Ration card: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ; ಯಾವಾಗಿಂದ ಯಾರು ಅಪ್ಲೈ ಮಾಡಬಹುದು ನೋಡಿ!

Ration card: ಈಗಾಗಲೇ ರಾಜ್ಯದಲ್ಲಿ ಪ್ರತಿಯೊಂದು ಕುಟುಂಬಗಳಲ್ಲಿ ಕೂಡ ರೇಷನ್ ಕಾರ್ಡ್ ಅಗತ್ಯತೆಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭವಾಗುತ್ತದೆ ಎನ್ನುವಂತಹ ಕಾತುರತೆಯಲ್ಲಿ ಇದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತಹ ಸಾಕಷ್ಟು ಯೋಜನೆಗಳಿಗೆ ಪ್ರಮುಖ ದಾಖಲೆ ಪತ್ರದ ರೂಪದಲ್ಲಿ ರೇಷನ್ ಕಾರ್ಡ್ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ರಾಜ್ಯದಲ್ಲಿ ದಿನೇ ದಿನೇ ಏರುತ್ತಿದೆ ಎಂದು ಹೇಳಬಹುದು. ಇದಕ್ಕಿಂತಲೂ ಪ್ರಮುಖವಾಗಿ ಕೊನೆಯ ಬಾರಿಗೆ ಎರಡುವರೆ ವರ್ಷಗಳ ಹಿಂದೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದಕ್ಕೆ ಕೊನೆಯ ಬಾರಿಗೆ ಅವಕಾಶ ನೀಡಲಾಗಿತ್ತು ಹೀಗಾಗಿ ಆ ಬಾರಿ ಅರ್ಜಿ ಸಲ್ಲಿಸಿರುವವರ ರೇಷನ್ ಕಾರ್ಡ್ ಬರೋದು ಕೂಡ ಬಾಕಿ ಇದೆ ಅನ್ನೋದನ್ನ ನಾವು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

ಇನ್ನು ಇತ್ತೀಚಿಗಷ್ಟೇ ಕೆಲವು ವಿಶೇಷ ವರ್ಗದ ಜನರಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವಂತಹ ಅವಕಾಶವನ್ನು ನೀಡಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ. ಮೆಡಿಕಲ್ ಅರ್ಜೆನ್ಸಿ ಹಾಗೂ ಹೊಸದಾಗಿ ಮದುವೆಯಾಗಿ ಹೊಸ ಮನೆಯಲ್ಲಿ ಜೀವಿಸುತ್ತಿರುವಂತಹ ನವಜೋಡಿಗಳಿಗೆ ಕೂಡ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಹ ಅವಕಾಶಗಳನ್ನು ನೀಡಲಾಗಿತ್ತು ಎನ್ನುವುದಾಗಿ ತಿಳಿದು ಬಂದಿತ್ತು. ಸೇವಾ ಕೇಂದ್ರಗಳಲ್ಲಿ ಕೂಡ ಕೆಲವು ಗಂಟೆಗಳ ಕಾಲ ಮಾತ್ರ ಸರ್ವರ್ ನಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ಹಾಗೂ ಇರುವಂತಹ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಮಾಡುವುದಕ್ಕೆ ಅವಕಾಶವನ್ನು ನೀಡಲಾಗಿತ್ತು ಆದರೆ ಅದು ಕೂಡ ಕೇವಲ ಕೆಲವು ಸಮಯಗಳಿಗಾಗಿ ಮಾತ್ರ ಎಂಬುದನ್ನು ನಿಗದಿಪಡಿಸಲಾಗಿತ್ತು. ಇದನ್ನು ಕೂಡ ಸರ್ಕಾರ ಕೊನೆಯ ವಾರದಲ್ಲಿ ಮಾತ್ರ ಜಾರಿಗೆ ತಂದಿದ್ದು. ಆದರೆ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಬಗ್ಗೆ ಈಗ ಹೊಸ ಅಪ್ಡೇಟ್ ಕೇಳಿ ಬರುತ್ತಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಯಾವಾಗಿಂದ ಪ್ರಾರಂಭ?

ರಾಜ್ಯದಲ್ಲಿ ಹೊಸ ಪಡಿತರ ಚೀಟಿಯನ್ನು ಪಡೆದುಕೊಳ್ಳುವುದಕ್ಕೆ ಯಾವಾಗಿನಿಂದ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಪ್ರಾರಂಭವಾಗಲಿದೆ ಎನ್ನುವುದರ ಬಗ್ಗೆ ಸಾಕಷ್ಟು ಜನರಿಗೆ ಇದುವರೆಗೂ ಕೂಡ ಗೊಂದಲ ಇದೆ. ಕೇಳಿ ಬಂದಿರುವ ಕೆಲವೊಂದು ಮಾಹಿತಿಗಳ ಪ್ರಕಾರ ಈಗ ನಡೆಯುತ್ತಿರುವಂತಹ ಚುನಾವಣೆಯ ಫಲಿತಾಂಶ ಹೊರಬಂದ ನಂತರ ರಾಜ್ಯ ಸರ್ಕಾರ ನಿಧಾನ ಗತಿಯಲ್ಲಿ ಹೊಸ ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳುವಂತಹ ಪ್ರಕ್ರಿಯೆಯನ್ನು ರಾಜ್ಯದಾದ್ಯಂತ ಪ್ರಾರಂಭ ಮಾಡಲಿದೆ ಎಂದು ಹೇಳಬಹುದಾಗಿದೆ. ಇನ್ನು ಇದಕ್ಕಾಗಿ ನೀವು ಹೆಚ್ಚಿನ ಮಾಹಿತಿಯನ್ನು ಅಧಿಕೃತವಾಗಿ ಗ್ರಾಮವನ್ ಸೇವ ಕೇಂದ್ರಗಳಲ್ಲಿ ಕೇಳಿ ಪಡೆದುಕೊಳ್ಳಬಹುದಾಗಿತ್ತು ಇಲ್ಲಿ ನಿಮಗೆ ಸರಿಯಾದ ಮಾಹಿತಿ ಖಂಡಿತವಾಗಿ ಸಿಗಲಿದೆ. ಒಂದು ವೇಳೆ ನೀವು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಹ ಉಮೇದು ವಾರರಾಗಿದ್ರೆ ಚುನಾವಣೆ ಫಲಿತಾಂಶ ಬರುವವರೆಗೂ ಕೂಡ ಕಾಯ ಬೇಕಾಗಿರುತ್ತದೆ.

Comments are closed.