SBI Bank RD Offer: ಚಿಲ್ಲರೆ 200 ರೂಪಾಯಿ ಉಳಿಸುವ ಮೂಲಕ 10 ಲಕ್ಷ ಲಾಭ ಪಡೆಯುವುದು ಹೇಗೆ ಗೊತ್ತೇ?? SBI ನಿಂದ ಭರ್ಜರಿ ಸಿಹಿ ಸುದ್ದಿ. ಯಾವ ಯೋಜನೆ ಗೊತ್ತೇ?

SBI Bank RD Offer: SBI ತನ್ನ ಗ್ರಾಹಕರಿಗೆ ಅನುಕೂಲವಾಗುವಂತೆ ಸಾಕಷ್ಟು ಯೋಜನೆ (Plan)ಗಳನ್ನು ರೂಪಿಸಿಕೊಂಡು ಬಂದಿದೆ. ಅವುಗಳಲ್ಲಿ ಉಳಿತಾಯ ಯೋಜನೆ ಕೂಡ ಒಂದು. ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಅತ್ಯಂತ ನಂಬಿಕಸ್ಥ ಬ್ಯಾಂಕ್ (Bank) ಕೂಡ ಆಗಿದ್ದು, ಗ್ರಾಹಕರಿಗೆ ಹಲವು ರೀತಿಯ ಸೇವೆಗಳನ್ನು ಒದಗಿಸುತ್ತದೆ. ಅಂದಹಾಗೆ ಕೇವಲ 200ರೂ. ಗಳಿಂದ ಠೇವಣಿ ಆರಂಭಿಸಿ ಅತ್ಯಂತ ಬೇಗ ಲಕ್ಷಾಧಿಪತಿಗಳಾಗುವ ಒಂದು ವಿನೂತನ ಎಸ್ ಬಿ ಐ ಉಳಿತಾಯ ಯೋಜನೆ (SBI Savings Plan) ಯ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವೆ. ಮುಂದೆ ಓದಿ.

ಎಸ್ ಬಿ ಐ ನ ಮರುಕಳಿಸುವ ಠೇವಣಿ (Recurring Deposit)

SBI ತನ್ನ ಗ್ರಾಹಕರಿಗೆ ಮರುಕಳಿಸುವ ಠೇವಣಿಗಳ ಮೇಲೆ 6.75% ಬಡ್ಡಿ (Interest) ಯನ್ನು ಒದಗಿಸುತ್ತಿದೆ. ಠೇವಣಿ ಇಟ್ಟ ಅವಧಿಅಯ ಮೇಲೆ ಬಡ್ಡಿದರವೂ ಕೂಡ ಬದಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.  ಒಂದರಿಂದ ಎರಡು ವರ್ಷಗಳ ಅವಧಿಯಲ್ಲಿ, ನೀವು 6.75% ಬಡ್ಡಿಯನ್ನು ಪಡೆಯಬಹುದು.  ಎರಡರಿಂದ ಮೂರು ವರ್ಷಗಳ ಠೇವಣಿಗೂ ಇದೇ ಬಡ್ದಿ ದರ ಅನ್ವಯವಾಗುತ್ತದೆ. ಮುಂದುವರೆದು, ಮೂರು ವರ್ಷದಿಂದ ಐದು ವರ್ಷಗಳವರೆಗೆ ಠೇವಣಿಗಳ ಮೇಲಿನ ಬಡ್ಡಿ ದರವು 6.25% ನಿಗದಿಯಾಗಿದೆ. ಐದರಿಂದ ಹತ್ತು ವರ್ಷಗಳ ಅವಧಿಯ ಸ್ಥಿರ ಠೇವಣಿಗಳ ಮೇಲೂ ಇದೇ ಅನ್ವಯವಾಗುತ್ತದೆ, ಹಿರಿಯ ನಾಗರಿಕರಿಗೆ ಇದೇ ಠೇವಣಿ ಮೇಲೆ ಶೇ.7.25 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಇದನ್ನೂ ಓದಿ: Relationship: ಹೆಂಡತಿಯರು ಯಾರು ಸುಮ್ಮನೆ ಮೋಸ ಮಾಡುವುದಿಲ್ಲ, ಗಂಡನಿಗೆ ಮೋಸ ಮಾಡಲು ಇರುವ ಮೂರು ಕಾರಣಗಳೇನು ಗೊತ್ತೇ?

ಈ ಉಳಿತಾಯದ ಬಗ್ಗೆ ಸುಲಭವಾಗಿ ಹೇಳಬೇಕೆಂದರೆ, ನೀವು 10 ವರ್ಷಗಳ ಅವಧಿಗೆ ಎಸ್‌ಬಿಐನಲ್ಲಿ ಮರುಕಳಿಸುವ ಠೇವಣಿ ಉಳಿತಾಯವನ್ನು ಆರಂಭಿಸಿದ್ದೀರಿ ಎಂದುಕೊಳ್ಳಿ. ಪ್ರತಿ ತಿಂಗಳು ನೀವು ರೂ. 6,200 ಠೇವಣಿ ಇಡಬೇಕಾಗುತ್ತದೆ. ಅಂದರೆ  ದಿನಕ್ಕೆ ಸುಮಾರು ರೂ.200 ಕೂಡಿಟ್ಟರೆ ಸಾಕು. ಅಂದರೆ  ತಿಂಗಳಿಗೆ ರೂ. 6,200 ಅನ್ನು ಮರುಕಳಿಸುವ ಠೇವಣಿ ಯೋಜನೆಯಲ್ಲಿ ಹತ್ತು ವರ್ಷಗಳವರೆಗೆ ಹೂಡಿಕೆ ಮಾಡುತ್ತಾ ಬಂದರೆ ಹಣ ಮೆಚ್ಯೂರಿಟಿಯಾಗುವಾಗ ನೀವು ಒಟ್ಟು ರೂ. 10 ಲಕ್ಷಕ್ಕೂ ಹೆಚ್ಚು ಹಣ ಗಳಿಸಿರುತ್ತೀರಿ. ಠೇವಣಿದಾರ ಪಡೆಯುವ ಆದಾಯ ಠೇವಣಿ ಇಡುವ ಮೊತ್ತವನ್ನು ಅವಲಂಬಿಸಿರುತ್ತದೆ. ನೀವು ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚು ಲಾಭವನ್ನು ಪಡೆಯಬಹುದು. ಇದನ್ನೂ ಓದಿ: Darshan Birthday Celebration: ದಿಡೀರ್ ಎಂದು ಅಭಿಮಾನಿಗಳಲ್ಲಿ ಮತ್ತೊಂದು ಮನವಿ ಮಾಡಿದ ದರ್ಶನ್. ಏನಂತೆ ಗೊತ್ತೇ?? ಇದು ಬೇಕಿತ್ತಾ ಈಗ?

SBI ಮರುಕಳಿಸುವ ಠೇವಣಿ ತೆರೆಯುವುದು ಹೇಗೆ?

ನೀವು ಇದಕ್ಕಾಗಿ ಎಸ್ ಬಿ ಐ ಬ್ಯಾಂಕ್ ಶಾಖೆಗೇ ಹೋಗಬೆಕಾಗಿಲ್ಲ ಸ್ನೇಹಿತರೆ, SBI ಗ್ರಾಹಕರು Yono ಅಪ್ಲಿಕೇಶನ್ ಮೂಲಕ ಆರ್ ಡಿ ಖಾತೆಯನ್ನು ತೆರೆಯಬಹುದಾಗಿದೆ. ಪ್ರತಿ ತಿಂಗಳು ಮನೆಯಲ್ಲಿಯೆ ಕುಳಿತು ನಿಗದಿತ ಹಣವನ್ನು ಠೇವಣಿ ಮಾಡಬಹುದು. ಎಸ್‌ಬಿಐ ಅಲ್ಲದ ಗ್ರಾಹಕರು ಬ್ಯಾಂಕ್‌ಗೆ ಹೋಗಿ ಈ ಖಾತೆಯನ್ನು ತೆರೆಯಬೇಕು. ನಂತರ ಆನ್ ಲೈನ್ ಮೂಲಕ ವ್ಯವಹಾರ ಮಾಡಬಹುದು.

ಆಟೋ ಡೆಬಿಟ್ ಸೌಲಭ್ಯ:

ಎಸ್ ಬಿ ಐ ನಲ್ಲಿ ಮರುಕಳಿಸುವ ಠೇವಣಿ ಆರಂಭಿಸಿದರೆ, ಆಟೋ ಡೆಬಿಟ್ ಸೌಲಭ್ಯ ಪಡೆಯಬಹುದು. ಇದರಿಂದಾಗಿ, ಪ್ರತಿ ತಿಂಗಳು ಹಣವು ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ನಿಗದಿತ ದಿನ ನಿಗದಿತ ಮೊತ್ತ ಆರ್ ಡಿ ಖಾತೆಗೆ ಹೋಗುತ್ತದೆ. ನೀವು ಬ್ಯಾಂಕ್‌ಗೆ ಹೋಗಿ ಹಣ ಜಮಾ ಮಾಡಬೇಕಾಗಿಲ್ಲ. ಕ್ಯು ನಿಲ್ಲಬೇಕಾಗಿಲ್ಲ, ಕೆಲಸ ಬಿಟ್ಟು ಹಣ ಕಟ್ತಲು ಕಾಯಬೇಕಾಗಿಲ್ಲ. ಅಷ್ಟೇ ಅಲ್ಲ ಆರ್‌ಡಿ ಖಾತೆ ಹೊಂದಿದ್ದರೆ ನಿಒಗದಿತ ಲಿಮಿಟ್ ನಲ್ಲಿ  ಸುಲಭವಾಗಿ ಸಾಲವನ್ನೂ ಕೂಡ ಪಡೆಯಬಹುದು.

Comments are closed.