Train: ಒಂದು ಕಿಲೋಮೀಟರ್ ಪ್ರಯಾಣ ಮಾಡೋದಕ್ಕೆ ರೈಲಿನ ಇಂಜಿನ್ ಬಳಸಬಹುದಾದ ಡೀಸೆಲ್ ಪ್ರಮಾಣ ಎಷ್ಟು ಗೊತ್ತಾ?

Train: ಇಡೀ ವಿಶ್ವದಲ್ಲಿ ಅತ್ಯಂತ ದೊಡ್ಡ ಮಟ್ಟದ ರೈಲ್ವೆ ನೆಟ್ವರ್ಕ್ ಅನ್ನು ಹೊಂದಿರುವಂತಹ ದೇಶಗಳಲ್ಲಿ ನಮ್ಮ ಭಾರತ ದೇಶ ಕೂಡ ಕಾಣಿಸಿಕೊಳ್ಳುತ್ತದೆ ಎನ್ನುವುದಕ್ಕೆ ನಾವು ಹೆಮ್ಮೆ ಪಡಬೇಕು. ನಿಜಕ್ಕೂ ಕೂಡ ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದ ರೈಲ್ವೆ ಇಲಾಖೆ ಹಾಗೂ ರೈಲುಗಳು ಬೆಳವಣಿಗೆ ಹೊಂದಿರುವ ರೀತಿ ನಿಜ ಕೂಡ ಪ್ರತಿಯೊಬ್ಬರೂ ಮೆಚ್ಚ ಬೇಕಾಗಿರುವುದು. ನಮ್ಮ ಭಾರತ ದೇಶದ ರೈಲ್ವೆ ನೆಟ್ವರ್ಕ್ ನಲ್ಲಿ ಸಾವಿರಾರು ರೈಲುಗಳಲ್ಲಿ ಲಕ್ಷಾಂತರ ಕೋಟ್ಯಾಂತರ ಭಾರತೀಯರು ಪ್ರತಿದಿನ ತಾವು ಹೋಗಬೇಕಾಗಿರುವಂತಹ ಸ್ಥಳಗಳಿಗೆ ಹೋಗುವುದಕ್ಕೆ ರೈಲ್ವೆ ನೆಟ್ವರ್ಕ್ ಅಂದ್ರೆ ರೈಲ್ವೆ ಪ್ರಯಾಣವನ್ನೇ ಪ್ರಮುಖವಾಗಿ ನಂಬಿಬಿಟ್ಟಿದ್ದಾರೆ.

ರೈಲಿನ ಮೈಲೇಜ್ ಎಷ್ಟು ಗೊತ್ತಾ?

ಸಾಮಾನ್ಯವಾಗಿ ನಾವು ಯಾವುದೇ ರೀತಿಯ ವಾಹನಗಳಲ್ಲಿ ಹೋಗುವುದಕ್ಕಿಂತ ಮುಂಚೆ ಆ ವಾಹನ ಲೀಟರ್ ಪೆಟ್ರೋಲ್ ಗೆ ಎಷ್ಟು ಕಿಲೋಮೀಟರ್ ಮೈಲೇಜ್ ನೀಡುತ್ತೆ ಅನ್ನೋದಾಗಿ ಕೇಳ್ತೇವೆ. ಆದರೆ ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರೋದು ರೈಲಿನ ಬಗ್ಗೆ ಆಗಿರುವುದರಿಂದ ರೈಲು ಡೀಸೆಲ್ ನಲ್ಲಿ ಓಡಿದ್ರೆ ಎಷ್ಟು ಮೈಲೇಜ್ ಕೊಡುತ್ತೆ ಅನ್ನೋದರ ಬಗ್ಗೆ ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಸಾಮಾನ್ಯವಾಗಿ ಬೈಕು ಅಥವಾ ಕಾರ್ ಆದರೆ ಮೀಟರ್ ಬೋರ್ಡ್ ನಲ್ಲಿ ಬಹುತೇಕ ಒಂದು ಲೀಟರ್ ಪೆಟ್ರೋಲ್ ಗೆ ಎಷ್ಟು ಮೈಲೇಜ್ ನೀಡುತ್ತೋ ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ. ಆದರೆ ರೈಲಿನಲ್ಲಿ ತಿಳಿದುಕೊಳ್ಳುವುದಕ್ಕೆ ಹೇಗೆ ಸಾಧ್ಯ ಅನ್ನೋದಾಗಿ ಸಾಕಷ್ಟು ಜನರು ಯೋಚಿಸುತ್ತಿರಬಹುದು. ಬಹುತೇಕ ಎಲ್ಲಾ ಕಡೆಗಳಲ್ಲಿ ಹೆಚ್ಚಿನ ರೈಲ್ವೆ ಪ್ರಯಾಣ ಅನ್ನೋದು ಡೀಸೆಲ್ ಇಂಜಿನ್ ಹೊಂದಿರುವಂತಹ ರೈಲಿನಲ್ಲಿ ನಡಿತಾ ಇರೋದು. ಇನ್ನು ರೈಲಿನ ಎಂಜಿನ್ ನೀಡುವಂತಹ ಮೈಲೇಜ್ ಅನ್ನೋದು ಅದರ ಮೇಲೆ ನೀಡುವಂತಹ ವರ್ಕ್ ಲೋಡ್ ಮೇಲೆ ಡಿಪೆಂಡ್ ಆಗಿರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕು.

ತಜ್ಞರು ನೀಡುವಂತಹ ಮಾಹಿತಿ ಪ್ರಕಾರ ಎರಡನೇ ವರ್ಗದ ರೈಲಿನಲ್ಲಿ ಒಂದು ಕಿಲೋ ಮೀಟರ್ ಚಲಿಸುವುದಕ್ಕೆ 6 ಲೀಟರ್ ಗಳ ಡೀಸೆಲ್ ಅನ್ನು ಉಪಯೋಗಿಸುತ್ತದೆ ಹಾಗೂ ಎಕ್ಸ್ಪ್ರೆಸ್ ರೈಲುಗಳು ಒಂದು ಕಿಲೋಮೀಟರ್ ಚಲಿಸುವುದಕ್ಕೆ 4.5 ಲೀಟರ್ ಪಡೆದುಕೊಳ್ಳುತ್ತದೆ. ಇನ್ನು ನಿಲ್ಲಿಸಿದ ರೈಲು ಮುಂದಕ್ಕೆ ಸಾಗುವ ಸಂದರ್ಭದಲ್ಲಿ ಹೆಚ್ಚು ಪವರ್ ಉಪಯೋಗಿಸಬೇಕಾಗಿ ಬರುವುದರಿಂದ ಹೆಚ್ಚಿನ ಡೀಸೆಲ್ ಅನ್ನು ಕೂಡ ಈ ಸಂದರ್ಭದಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಇದೇ ಗೆಳೆಯರೇ, ಡೀಸೆಲ್ ಮೂಲಕ ಚಲಿಸುವಂತಹ ರೈಲು ಒಂದು ಕಿಲೋಮೀಟರ್ ಚಲಿಸುವುದಕ್ಕೆ ಎಷ್ಟು ಪೆಟ್ರೋಲ್ ಅನ್ನು ಬಳಸಿಕೊಳ್ಳುತ್ತದೆ ಎಂಬುದಾಗಿ.

Comments are closed.