ಉದ್ಯೋಗಸ್ಥ ಮಹಿಳೆಯರ ಬ್ಯಾಗನಲ್ಲಿ ಈ ಕೆಲವು ವಸ್ತುಗಳು ಇರಲೇಬೇಕು

ಇತ್ತೀಚೆಗೆ ಮಹಿಳೆಯರು ಜಾಬ್ ಮಾಡ್ತಾ ಇರೋದು ಮಾತ್ರವಲ್ಲ ವರ್ಕ್ ಹಾಲಿಕ್ ಕೂಡ ಆಗಿದ್ದಾರೆ. ತಾವು ಎಷ್ಟೊತ್ತಿಗೆ ಊಟ ತಿಂಡಿ ಮಾಡ್ತೀವಿ ಅನ್ನೋದ್ರಾ ಗಮನವೂ ಇಲ್ಲದೆ ಕಚೇರಿ ಕೆಲಸದಲ್ಲಿ ಮಗನರಾಗಿರುವ ಹುಡುಗಿಯರು ಇದ್ದಾರೆ. ಹಾಗಾಗಿ ಸ್ವಲ್ಪವೂ ಪುರುಸೊತ್ತು ಇರೋದಿಲ್ಲ ಅವರಿಗೆ. ಆದರೆ ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಪೇಚಿಗೆ ಸಿಲುಕಿ ಕೊಳ್ಳಬಹುದು. ಕಂಪನಿಯಲ್ಲಿ ಏನಾದರೂ ದಿಡೀರ್ ಅಂತ ಪ್ರೋಗ್ರಾಮ್ ಅಥವಾ ಮೀಟಿಂಗ್ ಫಿಕ್ಸ್ ಆದ್ರೆ ಕೂಡಲೇ ರೆಡಿಯಾಗೋದಕ್ಕೆ ಮಹಿಳೆಯರಿಗೆ ಸಾಧ್ಯವಾಗದೇ ಇರಬಹುದು. ಆದರೆ ಚಿಂತೆ ಬೇಡ ನಿಮ್ಮ ಕೈಯಲ್ಲಿರುವ ಹ್ಯಾಂಡ್ ಬ್ಯಾಗ್ ನಲ್ಲಿ ಈ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಿ. ಇದರಿಂದ ನೀವು ಯಾವುದೇ ಸಂದರ್ಭದಲ್ಲಿ ಆದ್ರೂ ತಕ್ಷಣ ರೆಡಿಯಾಗಬಹುದು.

ಮೊದಲನೆಯದಾಗಿ ಬೇಬಿ ಕ್ರೀಮ್ ಮತ್ತು ಫೌಂಡೇಶನ್ ಪೌಡರ್. ನಿಮ್ಮ ಬ್ಯಾಗ್ ನಲ್ಲಿ ಚಿಕ್ಕದಾದ ಬೇಬಿ ಕ್ರೀಮ್ ಹಾಗೂ ಫೌಂಡೇಶನ್ ಪೌಡರ್ ಅನ್ನು ಇಟ್ಟುಕೊಳ್ಳಿ. ಜೊತೆಗೆ ಒಂದಿಷ್ಟು ವೆಟ್ ಟಿಶ್ಯೂ ಕೂಡ ಇರಲಿ. ಹೀಗಿದ್ದಾಗ ನೀವು ತಕ್ಷಣದಲ್ಲಿ ಯಾವುದಾದರೂ ಮೀಟಿಂಗ್ ಅಟೆಂಡ್ ಆಗಬೇಕು, ಅಥವಾ ಯಾವುದಾದರೂ ಕ್ಲೈಂಟ್ ಜೊತೆ ಮಾತನಾಡಬೇಕು ಎಂದಾದರೆ ಕೂಡಲೇ ಟಿಶ್ಯೂನಿಂದ ಮುಖ ಸ್ವಚ್ಛಗೊಳಿಸಿಕೊಂಡು ಬಿಬಿ ಕ್ರೀಮ್ ಹಾಗೂ ಫೌಂಡೇಶನ್ ಪೌಡರ್ ಅನ್ನು ಹಚ್ಚಿಕೊಳ್ಳಿ. ಫೌಂಡೇಶನ್ ಪೌಡರ್ ಡಬ್ಬದಲ್ಲಿಯೇ ಕನ್ನಡಿಯೂ ಇರೋದ್ರಿಂದ ನಿಮಗೆ ಬೇರೆ ಮಿರರ್ ನ ಅಗತ್ಯವಿರುವುದಿಲ್ಲ. ಹೀಗೆ ಮಾಡುವುದರಿಂದ ನಿಮ್ಮ ಮುಖದ ಗ್ಲೋ ಕೂಡ ಹೆಚ್ಚಾಗುತ್ತೆ.

ಇನ್ನು ನಿಮ್ಮ ಬ್ಯಾಗ್ ನಲ್ಲಿ ಫೇಸ್ ಮಿಸ್ಡ್ ಅಥವಾ ರೋಜ್ ವಾಟರ್ ಸ್ಪ್ರೇ ನ ಇಟ್ಟುಕೊಳ್ಳಿ. ಮೀಟಿಂಗ್ ಗೆ ಹೋಗುವುದಕ್ಕಿಂತಲೂ ಮೊದಲು ಮುಖಕ್ಕೆ ಸ್ವಲ್ಪ ಸ್ಪ್ರೇ ಮಾಡಿಕೊಳ್ಳಿ. ಇದರಿಂದ ಮುಖದಲ್ಲಿನ ಡ್ರೈನೆಸ್ ಹೋಗುತ್ತೆ ಹಾಗೂ ಮುಖದಲ್ಲಿ ಹೊಳಪು ಕಾಣಿಸಿಕೊಳ್ಳುತ್ತೆ.

ಮುಂದಿನದು ಲಿಪ್ ಸ್ಟಿಕ್. ಸಾಮಾನ್ಯವಾಗಿ ಬ್ಯಾಕ್ ನಲ್ಲಿ ಲಿಪ್ ಸ್ಟಿಕ್ ಇಟ್ಟುಕೊಳ್ಳುತ್ತಾರೆ ಹುಡುಗಿಯರು. ಆದರೆ ಎಲ್ಲಾ ಸಮಯದಲ್ಲಿ ಹಚ್ಚಿಕೊಳ್ಳುವುದು ಕಷ್ಟ. ಹಾಕಿದ್ದಾಗ ನಿಮ್ಮ ತುಟಿಗೆ ನಸು ಗುಲಾಬಿ ಬಣ್ಣವನ್ನು ಕೊಡುವಂತಹ ಇಟ್ಟುಕೊಳ್ಳಿ. ತಕ್ಷಣ ಇದನ್ನು ತುಟಿಗೆ ಹಚ್ಚಿಕೊಂಡರೆ ತುಟಿಯ ಸೌಂದರ್ಯವು ಹೆಚ್ಚುತ್ತದೆ.

ಐ ಲೈನರ್ ಅಥವಾ ಕಾಜಲ್. ನಿಮ್ಮ ಕಣ್ಣಿಗೆ ತುಸು ಐ ಲೈನರ್ ಅಥವಾ ಕಾಜಲ್ ಟಚ್ ಕೊಟ್ಟರೆ ಕಣ್ಣು ಇನ್ನಷ್ಟು ಅಟ್ರಾಕ್ಟಿವ್ ಆಗಿ ಕಾಣಿಸುತ್ತೆ. ಹಾಗಾಗಿ ತಪ್ಪದೆ ನಿಮ್ಮ ಬ್ಯಾಗ್ ನಲ್ಲಿ ಐಲೈನರ್ ಅಥವಾ ಕಾಜಲನ್ನು ಇಟ್ಟುಕೊಳ್ಳಿ.

ಮೊಬೈಲ್ ಚಾರ್ಜರ್, ಗೋಗಲ್, ಮಾಸ್ಕ್ ಸ್ಯಾನಿಟೈಸರ್, ಹಸಿವಾದಾಗ ತಕ್ಷಣಕ್ಕೆ ತಿನ್ನಲು ಬೇಕಾಗುವ ಡ್ರೈ ಫ್ರೂಟ್ ಗಳು, ತಕ್ಷಣಕ್ಕೆ ಬೇಕಾಗುವ ಜ್ವರ ತಲೆನೋವು ಇವುಗಳಿಗೆ ಅಗತ್ಯವಾದ ಮೆಡಿಸಿನ್, ಒಂದು ಜೊತೆ ಬ್ಯಾಂಡೆಡ್, ಸ್ವಲ್ಪ ಹಣ ಈ ಕೆಲವು ಮೂಲಭೂತ ವಿಷಯಗಳನ್ನು ನಿಮ್ಮ ಬ್ಯಾಗ್ ನಲ್ಲಿ ಇಟ್ಟುಕೊಳ್ಳಿ. ಈ ವಸ್ತುಗಳು ನಿಮ್ಮ ಬ್ಯಾಗ್ ನಲ್ಲಿ ಇದ್ದರೆ ನೀವು ಯಾರ ಬಳಿಯೂ ಯಾವುದೇ ಕಾರಣಕ್ಕೂ ಸಹಾಯ ಕೇಳುವ ಅಗತ್ಯವಿಲ್ಲ ಹಾಗೆಯೇ ಯಾವುದೇ ಸಂದರ್ಭದಲ್ಲಿಯೂ ಇಂಡಿಪೆಂಡೆಂಟ್ ಆಗಿಇರಬಹುದು.

Leave A Reply

Your email address will not be published.