Post Office: ಈ ಯೋಜನೆಯಲ್ಲಿ ನೀವು 15೦೦ ರೂ. ಹೂಡಿಕೆ ಮಾಡಿದ್ರೆ ಸಾಕು ಬರೋಬ್ಬರಿ 31 ಲಕ್ಷ ರೂ. ನಿಮ್ಮ ಜೇಬಿಗೆ; ಯಾವ ಯೋಜನೆ ಗೊತ್ತಾ?

Post Office: ಈಗ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಹೆಚ್ಚಿದೆ. ಅಂತೆಯೇ ಹಲವಾರು ಖಾಸಗಿ ಕಂಪನಿಗಳು ಹೂಡಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿವೆ. ಜನರು ಮಾತ್ರ ತಮಗೆ ಭರವಸೆ ನೀಡುವ ಕಂಪನಿಗಳಲ್ಲಿ ಹೂಡಿಕೆ ಮಾಡಬೇಕು. ಯಾಕೆಂದರೆ ನೀವು ಕಷ್ಟಪಟ್ಟು ದುಡಿದ ಹಣವು ಇತರರ ಪಾಲಾಗಬಾರದು. ನೀವು ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರಬೇಕು ಹಾಗೂ ಹೆಚ್ಚಿನ ಲಾಭ ಗಳಿಸಬೇಕು ಎಂದರೆ ಅದಕ್ಕೆ ಅಂಚೆ ಕಚೇರಿ ಒಳ್ಳೆಯ ಜಾಗವಾಗಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಇದನ್ನೂ ಓದಿ: UPI Payment: ಜಿ ಪೇ, ಫೋನ್ ಪೇ ಮೊದಲಾದ ಯುಪಿಐ ವಹಿವಾಟುದಾರರಿಗೆ ಶಾಕಿಂಗ್ ನ್ಯೂಸ್; ವಹಿವಾಟು ಮಿತಿಯಿಂದ ಬಳಕೆದಾರರು ಕಂಗಾಲು!

ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡುವುದು ಕಡಿಮೆ ಅಪಾಯದೊಂದಿಗೆ ಹೆಚ್ಚಿನ ಲಾಭ ತರುತ್ತದೆ. ಭಾರತದ ಗ್ರಾಮೀಣ ಭಾಗದ ಜನರನ್ನು ಗುರಿಯಾಗಿಸಿಕೊಂಡು ಅಂಚೆ ಕಚೇರಿಯಲ್ಲಿ ಹೂಡಿಕೆ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಉದ್ದೇಶಕ್ಕಾಗಿಯೇ ಗ್ರಾಮೀಣ ಸುರಕ್ಷಾ ಯೋಜನೆಯನ್ನು ಅಂಚೆ ಇಲಾಖೆ ಜಾರಿಗೆ ತಂದಿದೆ. ಇದನ್ನೂ ಓದಿ: Post Office Scheme: ಅಂಚೆ ಕಚೇರಿಯಲ್ಲಿ ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನೀವು ಕೋಟ್ಯಾಧಿಶರಾಗುವುದು ಪಕ್ಕಾ; ಯಾವ ಯೋಜನೆ ಗೊತ್ತೇ?

ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವವರು ತಿಂಗಳಿಗೆ 15೦೦ ರೂ. ಹೂಡಿಕೆ ಮಾಡಿದಲ್ಲಿ ಅವರು 31ರಿಂದ 35 ಲಕ್ಷ ರೂ. ವರೆಗೆ ವಾಪಸ್ ಪಡೆದುಕೊಳ್ಳುತ್ತಾರೆ. ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಲೇಬೇಕು. 19 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯ ಗರಿಷ್ಟ ವಯಸ್ಸು 55 ವರ್ಷಗಳು. ಈ ಯೋಜನೆ ಅಡಿಯಲ್ಲಿ ಕನಿಷ್ಟ ವಿಮಾ ಮೊತ್ತವು 1೦,೦೦೦ರೂ.ಗಳಿಂದ 1೦ ಲಕ್ಷ ರೂ. ವರೆಗೆ ಇರುತ್ತದೆ. ಈ ಯೋಜನೆಯ ಪ್ರಿಮಿಯಂನ್ನುನಿಮ್ಮ ಅನುಕೂಲಕ್ಕೆ ತಕ್ಕತೆ ಮೂರು ತಿಂಗಳು, ಆರು ತಿಂಗಳು ಅಥವಾ ವರ್ಷಕ್ಕೆ ಒಮ್ಮೆ ಪಾವತಿ ಮಾಡಬಹುದು. ವ್ಯಕ್ತಿಯು 8೦ ವರ್ಷ ಅಥವಾ ಅದಕ್ಕಿಂತ ಹೆಚ್ಚಾದಾಗ ಈ ಯೋಜನೆ ಉಪಯೋಗಕ್ಕೆ ಬರುತ್ತದೆ. ಗ್ರಾಹಕರಿಗೆ ಪ್ರಿಮಿಯಂ ಪಾವತಿಸಲು 3೦ ದಿನಗಳ ಗ್ರೇಸ್ ಅವಧಿಯನ್ನು ನೀಡಲಾಗಿದೆ. ಪಾಲಿಸಿ ಅವಧಿಯಲ್ಲಿ ಡಿಫಾಲ್ಟ್ ಆಗಿದ್ದಲ್ಲಿ ಪಾಲಿಸಿದಾರರು ಬಾಕಿ ಇರುವ ಹಣವನ್ನು ಪಾವತಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯವು ದೊರೆಯುತ್ತದೆ. ಪಾಲಿಸಿದಾರರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೂರು ವರ್ಷಗಳ ನಂತರ ಪಾಲಿಸಿಯನ್ನು ಸರಂಡರ್ ಮಾಡಬಹುದು.
ಒಬ್ಬ ವ್ಯಕ್ತಿಯು 19 ವರ್ಷದವನಿರುವಾಗ ಈ ಯೋಜನೆಯಲ್ಲಿ 1೦ ಲಕ್ಷ ರೂ. ಹೂಡಿಕೆ ಮಾಡಿದಲ್ಲಿ, ಮಾಸಿಕ ಪ್ರಿಮಿಯಂ 55 ವರ್ಷಕ್ಕಾದರೆ 1515 ರೂ.ಗಳು, 58 ವರ್ಷಕ್ಕಾದರೆ 1463 ರೂ.ಗಳು, 6೦ ವರ್ಷಕ್ಕಾದರೆ 1411 ರೂ.ಗಳನ್ನು ಪಾವತಿಸಬೇಕಾಗುತ್ತದೆ. 55 ವರ್ಷಗಳ ವಿಮೆಗೆ ಮ್ಯಾಚುರಿಟಿ ಲಾಭ 31.60 ಲಕ್ಷ ರೂ.ಗಳು ಸಿಗುತ್ತದೆ. 58 ವರ್ಷಗಳ ಪಾಲಿಸಿಗೆ 33.40 ಲಕ್ಷ ರೂ.ಗಳು, 6೦ ಲಕ್ಷ ರೂ.ಗಳ ಪಾವತಿಗೆ 34.60 ಲಕ್ಷ ರೂ. ನಿಮಗೆ ಸಿಗುತ್ತದೆ.

Comments are closed.