ಕ್ರಿಕೆಟ್ ನಿಂದ ಬಹುತೇಕ ದೂರ ಸರಿದಿರುವ ಒಂದು ಕಾಲದ ಟಾಪ್ ಪ್ಲೇಯರ್ ರಾಬಿನ್ ಉತ್ತಪ್ಪ ಶೀತಲ್‌ ದಂಪತಿಗೆ ಹೆಣ್ಣು ಮಗು: ಶುಭಾಶಯಗಳ ಮಹಾಪೂರ

ಟೀಮ್ ಇಂಡಿಯಾ ಆಟಗಾರರಾಗಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ. ರಾಬಿನ್ ಉತ್ತಪ್ಪ ಹಾಗೂ ಅವರ ಪತ್ನಿ ಶೀತಲ್ ಗೆ ಹೆಣ್ಣು ಮಗು ಜನನವಾಗಿದೆ ಇದನ್ನ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಗೂ ಇತರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ ಸಂತೋಷವನ್ನು ಹಂಚಿಕೊಂಡಿದ್ದಾರೆ ರಾಬಿನ್ ಉತ್ತಪ್ಪ. ಇವರಿಗೆ ಇದು ಎರಡನೇ ಮಗುವಾಗಿದ್ದು 2017ರಲ್ಲಿ ರಾಬಿನ್ ಉತ್ತಪ್ಪ ದಂಪತಿಗೆ ಗಂಡು ಮಗು ಆಗಿತ್ತು.

ಬಲಗೈ ಬ್ಯಾಟ್ಸ್ ಮ್ಯಾನ್ ಆಗಿ ಫೇಮಸ್ ಆಗಿದ್ದ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ನಲ್ಲಿ ಆಟವಾಡುತ್ತಿದ್ದರು. 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಮ್ಯಾಚ್ ಗಳಲ್ಲಿ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿದ್ದು 12 ಪಂದ್ಯಗಳಲ್ಲಿ 230 ರನ್ ಗಳಿಸಿದ್ದರು.

ರಾಬಿನ್ ಉತ್ತಪ್ಪ ಅವರ ಗಂಡು ಮಗುವಿನ ಹೆಸರು ನೀಲ್ ನೋಲನ್ ಉತ್ತಪ್ಪ. ಈಗ ಅವರ ಕುಟುಂಬಕ್ಕೆ ಸೇರಿದ ಇನ್ನೊಬ್ಬ ಸದಸ್ಯ ಅವರ ಹೆಣ್ಣು ಮಗು. ತಮ್ಮ ಮಗಳಿಗೆ ಟ್ರೀನಿಟಿ ಥಿಯೆ  ಉತ್ತಪ್ಪ ಎಂದು ರಾಬಿನ್ ಉತ್ತಪ್ಪ ಹಾಗೂ ಶೀತಲ ದಂಪತಿ ನಾಮಕರಣ ಮಾಡಿದ್ದಾರೆ. ರಾಬಿನ್ ಉತ್ತಪ್ಪ ತಮ್ಮ ಪತ್ನಿ ಹಾಗೂ ಮಗನ ಜೊತೆಗಿನ ಸುಂದರ ಕ್ಷಣಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಇದೀಗ ಟೀಮ್ ಇಂಡಿಯಾದ ಹಿರಿಯ ಬ್ಯಾಟ್ಸ್ ಮ್ಯಾನ್ ಆಗಿರುವ ರಾಬಿನ್ ಉತ್ತಪ್ಪ, ತನ್ನ ಪತ್ನಿ ಮಗ ಹಾಗೂ ಈಗ ತಾನೆ ಹುಟ್ಟಿರುವ ಹೆಣ್ಣು ಮಗುವಿನ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಮಗುವನ್ನು ಆಶೀರ್ವದಿಸಿದ್ದಕ್ಕೆ ನಾವು ಕೃತಜ್ಞರಾಗಿದ್ದೇವೆ ಅಂತ ರಾಬಿನ್ ಉತ್ತಪ್ಪ ಪೋಸ್ಟ್ ಮಾಡಿದ್ದರು.

‘ನಮ್ಮ ಹೃದಯ ತುಂಬಿ ಬಂದಿದೆ ನಾವು ನಮ್ಮ ಹೊಸ ಏಂಜೆಲ್ ಅನ್ನು ಪರಿಚಯ ಮಾಡುತ್ತಿದ್ದೇವೆ. ಇವಳೇ ನಮ್ಮ ಟ್ರಿನಿಟಿ ಥೇಯ ಉತ್ತಪ್ಪ. ನಾವು ನಮ್ಮನ್ನ ತಂದೆ ತಾಯಿಯಾಗಿ ನೀನು ಸ್ವೀಕರಿಸಿದ್ದಕ್ಕೆ ನಿನಗೆ ಕೃತಜ್ಞತೆಯನ್ನು ಹೇಳುತ್ತೇವೆ. ನಿನ್ನ ತಂದೆ ತಾಯಿ ಹಾಗೂ ಅಣ್ಣನಾಗುವುದಕ್ಕೆ ನಾವು ಪುಣ್ಯ ಮಾಡಿದ್ವಿ’ ಅಂತ ಉತ್ತಪ್ಪ ಅವರು ಪೋಸ್ಟ್ ಬರೆದುಕೊಂಡಿದ್ದಾರೆ.

ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ಆಗಿದ್ದ ರಾಬಿನ್ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚಾಂಪಿಯನ್ ತಂಡಕ್ಕೆ ಬೆಂಬಲಿಗ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.  ರಾಬಿನ್ ಉತ್ತಪ್ಪ ಅವರು 2006ರಲ್ಲಿ ಟೀಮ್ ಇಂಡಿಯಾ ಸೇರ್ಪಡೆಯಾದರು. ಇಲ್ಲಿಯವರೆಗೆ 46 ಓಡಿಐ ಪಂದ್ಯಗಳನ್ನು ಆಡಿದ್ದು 934 ರನ್ನುಗಳನ್ನು ಗಳಿಸಿದ್ದಾರೆ. ಇನ್ನು ಅಂತರಾಷ್ಟ್ರೀಯ ಟಿ20 ಪಂದ್ಯಗಳಿಂದ 249 ರನ್ ಗಳಿಸಿದ್ದು 13 ಟಿ20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ತಮ್ಮ ಮಗಳ ಆಗಮನದಿಂದ ಅತ್ಯಂತ ಸಂತಸದಲ್ಲಿದೆ ರಾಬಿನ್ ಉತ್ತಪ್ಪ ಕುಟುಂಬ.

Leave A Reply

Your email address will not be published.