ನೀವು ಊಟ ಮಾಡುವಾಗ ಯಾವ ದಿಕ್ಕಿನಲ್ಲಿ ಕುಳಿತುಕೊಂಡು ಮಾಡಿದರೆ ಒಳ್ಳೆಯದು ಗೊತ್ತೇ?? ನಿಮ್ಮ ಜೀವನವೇ ಬದಲಾಯಿಸಬಹುದು ಈ ದಿಕ್ಕು!

ನಾವು ಬದುಕಬೇಕು ಆರೋಗ್ಯವಾಗಿರಬೇಕು ನಮ್ಮ ನಿತ್ಯದ ದಿನಚರಿಯನ್ನು ಸರಿಯಾಗಿ ಮಾಡಬೇಕು ಎಂದಿದ್ದರೆ ಸರಿಯಾದ ಆಹಾರ ಕ್ರಮ ಕೂಡ ಅಷ್ಟೇ ಮುಖ್ಯ. ಹಸಿವಾದಾಗ ಹೊಟ್ಟೆಗೆ ಆಹಾರವನ್ನೇನೋ ತಿನ್ನುತ್ತೇವೆ ಆದರೆ ಆ ಆಹಾರ ನಮ್ಮ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತೆ ಅನ್ನೋದನ್ನ ನಾವು ಗಮನಿಸುವುದಿಲ್ಲ. ಪೋಷಕಾಂಶ ಯುದ್ಧ ಆಹಾರವನ್ನು ಸೇರಿಸುವುದು ಮುಖ್ಯ ಅದರ ಜೊತೆಗೆ ವಾಸ್ತು ಶಾಸ್ತ್ರದಲ್ಲಿ ಹೇಳಲಾಗುವಂತೆ ನಾವು ಸೇವಿಸುವ ಆಹಾರ ಯಾವ ಸಮಯದಲ್ಲಿ ಯಾವ ದಿಕ್ಕಿನಲ್ಲಿ ಸೇವಿಸಿದರೆ ಒಳ್ಳೆಯದು ಎನ್ನುವುದರ ಬಗ್ಗೆಯೂ ಕೂಡ ನಮಗೆ ಗಮನವಿರಬೇಕು.

ವಾಸ್ತು ಶಾಸ್ತ್ರದ ಪ್ರಕಾರ ನಾವು ಯಾವ ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸಿದರೆ ಒಳ್ಳೇದು ಎಂಬುದನ್ನ ಹೇಳಲಾಗಿದೆ. ಆರ್ಥಿಕವಾಗಿ ಸಬಲರಾಗಬೇಕು ಅಂದ್ರೆ ಆರೋಗ್ಯವಾಗಿ ಇರಬೇಕು ಅಂದ್ರೆ ವಾಸ್ತು ಶಾಸ್ತ್ರದ ತಜ್ಞರು ಹೇಳುವಂತೆ ಇಂಥದ್ದೇ ದಿಕ್ಕಿನಲ್ಲಿ ಆಹಾರ ಸೇವಿಸುವುದು ಒಳ್ಳೆಯದು. ಹಾಗಾದ್ರೆ ಯಾವ ದಿಕ್ಕಿನಲ್ಲಿ ಆಹಾರವನ್ನು ಸೇವಿಸಿದರೆ ಒಳ್ಳೆಯದು ಅನ್ನೋದನ್ನ ನಾವು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಮೊದಲನೇದಾಗಿ ಪೂರ್ವ ದಿಕ್ಕಿನಲ್ಲಿ ಕುಳಿತು ಆಹಾರವನ್ನು ಸೇವಿಸಿದರೆ ಅದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಇದು ಸೂರ್ಯ ಹುಟ್ಟುವಧಿಕಾ ಆದ್ದರಿಂದ ನಿಮಗೆ ಎಲ್ಲಾ ರೀತಿಯ ಆರೋಗ್ಯ ಆರ್ಥಿಕ ಲಾಭ ದೊರೆಯಲಿದೆ. ಇನ್ನು ಪೂರ್ವ ದಿಕ್ಕಿನಲ್ಲಿ ಕುಳಿತು ಆಹಾರವನ್ನು ಸೇವಿಸಿದರೆ ಆಹಾರ ಸರಿಯಾಗಿ ಜೀರ್ಣವಾಗಿ ರಕ್ತ ಪರಿಚಲನೆ ಸುಲಭವಾಗುತ್ತದೆ. ಇನ್ನು ಪೂರ್ವ ದಿಕ್ಕನ ದೇವರ ದಿಕ್ಕು ಎಂದು ಹೇಳುತ್ತಾರೆ. ತಾಯಿ ಅನ್ನಪೂರ್ಣ ದೇವಿ ಅನ್ನ ನೀಡುವವಳು. ಹಾಗಾಗಿ ಈ ದಿಕ್ಕಿನಲ್ಲಿ ಅನ್ನ ಸೇವಿಸಿದರೆ ಆಕೆಯ ಕೃಪೆ ನಮ್ಮ ಮೇಲಿರುತ್ತದೆ.

ಇನ್ನು ಉತ್ತರ ದಿಕ್ಕಿನಲ್ಲೂ ಕುಳಿತು ಆಹಾರ ಸೇವಿಸುವುದು ಉತ್ತಮ. ಸಾಲ ಭಾದೆ ಹಾಗೂ ಇತರ ಆರ್ಥಿಕ ಸಮಸ್ಯೆ ಇದ್ದರೆ ಉತ್ತರ ದಿಕ್ಕಿನಲ್ಲೇ ಆಹಾರ ಸೇವಿಸಿದರೆ ವಾಸ್ತು ಶಾಸ್ತ್ರದ ಪ್ರಕಾರ ತುಂಬಾನೇ ಒಳ್ಳೆಯದು. ಹಾಗೆಯೇ ಪಶ್ಚಿಮ ದಿಕ್ಕಿನಲ್ಲಿ ಕುಳಿತು ಕೂಡ ಆಹಾರ ಸೇವಿಸುವುದು ಉತ್ತಮ. ಇದು ಮನೆಯ ನೆಮ್ಮದಿಯನ್ನು ಕಾಪಾಡುತ್ತದೆ.

ಆದರೆ ದಕ್ಷಿಣ ದಿಕ್ಕಿನಲ್ಲಿ ಮಾತ್ರ ಕುಳಿತು ಆಹಾರ ಸೇವಿಸಬಾರದು. ಇದು ಅಮಂಗಳ ಹಾಗೂ ಅಶುಭ ಎಂದು ಹೇಳಲಾಗುತ್ತದೆ. ಇನ್ನು ಇದಕ್ಕೆ ಮೃತರ ಹಾಗೂ ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ಕುಳಿತು ಆಹಾರವನ್ನು ಸೇವಿಸಿದರೆ, ಅಕಾಲಿಕ ಮರಣ ಉಂಟಾಗುವ ಸಾಧ್ಯತೆ ಇದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಶೇರ್ ಮಾಡಿ ಹಾಗೂ ಕಮೆಂಟ್ ಮಾಡಿ.

Leave A Reply

Your email address will not be published.