Tower: ನಿಮ್ಮ ಬಳಿ ಖಾಲಿ ಜಾಗ ಅಥವಾ ಮನೆ ಮೇಲೆ ಜಾಗ ಇದೆಯಾ?ಅಂತವರಿಗೆ ಸರ್ಕಾರದಿಂದ ಗುಡ್ ನ್ಯೂಸ್; ಕೈ ತುಂಬಾ ಹಣ ಸಂಪಾದನೆ ಮಾಡೋಕೆ ರೆಡಿನಾ!

Tower: ಕೆಲವೊಂದು ನಿಯಮಗಳನ್ನು ಫಾಲೋ ಮಾಡುವ ಮೂಲಕ ಹಾಗೂ ಕೆಲವೊಂದು ದಾಖಲೆಗಳನ್ನು ನೀಡುವ ಮೂಲಕ ನಿಮ್ಮ ಕಾಲಿ ಜಾಗವನ್ನು ಹಾಗೂ ಮನೆ ಮೇಲೆ ಇರುವಂತಹ ಜಾಗವನ್ನ ಉಪಯೋಗಿಸಿಕೊಂಡು ತಿಂಗಳಿಗೆ 50 ರಿಂದ 60 ಸಾವಿರ ರೂಪಾಯಿಗಳವರೆಗೆ ಸಂಪಾದನೆ ಮಾಡಬಹುದಾಗಿದೆ. ಹೌದು ಈ ಜಾಗದಲ್ಲಿ ಟವರ್ ಕಂಪನಿಗಳು ತಮ್ಮ ಟವರ್ ಅನ್ನು ಇಡೋ ಮೂಲಕ ನಿಮಗೆ ತಿಂಗಳಿಗೆ ಬಾಡಿಗೆ ರೂಪದಲ್ಲಿ ಹಣವನ್ನು ನೀಡುತ್ತಾರೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

ಚಾವಣಿಯ ಮೇಲೆ 500 ಸ್ಕ್ವೇರ್ ಫೀಟ್ ಹಾಗೂ ಕೆಳಗಿನ ಕಾಲಿ ಜಾಗದಲ್ಲಿ 2000 ದಿಂದ 2500 ಸ್ಕ್ವೇರ್ ಫೀಟ್ ಖಾಲಿ ಜಾಗದ ಅಗತ್ಯತೆ ಇರುತ್ತದೆ. ಗ್ರಾಮೀಣ ಭಾಗದಲ್ಲಿ ಇದಿಯಾ ಅಥವಾ ನಗರ ಭಾಗದಲ್ಲಿ ಇದೆಯಾ ಅನ್ನೋದು ಕೂಡ ಈ ಸಂದರ್ಭದಲ್ಲಿ ಪ್ರಮುಖವಾಗಿರುತ್ತದೆ. ಹೆಚ್ಚು ಜನಸಂಖ್ಯೆ ಹೊಂದಿರುವಂತಹ ಪ್ರದೇಶ ಆಗಿರಬಾರದು ಹಾಗೂ ಯಾವುದೇ ಹತ್ತಿರದ ಆಸ್ಪತ್ರೆಗಿಂತ 100 ಮೀಟರ್ ಕನಿಷ್ಠ ದೂರದಲ್ಲಿ ಇರುವಂತಹ ಪ್ರದೇಶ ಆಗಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಯಾಕೆಂದರೆ ಇಲ್ಲಿ ಅಳವಡಿಸಲಾಗುವಂತಹ ಮೊಬೈಲ್ ಟವರ್ ನಿಂದ ಹೊರಬರುವಂತಹ ರೇಡಿಯೇಶನ್ ನಿಂದ ಯಾರಿಗೂ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಾರದು ಎನ್ನುವಂತಹ ಮುನ್ನೆಚ್ಚರಿಕೆ ಕ್ರಮದ ರೂಪದಲ್ಲಿ.

ಟವರ್ ಹಾಕೋದು ಯಾವ ರೀತಿಯಲ್ಲಿ ಹಾಗೂ ಆದಾಯ ಎಷ್ಟು ಬರುತ್ತೆ?

ಯಾವುದೇ ಟವರ್ ಸಂಸ್ಥೆಗಳು ನಿಮ್ಮ ಬಳಿ ಬಂದು ಖುದ್ದಾಗಿ ಅವರೇ ಟವರ್ ಹಾಕುವಂತೆ ಕೇಳುವುದಿಲ್ಲ ಬದಲಾಗಿ ನೀವು ಅವರ ವೆಬ್ಸೈಟ್ ಗೆ ಹೋಗಿ ಕಾಂಟಾಕ್ಟ್ ಮಾಡಿ ರಿಕ್ವೆಸ್ಟ್ ಮಾಡಿಕೊಳ್ಳಬೇಕು. ಅವರು ನಿಮ್ಮ ಜಾಗಕ್ಕೆ ಬಂದು ಆ ಜಾಗ ಟವರ್ ಹಾಕೋದಕ್ಕೆ ಸರಿ ಆಗುತ್ತಾ ಅನ್ನೋದನ್ನ ಪರೀಕ್ಷಿಸಿ ನಂತರವಷ್ಟೇ ಟವರ್ ಹಾಕುವಂತಹ ಪ್ರಕ್ರಿಯೆಯನ್ನು ಮುಂದುವರಿಸುತ್ತಾರೆ. ಅದಾದ ನಂತರ ಮಾಡುವಂತಹ ಅಗ್ರಿಮೆಂಟ್ ಪ್ರಕಾರ ನಿಮಗೆ ಪ್ರತಿ ತಿಂಗಳ ಹಣ ಬರುತ್ತದೆ. ನಿಮಗೆ ಸಿಗುವಂತಹ ಹಣದ ಪ್ರಮಾಣ ಕೂಡ ಅವರು ಯಾವ ಸ್ಥಳದಲ್ಲಿ ಹಾಕುತ್ತಿದ್ದಾರೆ ಅನ್ನೋದನ್ನ ಡಿಪೆಂಡ್ ಆಗಿರುತ್ತದೆ. ಪ್ರತಿ ತಿಂಗಳಿಗೆ ನಿಮಗೆ ಈ ರೀತಿ ಟವರ್ ಹಾಕಿಸುವುದರ ಮೂಲಕ 10,000 ಗಳಿಂದ ಪ್ರಾರಂಭಿಸಿ 60,000ಗಳವರೆಗೆ ಕೂಡ ಹಣವನ್ನು ದುಡಿಯೋ ಅವಕಾಶವನ್ನು ಮಾಡಿಕೊಡುತ್ತದೆ.

ಯಾವ ಕಂಪನಿಗಳು ಟವರ್ ಹಾಕಿಸುತ್ತವೆ?

ಏರ್ಟೆಲ್, ಅಮೆರಿಕನ್ ಟವರ್ ಕಾರ್ಪೊರೇಟಿವ್, ಬಿಎಸ್ಎನ್ಎಲ್ ಟವರ್ ಇನ್ಫ್ರಾಸ್ಟ್ರಕ್ಚರ್, ಎಸ್ ಆರ್ ಟೆಲಿಕಾಂ, ಜಿ ಟಿ ಎಲ್ ಇನ್ಟ್ರಾಸ್ಟ್ರಕ್ಚರ್, ಎನ್ ಎಫ್ ಸಿ ಎಲ್ ಕನೆಕ್ಷನ್ ಇನ್ಫ್ರಾಸ್ಟ್ರಕ್ಚರ್, ಐಡಿಯಾ ಟೆಲಿಕಾಂ ಇನ್ಫ್ರಾ ಲಿಮಿಟೆಡ್, ವೊಡಾಫೋನ್ ಕಂಪನಿಗಳು ಟವರ್ ಹಾಕುವಂತಹ ಕಂಪನಿಗಳಾಗಿದ್ದು ನೀವು ಇವುಗಳ ಅಧಿಕೃತ ವೆಬ್ ಸೈಟ್ ಗೆ ಹೋಗುವ ಮೂಲಕ ಟವರ್ ಹಾಕಿಸುವಂತಹ ಪ್ರಕ್ರಿಯೆ ಅಥವಾ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆಯನ್ನು ನೀವು ಪ್ರಾರಂಭ ಮಾಡಬಹುದಾಗಿದೆ. ಈ ಮೂಲಕ ನಿಮ್ಮ ಖಾಲಿ ಜಾಗವನ್ನು ಹಣವನ್ನು ಗಳಿಸುವಂತಹ ಜಾಗವನ್ನಾಗಿ ಮಾರ್ಪಾಡು ಮಾಡಬಹುದಾಗಿದೆ.

Comments are closed.