RTC Name Change:ಆನ್ಲೈನ್ ಮೂಲಕವೇ ಆರ್ ಟಿ ಸಿ ನಲ್ಲಿ ಹೆಸರನ್ನು ತಿದ್ದುಪಡಿ ಮಾಡಿಕೊಳ್ಳುವಂತಹ ಸುಲಭ ವಿಧಾನ ಇಲ್ಲಿದೆ ನೋಡಿ!

RTC Name Change: ಜಮೀನಿನ ಪಹಣಿ ಪತ್ರದಲ್ಲಿ ಒಂದು ವೇಳೆ ಹೆಸರು ತಪ್ಪಾಗಿ ದಾಖಲಾಗಿದ್ದರೆ ಅವುಗಳನ್ನು ಯಾವ ರೀತಿಯಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು ಎನ್ನುವುದರ ಬಗ್ಗೆ ಸಾಕಷ್ಟು ರೈತರಿಗೆ ಮಾಹಿತಿ ಇಲ್ಲದೆ ಇರಬಹುದು ಹೀಗಾಗಿ ಇವತ್ತಿನ ಈ ಲೇಖನದ ಮೂಲಕ ಯಾವ ರೀತಿಯಲ್ಲಿ ಆನ್ಲೈನ್ ಮೂಲಕ ಇದನ್ನು ಸರಿಪಡಿಸಿಕೊಳ್ಳಬಹುದಾಗಿದೆ ಎನ್ನುವಂತಹ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಆನ್ಲೈನ್ ಮೂಲಕ ಪಹಣಿ ಪತ್ರದಲ್ಲಿ ಹೆಸರು ತಿದ್ದುಪಡಿ ಮಾಡುವ ವಿಧಾನ!

ಬೇಕಾಗಿರುವ ಪ್ರಮುಖ ಡಾಕ್ಯುಮೆಂಟ್ಸ್ ಗಳು!

  • ಆಧಾರ್ ಕಾರ್ಡ್ ಜೆರಾಕ್ಸ್
  • ಈಗ ಲಭ್ಯ ಇರುವಂತಹ ಪಹಣಿಪತ್ರ ಇರಬೇಕು.
  • ರೂ. 20 ಮೌಲ್ಯ ಇರುವಂತಹ ಬಾಂಡ್ ಪೇಪರ್ ಮೇಲೆ ಪಹಣಿ ಪತ್ರದಲ್ಲಿ ಹೆಸರು ತಿದ್ದುಪಡಿ ಮಾಡಿಸುವ ಬಗ್ಗೆ ಪ್ರತಿಯೊಂದ ಮಾಹಿತಿ ಇರಬೇಕು ಹಾಗೂ ವಕೀಲರಿಂದ ತಪ್ಪದೇ ನೋಟರಿ ಮಾಡಿಸಬೇಕು.
  • ಇದರ ಬಗ್ಗೆ ಮಾದರಿ ಅರ್ಜಿಯನ್ನು ಕೂಡ ನೀವು ಸಿದ್ಧಪಡಿಸಬೇಕಾಗಿರುತ್ತದೆ.

ಭೂಕೇಂದ್ರದವರು ನೀವು ಕಳಿಸಿರುವ ಅಂತಹ ಅರ್ಜಿ ಸಲ್ಲಿಕೆಯನ್ನು ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳಿಸುತ್ತಾರೆ. ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾದ ರೀತಿಯಲ್ಲಿ ಪರಿಶೀಲಿಸಿ ಅದರಲ್ಲಿ ಯಾವುದಾದರೂ ತಿದ್ದುಪಡಿ ಅಗತ್ಯವಿದ್ದರೆ ಭೂ ಕೇಂದ್ರದವರಿಗೆ ಸೂಚಿಸುತ್ತಾರೆ ಹಾಗೂ ಅದನ್ನು ರಿಜೆಕ್ಟ್ ಮಾಡುವಂತಹ ಹಕ್ಕು ಕೂಡ ಅವರಲ್ಲಿ ಇರುತ್ತದೆ. ಇದಾದ ನಂತರ ಅವರು ಪಹಣಿ ಪಾತ್ರದಲ್ಲಿ ಇರುವಂತಹ ತಿದ್ದುಪಡಿಯನ್ನ ಅಂಗೀಕರಿಸುವಂತೆ ಭೂ ಕೇಂದ್ರದವರಿಗೆ ಆದೇಶ ನೀಡುತ್ತಾರೆ.

ಪಹಣಿ ಪತ್ರವನ್ನು ಮನೆಯಲ್ಲಿ ಕುಳಿತುಕೊಂಡು ಚೆಕ್ ಮಾಡೋದು ಹೇಗೆ?

ಇದಕ್ಕಾಗಿ ನೀವು ಪ್ರಮುಖವಾಗಿ ಕಂದಾಯ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕಾಗಿರುತ್ತದೆ. ಇಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಗ್ರಾಮವನ್ನು ನಮೂದಿಸಿ ಯಾವ ವರ್ಷದ ಪಹಣಿಯನ್ನು ನೋಡಬೇಕು ಅನ್ನೋದನ್ನ ನೀವು ನಮೂದಿಸಬೇಕಾಗಿರುತ್ತದೆ. ಒಂದು ವೇಳೆ ನಿಮ್ಮ ಜಮೀನಿನಲ್ಲಿ ಯಾವುದಾದರೂ ವ್ಯವಹಾರ ನಡೆದಿದ್ದರೆ ಅದನ್ನು ಕೂಡ ನೀವು ನಿಮ್ಮ ಪಹಣಿ ಪತ್ರದಲ್ಲಿ ಗುರುತಿಸಬಹುದಾಗಿದೆ. ಹಾಗಿದ್ರೆ ಬನ್ನಿ ಇದನ್ನ ಹಂತ ಹಂತವಾಗಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

  • ಆನ್ಲೈನ್ ಆರ್ ಟಿ ಸಿ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಭೂಮಿ ವೆಬ್ ಸೈಟ್ ಗೆ ನೀವು ಹೋಗಬೇಕಾಗಿರುತ್ತದೆ.
  • ಇದಾದ ನಂತರ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಗ್ರಾಮದ ಆಯ್ಕೆಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕಾಗಿರುತ್ತದೆ. ನಂತರ ಸರ್ವೆ ನಂಬರ್ ಹಾಕಿ ಗೋ ಎಂಬುದಾಗಿ ಕ್ಲಿಕ್ ಮಾಡಬೇಕಾಗಿರುತ್ತದೆ.
  • ನಿಮ್ಮ ಹಿಸ್ಸ ಸಂಖ್ಯೆಯನ್ನು ಆಯ್ಕೆ ಮಾಡಿ ಡೀಟೇಲ್ಸ್ ಪಡೆದುಕೊಳ್ಳುವಂತಹ ಬಟನ್ ಮೇಲೆ ಕ್ಲಿಕ್ ಮಾಡಬೇಕು.
  • ಆಗ ನೀವು ನಿಮ್ಮ ಆರ್ ಟಿ ಸಿ ಯ ಪ್ರತಿಯೊಂದು ಮಾಹಿತಿಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ ಹಾಗೂ ಯಾವುದಾದರೂ ಬದಲಾವಣೆ ಮಾಡಿಕೊಳ್ಳಬೇಕು ಎನ್ನುವುದಾಗಿದ್ರೆ ಈ ಮೇಲೆ ತಿಳಿಸಿರುವಂತೆ ಇರುವಂತಹ ಪ್ರಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ಫಾಲೋ ಮಾಡುವ ಮೂಲಕ ಈ ಕೆಲಸವನ್ನು ಮಾಡಬಹುದಾಗಿದೆ.

Comments are closed.