Astrology: ಮನೆಯಲ್ಲಿ ಅದೆಷ್ಟೇ ಹಣಕಾಸಿನ ಸಮಸ್ಯೆ ಇರಲಿ, ಶುಕ್ರವಾರದ ದಿನ ಹೀಗೊಂದು ಕೆಲಸ ಮಾಡಿ ನೋಡಿ; ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಉಳಿದುಬಿಡುತ್ತಾಳೆ!

Astrology: ಶುಕ್ರವಾರವನ್ನು ಲಕ್ಷ್ಮಿ ದೇವಿಗೆ ಮೀಸಲಾಗಿ ಇಡಲಾಗಿದೆ. ಮನೆಯಲ್ಲಿ ಧನ ಸಂಪತ್ತು ತುಂಬಿರಲಿ ಎಂದು ಶುಕ್ರವಾರ (Friday) ದ ದಿನದಂದು ಲಕ್ಷ್ಮಿ ದೇವಿ (Goddess Lakshmi) ಗೆ ವಿಶೇಷವಾದ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಹಿಳೆ (Women) ಯರು ಲಕ್ಷ್ಮಿಯನ್ನು ಶುಕ್ರವಾರದಂದು ಪೂಜೆ ಮಾಡಿದರೆ ಅದು ತುಂಬಾನೇ ಶ್ರೇಷ್ಠ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ನೀವು ಶುಕ್ರವಾರದ ದಿನ ಹೀಗೆ ಒಂದು ಕೆಲಸವನ್ನು ಮಾಡಬೇಕು. ಈ ರೀತಿ ಮಾಡಿದರೆ ಅದೃಷ್ಟ ಲಕ್ಷ್ಮಿ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ. ಜೀವನದಲ್ಲಿ ಖುಷಿ ನೆಮ್ಮದಿಯನ್ನು ತರುತ್ತಾಳೆ.

JYO 1 | Live Kannada News
Astrology: ಮನೆಯಲ್ಲಿ ಅದೆಷ್ಟೇ ಹಣಕಾಸಿನ ಸಮಸ್ಯೆ ಇರಲಿ, ಶುಕ್ರವಾರದ ದಿನ ಹೀಗೊಂದು ಕೆಲಸ ಮಾಡಿ ನೋಡಿ; ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಉಳಿದುಬಿಡುತ್ತಾಳೆ! https://sihikahinews.com/put-5-rs-coins-in-rice-box-and-goddess-lakshmi-gives-lots-of-money/

ಲಕ್ಷ್ಮಿ ದೇವಿಯನ್ನು ಮನೆಗೆ ಬರಮಾಡಿಕೊಳ್ಳುವುದಕ್ಕೆ ಸರಿಯಾದ ಹಾಗೂ ಸೂಕ್ತವಾದ ದಿನ ಅಂದರೆ ಶುಕ್ರವಾರ. ಹೌದು ಶುಕ್ರವಾರದ ದಿನ ಲಕ್ಷ್ಮಿ ದೇವಿ ಭಕ್ತರ ಮನೆಗೆ ಖುಷಿಯಿಂದ ಪ್ರವೇಶ ಮಾಡುತ್ತಾಳೆ. ಆದರೆ ಆಕೆಯನ್ನು ಬರಮಾಡಿಕೊಳ್ಳಲು ನೀವು ಕೆಲವು ಪೂಜಾ ನಿಯಮಗಳನ್ನ ವಿಧಿ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಲಕ್ಷ್ಮಿಯನ್ನು ಬರಮಾಡಿಕೊಳ್ಳುವಾಗ ನೀವು ಸಣ್ಣ ಲೋಪ ಮಾಡಿದರು ಕೂಡ ಲಕ್ಷ್ಮಿ ದೇವಿ ಅದನ್ನ ಸಹಿಸುವುದಿಲ್ಲ ಹಾಗಾಗಿ ಯಾವುದೇ ಲೋಪ ದೋಷಗಳಲ್ಲದೆ ಲಕ್ಷ್ಮಿಯನ್ನು ಆರಾಧನೆ ಮಾಡಿದರೆ ಆಕೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ. ಹಾಗಾದರೆ ಶುಕ್ರವಾರ ಏನು ಮಾಡಬೇಕು. ಇಲ್ಲಿದೆ ನೋಡಿ ಪೂಜಾಕ್ರಮ.

ಶುಕ್ರವಾರದ ದಿನ ನೀವು ಪೂಜೆ ಮಾಡುವುದಾದರೆ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಲಕ್ಷ್ಮಿಯ ಪೂಜೆ ಮಾಡುವುದಾದರೆ ಕೈಯಲ್ಲಿ ರೂ. 5 ನಾಣ್ಯವನ್ನು ಇಟ್ಟುಕೊಂಡು ಪೂಜೆಯನ್ನ ಆರಂಭಿಸಿ. ಪೂಜೆ ಮುಗಿಯುವವರೆಗೂ ಆ ಐದು ರೂಪಾಯಿಯ ನಾಣ್ಯ ನಿಮ್ಮ ಕೈಯಲ್ಲಿಯೇ ಇರಬೇಕು.

ಇನ್ನು ಎರಡನೆಯದಾಗಿ ಪೂಜೆ ಮಾಡುವಾಗ ಅದರಲ್ಲೂ ಶುಕ್ರವಾರದ ದಿನ ತುಪ್ಪದ ದೀಪವನ್ನು ಹಚ್ಚಬೇಕು. ಲಕ್ಷ್ಮಿಯ ಪೂಜೆ ಮಾಡುವಾಗ ತುಪ್ಪದ ದೀಪ ಹಚ್ಚುವುದು ಬಹಳ ಶ್ರೇಷ್ಠ ಅದರ ಜೊತೆಗೆ ಲಕ್ಷ್ಮಿ ದೇವಿಯನ್ನು ಸುಗಂಧ ಪುಷ್ಪಗಳಿಂದ ಅಲಂಕರಿಸಿ ಶ್ರೀಗಂಧ ಹಾಗೂ ಕುಂಕುಮ ಅರಿಶಿಣವನ್ನು ತಾಯಿಗೆ ಲೇಪನ ಮಾಡಿ ಜೊತೆಗೆ ಶುಕ್ರವಾರ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ.

ಇನ್ನು ಲಕ್ಷ್ಮಿ ಪೂಜೆಯ ಸಮಯದಲ್ಲಿ ಕೈಯಲ್ಲಿ ಐದು ರೂಪಾಯಿ ನಾಣ್ಯವನ್ನು ಹಿಡಿದಿರುತ್ತೀರಲ್ಲ, ಪೂಜೆಯ ನಂತರ ಆ ನಾಣ್ಯವನ್ನು ತೆಗೆದುಕೊಂಡು ಹೋಗಿ ಅಡುಗೆ ಮನೆಯ ಅಕ್ಕಿ ಡಬ್ಬಿಯಲ್ಲಿ ಹಾಕಿಡಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ಧಾನ್ಯದ ಕೊರತೆ ಆಗುವುದಿಲ್ಲ.

Comments are closed.