತಾನ ಮಾತ್ರ ಯಾವುದೇ ಉತ್ತರ ನೀಡಿರಲಿಲ್ಲ ಹಾಗಾಗಿ ಅದರ ಮೊಂಡುತನಕ್ಕೆ ಬುದ್ಧಿ ಕಲಿಸಲು ಭಾರತದದಿಂದ ನೋಟಿಸ್ ಹೋಗಿದೆ. ಇದನ್ನೂ ಓದಿ: Kranti Collection: ಕ್ರಾಂತಿ ಚಿತ್ರಕ್ಕೆ ಮೊದಲ ದಿನವೇ ಮೋಸ ! ರೊಚ್ಚಿಗೆದ್ದ ಅಭಿಮಾನಿಗಳು ಮಾಡಿದ್ದೇನು ? ಡಿ ಬಾಸ್ ಶಾಕ್!

ಒಟ್ಟಿನಲ್ಲಿ ಪಾಕಿಸ್ತಾನದ ಬಳಿ ಇರುವ ಎಲ್ಲಾ ಬತ್ತಳಿಕೆ ಖಾಲಿಯಾಗಿವೆ. ಸಹಾಯಕ್ಕಂತೂ ಯಾರು ಮುಂದೆ ಬರುತ್ತಿಲ್ಲ. ಬೇರೆ ರಾಷ್ಟ್ರಗಳೇ ಯಾಕೆ, ಆ ರಾಷ್ಟ್ರ ನಂಬಿರುವ ದೇವರು ಕೂಡ ಸಹಾಯ ಮಾಡುತ್ತಿಲ್ಲ ಅನ್ನೋದೇ ಆಶ್ಚರ್ಯ. ಅದರಲ್ಲೂ ಪಾಕಿಸ್ತಾನದ ಹಣಕಾಸು ಸಚಿವ ಇಶಾಖ ದರ್, ಆಗಿರುವ ಅನಿಷ್ಟಕ್ಕೆಲ್ಲ ಶನೇಶ್ವರ ಕಾರಣ ಎನ್ನುವಂತೆ ಅಲ್ಲಾಹ್ ಮೇಲೆ ಭಾರ ಹಾಕಿರೋದು ನಗು ತರಿಸುತ್ತದೆ.

Comments are closed.