Team India: ಇದೇನಾಯ್ತು ಟೀಮ್ ಇಂಡಿಯಾದವರಿಗೆ? ಕುಂಕುಮ ಇಡಲು ಹೋದರೆ, ಆಟಗಾರರು ಹಿಂದೆ ಸರಿದಿದ್ದು ಯಾಕೆ ಗೊತ್ತೇ?? ಹಿಂದಿರುವ ಕಾರಣ ಏನು ಗೊತ್ತೇ??

Team India: ಭಾರತೀಯ ಸಂಪ್ರದಾಯದಲ್ಲಿ ಅತಿಥಿಗಳನ್ನು ದೇವರಿಗೆ ಸಮಾನ ಎನ್ನಲಾಗುತ್ತದೆ. ಹಾಗಾಗಿಯೇ ಮನೆಗೆ ಅತಿಥಿಗಳು ಬಂದಾಗ ಅವರನ್ನು ಪ್ರೀತಿಯಿಂದ ಸತ್ಕಾರ ಮಾಡಲಾಗುತ್ತದೆ. ಆದರೆ ಇಲ್ಲಿ ಕ್ರಿಕೆಟ್ (Cricket) ಆಟಗರಾರಿಬ್ಬರು ಹೊಟೆಲ್ಗೆ ಆಗಮಿಸಿದ ವೇಳೆ ಹೊಟೆಲ್ ಸಿಬ್ಬಂದಿ ಹಣೆಗೆ ತಿಲಕವಿಟ್ಟು ಸ್ವಾಗತ ಮಾಡಲು ಮುಂದಾದಾಗ ಅವರು ತಿರಸ್ಕರಿಸಿದ್ದಾರೆ. ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತೀಯ ಕ್ರಿಕೆಟ್ ತಂಡವು ಹೋಟೆಲ್ಗೆ (Hotel) ಭೇಟಿ ನೀಡುತ್ತಿರುವ ವಿಡಿಯೋ ಸದ್ಯಕ್ಕೆ ಟ್ರೆಂಡ್ ಆಗಿದೆ. ಮೊಹಮದ್ ಸಿರಾಜ್ , ಉಮ್ರಾನ್ ಮಲ್ಲಿಕ್ ಸೇರಿದಂತೆ ಇನ್ನಿಬ್ಬರು ಆಟಗಾರರು ಹಣೆಗೆ ತಿಲಕ ಇಡುವುದನ್ನು ವಿರೋಧಿಸುತ್ತಿರುವುದು ಈ ವಿಡಿಯೋದಲ್ಲಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ. ಕೆಲವು ಆಟಗಾರರು ಈ ರೀತಿ ಮಾಡಬಾರದಿತ್ತು. ಅತಿಥಿ ಸತ್ಕಾರ ಎನ್ನುವುದು ಭಾರತೀಯ ಸಂಪ್ರದಾಯವಾಗಿದೆ.

ಈ ರೀತಿ ತಿರಸ್ಕರಿಸುವುದು ಸರಿಯಲ್ಲ ಎಂದಿದ್ದಾರೆ. ಇನ್ನು ಹಲವರು ಆ ಆಟಗಾರರು ಅವರ ಧರ್ಮದ ಪ್ರಕಾರ ನಡೆದುಕೊಂಡಿದ್ದಾರೆ. ಅವರು ಮಾಡಿದ್ದು ಸರಿಯಾಗಿದೆ. ಕುಂಕುಮ ಇಟ್ಟುಕೊಳ್ಳುವುದು, ಬಿಡುವುದು ಅವರ ವೈಯಕ್ತಿಕ ವಿಚಾರ. ಹಾಗಾಗಿ ಇದರಲ್ಲಿ ಕೊಂಕು ಹುಡುಕುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದು ಹಳೆಯ ವಿಡಿಯೋದಂತೆ ಭಾಸವಾಗುತ್ತಿದೆ. ಏಕೆಂದರೆ ಇದಕ್ಕೆ ಕಾರಣವಿದೆ. ಉಮ್ರಾನ್ ಮಲಿಕ್ (Umran Malikh) ಆಸ್ಟ್ರೇಲಿಯಾ ಸರಣಿಯ ಭಾಗವಾಗಿಲ್ಲ. ಇತ್ತಿಚೆಗೆ ತವರಿನಲ್ಲಿಯೇ ನಡೆದ ನ್ಯೂಜಿಲ್ಯಾಂಡ್- ಶ್ರೀಲಂಕಾ ವೈಟ್ ಬಾಲ್ ಸರಣಿಯ ವೇಳೆ ನಡೆದ ಘಟನೆ ಇರಬಹುದು ಎಂದು ಅಂದಾಜಿಸಲಾಗಿದೆ.

ನಾಗ್ಪುರದಲ್ಲಿ ನಡೆಯುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಿರಾಜ್ (Siraj) ಆಟವಾಡಲಿದ್ದಾರೆ. ಜೊತೆಗೆ ಈ ಸರಣಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಬುಮ್ರಾ ಎರಡು ಟೆಸ್ಟ್ ಪಂದ್ಯ (Test Match) ಗಳಿಗೆ ಲಭ್ಯವಿಲ್ಲದ ಕಾರಣ ಆ ಜಾಗವನ್ನು ಸಿರಾಜ್ ತುಂಬಬೇಕಾಗಿದೆ.

Comments are closed.