serial: ಧಾರಾವಾಹಿಯಲ್ಲಿ ಮಿಂಚುತ್ತಿರುವ ಸಿಹಿಯ ನಿಜವಾದ ತಾಯಿ ಯಾರು ಗೊತ್ತೇ??

serial: ಇತ್ತೀಚಿನ ದಿನಗಳಲ್ಲಿ ಜನರು ಸಿನಿಮಾಗಳಿಗಿಂತ ಹೆಚ್ಚಾಗಿ ಧಾರವಾಹಿಗಳನ್ನ ಇಷ್ಟ ಪಡೋದಕ್ಕೆ ಪ್ರಾರಂಭ ಮಾಡಿದ್ದಾರೆ ಅದರಲ್ಲೂ ವಿಶೇಷವಾಗಿ ಅತ್ಯಂತ ಹೆಚ್ಚು ಪ್ರೇಕ್ಷಕರನ್ನು ಹೊಂದಿರುವಂತಹ ಧಾರವಾಹಿಗಳಲ್ಲಿ ಒಂದಾಗಿರುವಂತಹ ಜೀ ಕನ್ನಡ ವಾಹಿನಿಯ ಸೀತಾರಾಮ ಧಾರವಾಹಿ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಮಾತನಾಡುವುದಕ್ಕೆ ಹೊರಟಿದ್ದೇವೆ. ವೈಷ್ಣವಿ ಗೌಡ ಹಾಗೂ ಗಗನ್ ಚಿನ್ನಪ್ಪ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವಂತಹ ಈ ಧಾರಾವಾಹಿ ಈಗ ಕಿರುತೆರೆಯ ಪ್ರೇಕ್ಷಕರ ಅತ್ಯಂತ ಫೇವರೇಟ್ ಧಾರವಾಹಿಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದಾಗಿದೆ. ಇನ್ನು ಇವರಿಬ್ರನ್ನ ಹೊರತುಪಡಿಸಿ ಈ ಧಾರವಾಹಿಯಲ್ಲಿ ಎಲ್ಲರೂ ಇಷ್ಟಪಡುವಂತಹ ಮತ್ತೊಂದು ಪಾತ್ರ ಅಂದ್ರೆ ಅದು ಸಿಹಿ ಪಾತ್ರ.

ಸೀತಾರಾಮ ಧಾರವಾಹಿಯ ಅತ್ಯಂತ ಪ್ರಮುಖ ಪಾತ್ರ ಅಂದ್ರು ಕೂಡ ತಪ್ಪಾಗಲ್ಲ. ಚಿನಕುರಳಿ ಸಿಹಿ ತನ್ನ ಮುಗ್ಧ ನಟನೆಯ ಮೂಲಕ ಲವಲವಿಕೆಯ ಎಕ್ಸ್ಪ್ರೆಶನ್ಗಳ ಮೂಲಕ ಎಲ್ಲಾ ಪ್ರೇಕ್ಷಕರ ಗಮನ ಹಾಗೂ ಮನಸೆಳಿಯುವುದಕ್ಕೆ ಯಶಸ್ವಿಯಾಗುತ್ತಿದ್ದಾಳೆ. ಅಷ್ಟು ಕ್ಯೂಟ್ ಆಗಿ ಕಾಣುತ್ತಿರುವಂತಹ ಸಿಹಿ ಸೀತಾರಾಮ ಧಾರವಾಹಿಯ ಪ್ರೇಕ್ಷಕರ ಫೇವರೆಟ್ ನಟಿ ಅಂತ ಹೇಳಬಹುದಾಗಿದೆ. ಅಷ್ಟೊಂದು ಕ್ಯೂಟ್ ಆಗಿ ಕಾಣಿಸಿಕೊಳ್ಳುವ ಸಿಹಿಯ ನಿಜವಾದ ತಾಯಿ ಯಾರು ಅನ್ನುವಂತಹ ಕುತೂಹಲಗಳು ಕೂಡ ವೀಕ್ಷಕರ ಕುತೂಹಲವನ್ನು ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ.

ಸಿಹಿ ತಾಯಿ ಯಾರು ಗೊತ್ತಾ?

ಸೀತಾರಾಮ ಧಾರವಾಹಿಯಲ್ಲಿ ಕಾಣಿಸಿಕೊಳ್ಳುವಂತಹ ಸಿಹಿಯ ನಿಜವಾದ ಹೆಸರು ರಿತು ಸಿಂಗ್ ಎನ್ನುವುದಾಗಿ. ನಿಜಕ್ಕೂ ಹೇಳಬೇಕು ಅಂತ ಅಂದ್ರೆ ಇವರು ಮೂಲತಃ ನೇಪಾಳ ದೇಶದವರು. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿರುತ್ತಾರೆ. ಹೀಗಾಗಿ ಚಿಕ್ಕ ವಯಸ್ಸಿನಿಂದಲೂ ತಾಯಿಯ ಪ್ರೀತಿಯನ್ನು ಮಾತ್ರ ಕಂಡುಬಂದಿರುವಂತಹ ಮಗು ಇದು. ಇನ್ನು ರಿತು ಸಿಂಗ್ ಜೊತೆಗೆ ಇವರ ತಾಯಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಮನೆ ಕೆಲಸ ಮಾಡಿ ತನ್ನ ಮಗುವಿನ ಭವಿಷ್ಯನ ರೂಪಿಸಬೇಕು ಎನ್ನುವಂತಹ ಕನಸಿನಲ್ಲಿ ತನ್ನ ಮಗಳಿಗಾಗಿ ಆ ತಾಯಿ ಕೆಲಸ ಮಾಡುತ್ತಿದ್ದಾರೆ.

ಸೀತಾರಾಮ ಧಾರವಾಹಿಯ ಪರದೆಯ ಮೇಲೆ ಸಿಹಿಯ ಜೀವನ ಸಿಹಿ ಆಗಿರಬಹುದು ಆದರೆ ನಿಜ ಜೀವನದಲ್ಲಿ ತಂದೆ ಇಲ್ಲದೆ ಕಷ್ಟದಿಂದ ಬೆಳೆದಿರುವಂತಹ ಮಗುವಿನ ಜೀವನ ಕಹಿಯಿಂದ ಕೂಡಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಿದ್ದರೂ ಕೂಡ ಪರದೆಯ ಮೇಲೆ ನಗುನಗುತ ನಟಿಸುವಂತಹ ಸಿಹಿ ಅಂದ್ರೆ ಎಲ್ಲರಿಗೂ ಕೂಡ ಪಂಚಪ್ರಾಣ. ಕಿರುತೆರೆ ಲೋಕದಲ್ಲಿ ಸೀತಾರಾಮ ಧಾರವಾಹಿಯಲ್ಲಿ ನಟಿಸುವುದಕ್ಕೆ ಪ್ರಾರಂಭ ಮಾಡಿರುವಂತಹ ರಿತು ಸಿಂಗ್ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸಿಹಿ ಅಂತ ಹೇಳೋ ರೀತಿಯಲ್ಲೇ ಬೆಳೆದು ನಿಲ್ಲಲಿ ಎಂಬುದಾಗಿ ಹಾರೈಸೋಣ. ಈಗಾಗಲೇ ಕಿರುತೆರೆಯ ಪ್ರೇಕ್ಷಕರ ಮನಸ್ಸಿನ ಗೆದ್ದಿರುವಂತಹ ಈ ಪುಟ್ಟ ಪ್ರತಿಭೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳನ್ನು ಪಡೆಯಲಿ ಹಾಗೂ ಇದರಿಂದಾಗಿ ಆಕೆಯ ತಾಯಿಗೂ ಕೂಡ ಇನ್ನಷ್ಟು ಬದುಕು ಸುಲಭವಾಗಿ ಎಂಬುದಾಗಿ ಹಾರೈಸೋಣ.

Comments are closed.