Astrology: ಹೊಸ ವರ್ಷದಲ್ಲಿ ಈ ಮೂರು ರಾಶಿಯವರಿಗೆ ರಾಹುವಿನಿಂದ ಅದೃಷ್ಟವೋ ಅದೃಷ್ಟ, ಯಾವ ರಾಶಿಯವರು ಯೋಗ ಪುರುಷರು ಗೊತ್ತೇ?

Astrology; ಜ್ಯೋತಿಷ್ಯ ಸೃಜಾ ಪ್ರಕಾರ ರಾಹು ಗ್ರಹ ಎಲ್ಲರಿಗೂ ಒಳ್ಳೆಯದನ್ನ ಮಾಡುವುದಿಲ್ಲ. ಯಾರೋ ಜಾತಕದಲ್ಲಿ ರಾಹು ವಿಭಿನ್ನ ಸ್ಥಾನದಲ್ಲಿ ಇರುತ್ತಾನೋ ಅಂತವರಿಗೆ ಸಮಸ್ಯೆ ಆಗುವುದು ಖಂಡಿತ ಮುಂದಿನ ವರ್ಷ ಅಂದರೆ 2023ರಲ್ಲಿ ತನ್ನ ರಾಶಿ ಚಕ್ರವನ್ನು ಬದಲಾಯಿಸಿ ಮೀನ ರಾಶಿಗೆ ರಾಹು ಗ್ರಹ ಪ್ರವೇಶ ಮಾಡಲಿದ್ದಾನೆ. ಈ ಬಾರಿ ರಾಹುವಿನ ಮೀನ ರಾಶಿಯ ಪ್ರವೇಶ ಕೆಲವು ರಾಶಿಯವರಿಗೆ ಅದೃಷ್ಟವನ್ನೇ ತರಲಿದೆ. ಹಾಗಾದರೆ ಒಂದು ವರ್ಷದವರೆಗೆ ರಾಹುವಿನಿಂದ ಉತ್ತಮ ಫಲವನ್ನೇ ಪಡೆಯುವ ರಾಶಿಗಳು ಯಾವವು ಎಂಬುದನ್ನ ನಾವೀಗ ನೋಡೋಣ.

ಜ್ಯೋತಿಷ್ಯ ಸದಾ ಪ್ರಕಾರ 2023 ಅಕ್ಟೋಬರ್ 30 ರಂದು ರಾಹು ಮೇಷ ರಾಶಿಯನ್ನು ತೊರೆದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಮೀನ ರಾಶಿಗೆ ರಾಹು ಪ್ರವೇಶ ಆದಾಗ ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತಾನೆ. ಅದರಲ್ಲೂ ಈ ಮೂರು ರಾಜ್ಯಗಳ ಮೇಲೆ ರಾಹುವಿನ ವಿಶೇಷ ಅನುಗ್ರಹ ಇದೆ ಆ ರಾಶಿಗಳೆಂದರೆ.. ಇದನ್ನೂ ಓದಿ:Karnataka Temple: ನಿಮ್ಮ ಮಕ್ಕಳು ಅತಿಯಾಗಿ ಹಠ ಮಾಡುತ್ತಾರಾ? ಹಾಗಾದ್ರೆ ಈ ದೇವಾಲಯದಲ್ಲಿ ಮಣ್ಣಿನ ಪ್ರಸಾದ ತಿನ್ನಿಸಿದರೆ ಮಕ್ಕಳು ಶಾಂತಸ್ವರೂಪಿಗಳಾಗುತ್ತಾರಂತೆ?! ಯಾವುದು ಆ ಪುಣ್ಯ ಕ್ಷೇತ್ರ ಗೊತ್ತೆ?

ವೃಷಭ ರಾಶಿ; ರಾಹುವಿನ ಸಂಚಾರ ಈ ರಾಶಿಯವರಿಗೆ ಸಾಕಷ್ಟು ಉತ್ತಮ ಫಲ ನೀಡಲಿದೆ ವೃಷಭ ರಾಶಿಯ 11ನೇ ಮನೆಯಲ್ಲಿ ರಾಹುವಿನ ಸಂಚಾರ ಮಂಗಳಕರ ಎನಿಸಿಕೊಳ್ಳುತ್ತದೆ ಹಿರಿಯ ಸಹೋದರ ಮತ್ತು ಸ್ನೇಹಿತರ ಬೆಂಬಲ ನಿಮಗೆ ಸಿಗುತ್ತದೆ. ಸ್ವಂತ ಉದ್ಯೋಗ ಮಾಡುವವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜೊತೆಗೆ ಹತ್ತಿರದವರಿಂದ ನಿಮ್ಮ ಉದ್ಯೋಗಕ್ಕೆ ಸಹಾಯವು ಸಿಗುತ್ತದೆ. ಧೈರ್ಯ ಹೆಚ್ಚಾಗಲಿದೆ. ಜೊತೆಗೆ ಬೇರೆ ಕಡೆ ಪ್ರಯಾಣ ಬೆಳೆಸಲಿದ್ದೀರಿ. ವೈದ್ಯಕೀಯ ವರ್ಗದಲ್ಲಿ ಇರುವವರಿಗೆ ಖ್ಯಾತಿ ಸಿಗುತ್ತದೆ. ಷೇರು ಮಾರುಕಟ್ಟೆ ಕೆಲಸ ಮಾಡುವವರಿಗೆ ಉತ್ತಮ ಲಾಭ ಸಂಗಾತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಯಾವುದೇ ವಿರಹ ಅಥವಾ ಉದ್ವೇಗ ಉಂಟಾಗದಂತೆ ಗಮನ ವಹಿಸಿ.

ತುಲಾ ರಾಶಿ; ರಾಹುವಿನ ಸಂಚಾರ ತುಲಾ ರಾಶಿಯ ಆರನೇ ಮನೆಯಲ್ಲಿ ಇರುತ್ತದೆ ಈ ಮನೆಯಲ್ಲಿ ರಾಹು ಕುಳಿತು ಹತ್ತನೇ ಮನೆ 11ನೇ ಮನೆ ಮತ್ತು ಎರಡನೇ ಮನೆಯಲ್ಲಿ ದೃಷ್ಟಿ ಹರಿಸುತ್ತಾನೆ. ಇದರಿಂದ ನಿಮ್ಮ ಜೀವನದಲ್ಲಿ ವರದಾನವೇ ಎಂದು ಹೇಳಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶ ಸಿಗುತ್ತದೆ ಭವಿಷ್ಯದಲ್ಲಿ ದೊಡ್ಡ ಉದ್ಯೋಗದ ಕೊಡುಗೆ ಪಡೆಯುತ್ತೀರಿ. ರಾಹುವಿನ ಅನುಗ್ರಹದಿಂದ ರಾಜಕೀಯದಲ್ಲಿ ತೊಡಗಿರುವವರಿಗೆ ಯಶಸ್ಸು ಸಿಗುತ್ತದೆ ದೊಡ್ಡ ಜವಾಬ್ದಾರಿ ನಿಮಗೆ ಒಲಿದು ಬರಬಹುದು ವಿದೇಶಕ್ಕೆ ಹೋಗಬೇಕು ಎಂದುಕೊಂಡಿರುವವರ ಕನಸು ನನಸಾಗುವ ಸಮಯ ಇದು ಕೌಟುಂಬಿಕ ಕಲಹದಲ್ಲಿ ಬಾಕಿಯಾಗುವುದನ್ನು ತಪ್ಪಿಸಿ.

ಮಕರ ರಾಶಿ: ಮೂರನೇಯಿಂದ ರಾಹು ಸಂಕ್ರಮಣ ಆಗಲಿದೆ ರಾಹುವಿನ ದೃಷ್ಟಿ ನಿಮ್ಮ 7ನೆಯ, 9ನೇಯ ಮತ್ತು 11ನೆಯ ಮನೆಯ ಮೇಲೆ ಇರುತ್ತದೆ. ಇದರಿಂದ ನಿಮ್ಮಲ್ಲಿ ಧೈರ್ಯ ಹೆಚ್ಚಾಗುತ್ತದೆ ಈ ವರ್ಷವಿಡೀ ಅದೃಷ್ಟ ಸಂಪೂರ್ಣವಾಗಿ ನಿಮ್ಮ ಜೊತೆ ಇರುತ್ತದೆ ಮಾಧ್ಯಮ ಬರವಣಿಗೆ ಮತ್ತು ಸಂವಹನಕ್ಕೆ ಸಂಬಂಧಿಸಿದ ವೃತ್ತಿ ನಿರ್ವಹಿಸುವವರಿಗೆ ಸಾಕಷ್ಟು ಉತ್ತಮ ಫಲ ಸಿಗಬಹುದು. ಈ ಕೆಲಸಕ್ಕೆ ಸಂಬಂಧಪಟ್ಟ ಹಾಗೆ ನೀವು ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ಸ್ನೇಹಿತರು ನಿಮ್ಮ ಸಹಾಯಕ್ಕೆ ಧಾವಿಸುತ್ತಾರೆ. ಇದರಿಂದಾಗಿ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ ರಾಹುವಿನ ಸಂಚಾರದಿಂದಾಗಿ ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ರಾಹುವಿನ ಫಲ ಪಡೆಯಲು ರಾಹುವನ್ನು ಬಲಪಡಿಸಿ;

ನಿಮ್ಮ ಜಾತಕದಲ್ಲಿ ರಾಹುವಿನ ಸಂಚಾರವನ್ನು ಬಲಪಡಿಸಲು ಈ ರೀತಿ ಮಾಡಿದರೆ ಒಳ್ಳೆಯದು ಎನ್ನುತ್ತೆ ಜ್ಯೋತಿಷ್ಯಶಾಸ್ತ್ರ.

ಪಕ್ಷಿಗಳಿಗೆ ಏಳು ಬಗೆಯ ಧಾನ್ಯಗಳನ್ನು ನೀಡಬೇಕು. ರಾಹುವಿನ ವೈದಿಕ ಮಂತ್ರಗಳನ್ನು ಪಠಣೆ ಮಾಡಬೇಕು. ಬೇರೆಯವರಿಗೆ ದ್ರೋಹ ಮಾಡುವುದು ಸುಳ್ಳು ಹೇಳುವುದನ್ನು ತಪ್ಪಿಸಬೇಕು. ರಾಹುವಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು. ಸದಾ ರಾಹು ಸ್ತೋತ್ರ ಹಾಗೂ ರಾಹು ಕವಚಗಳನ್ನ ಪಠಿಸಿ. ಪೂರ್ವ ಮತ್ತು ವಾಯುವ್ಯ ದಿಕ್ಕಿನಲ್ಲಿ ಗೋಡೆಯ ಮೇಲೆ ನವಿಲುಗರಿಯನ್ನು ನೇತು ಹಾಕಿದರೆ ಉತ್ತಮ. ಸದಾ ನಿಮ್ಮ ಬಳಿ ಚಂದನವನ್ನ ಇಟ್ಟುಕೊಳ್ಳಿ. ಬಿಳಿ ಶ್ರೀಗಂಧದ ಮನೆಯ ಹಾರವನ್ನು ಧರಿಸಿದರೆ ಒಳ್ಳೆಯದಾಗುತ್ತದೆ.

Comments are closed.