Sukanya Sammriddhi:ಹೊಸ ವರ್ಷಕ್ಕೆ ಮೊದಲ ಬಾರಿ ಸಿಹಿ ಸುದ್ದಿ; ಹಣ ಉಳಿಸುವವರಿಗೆ ಭರ್ಜರಿ ಅವಕಾಶ.. ಅದೇನು ಗೊತ್ತಾ?

Sukanya Sammriddhi: ಕೇಂದ್ರ ಸರ್ಕಾರವವು ಸಹ ಹಲವಾರು ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ರಾಷ್ಟ್ರೀಯ ಉಳಿತಾಯ ಯೋಜನೆ, ಎಂಐಎಸ್, ಸುಕನ್ಯ ಸಮೃದ್ಧಿ ಯೋಜನೆಗಳು ಅವುಗಳಲ್ಲಿ ಮುಖ್ಯವಾದವು. ಇವುಗಳಲ್ಲಿ ಯಾವುದಾದರಲ್ಲೂ ಒಂದರಲ್ಲಿ ನೀವು ಹೂಡಿಕೆ ಮಾಡಿದ್ದರೆ ನಿಮಗೆ ಖುಷಿಯಾಗುವಂತಹ ಸುದ್ದಿಯೊಂದು ಹೊರಬಿದ್ದಿದೆ. ಈ ಯೋಜನೆಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಶೇ.1 ರಷ್ಟು ಹೆಚ್ಚಿಸಿದೆ. ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ ಜನವರಿ 2023 ರ ಮೊದ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರವನ್ನು ೦.2೦ ರಿಂದ 1.1೦ ರಷ್ಟು ಹೆಚ್ಚಿಸಲಾಗಿದೆ. ಈ ಸಣ್ಣ ಉಳಿತಾಯ ಯೋಜನೆಯಲ್ಲಿ ಬಡ್ಡಿದರವು ಇನ್ನು ಮುಂದೆ ಶೇ.4.೦ರಿಂದ 7.6 ರ ನಡುವೆ ಇರಲಿದೆ. ಇದನ್ನೂ ಓದಿ: Washing Machine Offer: ಚಿಲ್ಲರೆ ಹಣ ಕೊಟ್ಟು ಒಳ್ಳೆಯ ವಾಷಿಂಗ್ ಮಷಿನ್ ಪಡೆಯುವುದು ಹೇಗೆ ಗೊತ್ತಾ? ಒಂದು ತಿಂಗಳ ಬಾಡಿಗೆ ಇಲ್ಲಿ ಕೊಡಿ; ವಾಷಿಂಗ್ ಮಷಿನ್ ಬರುತ್ತೇ ನೋಡಿ

ಕೇಂದ್ರ ಸರ್ಕಾರವು 1,2,3, ಹಾಗೂ ಐದು ವರ್ಷಗಳ ಮೇಲಿನ ಠೇವಣಿಯಗಳ ಮೇಲಿನ ಬಡ್ಡಿದವರನ್ನು ಹೆಚ್ಚಿಸಿದೆ. ಇದಲ್ಲದೆ ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆಯ ಬಡ್ಡಿ ದರವನ್ನೂ ಹೆಚ್ಚಿಸಲಾಗಿದೆ. ಆದರೆ ಸುಕನ್ಯಾ -ಸಮೃದ್ಧಿ ಯೋಜನೆಯ ಬಡ್ಡಿದರವನ್ನು ನಿಗದಿ ಪಡಿಸಲಾಗಿದೆ. ಈ ಯೋಜನೆಯ ಬಡ್ಡಿದರವನ್ನು ಬದಲಾಯಿಸಲಾಗಿಲ್ಲ. ಒಂದು ವರ್ಷದ ಅವಧಿಯ ಠೇವಣಿ ದರವನ್ನು ಶೇ.6.6ಕ್ಕೆ ಹೆಚ್ಚಿಸಲಾಗಿದೆ. 2 ವರ್ಷಗಳ ಕಾಲ ಠೇವಣಿ ಮೊತ್ತವನ್ನು ಶೇ.6.8ಕ್ಕೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: Investment Tips: ನೀವು ಖಚಿತವಾಗಿ ಲಾಭ ಪಡೆಯಬೇಕು ಎಂದರೆ, ನೀವೆಲ್ಲಿ ಹೂಡಿಕೆ ಮಾಡಬೇಕು ಗೊತ್ತೇ?? ಹೊಸ ವರ್ಷದಿಂದನೇ ಹಣ ಗಳಿಸಿ.

ಮೂರು ವರ್ಷಗಳ ಠೇವಣಿ ದರವನ್ನು ಶೇ.6.9ಕ್ಕೆ ಹೆಚ್ಚಿಸಲಾಗಿದ್ದು, 5 ವರ್ಷಗಳ ಠೇವಣಿ ದರವನ್ನು ಶೇ. 7ಕ್ಕೆ ಹೆಚ್ಚಿಸಲಾಗಿದೆ. ಹಿರಿಯ ನಾಗರಿಕರ ಯೋಜನೆಯ ಬಡ್ಡಿ ದರವನ್ನು ಶೇ.8ಕ್ಕೆ ಏರಿಸಲಾಗಿದೆ. ಮಾಸಿಕ ಆದಾಯ ಯೋಜನೆಯ ಬಡ್ಡಿದರವನ್ನು ಶೇ.7.1ಕ್ಕೆ ಏರಿಸಲಾಗಿದೆ. ಕಿಸಾನ್ ಬಿಕಾಶ್ ಪತ್ರದ ಮೇಲಿನ ಬಡ್ಡಿಯನ್ನು ಶೇ.7.2ಕ್ಕೆ ಹೆಚ್ಚಿಸಲಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಮೇಲಿನ ಬಡ್ಡಿ ದರವನ್ನು ಶೇ.7ಕ್ಕೆ ಏರಿಸಲಾಗಿದೆ.
ಎನ್ಎಸ್ಸಿಯನ್ನು ಶೇ.7ರ ಬಡ್ಡಿದರದಂತೆ 2೦ ಮೂಲ ಅಂಶಗಳನ್ನು ಹೆಚ್ಚಿಸಲಾಗಿದೆ. ಹೆಣ್ಣು ಮಕ್ಕಳಿಗಾಗಿ ಇರುವ ಸುಕನ್ಯ ಸಮೃದ್ದಿ ಯೋಜನೆಯಲ್ಲಿನ ಶೇ.7.6ರ ಬಡ್ಡಿದರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಉಳಿತಾಯ ಠೇವಣಿಯು ವಾರ್ಷಿಕ ಶೇ.4 ರಷ್ಟು ಬಡ್ಡಿದರವನ್ನು ಉಳಿಸಿಕೊಂಡಿದೆ.

ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಲು ಸಾಧ್ಯವಿಲ್ಲ ಎನ್ನುವುದು ನಿಮ್ಮ ಅರಿವಿನಲ್ಲಿ ಇರಬೇಕು. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ, 2019 ರ ಅಡಿಯಲ್ಲಿ ಅಪ್ರಾಪ್ತ ಮಗುವಿನ ಪಿಪಿಎಫ್ ಖಾತೆಗೆ ಯಾವುದೇ ಪೋಷಕರು ಅಥವಾ ಪೋಷಕರಿಬ್ಬರು ಕೊಡುಗೆ ನೀಡುವುದಕ್ಕೆ ಯಾವುದೇ ನಿರ್ಭಂದ ಹೇರಿಲ್ಲ. ಇದನ್ನೂ ಓದಿ: Smart Tv: ಕೇವಲ 10 ಸಾವಿರ ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ ಖರೀದಿ ಮಾಡುವುದು ಹೇಗೆ ಗೊತ್ತೆ??

ಈ ಯೋಜನೆಯು ತಿಳಿಸುವಂತೆ ಒಬ್ಬ ವ್ಯಕ್ತಿಯು ಮತ್ತು ಅಪ್ರಾಪ್ತ ವಯಸ್ಕರ ಖಾತೆಗೆ ೧.೫೦ ಲಕ್ಷ ರೂ.ಗಿಂತ ಹೆಚ್ಚಿನ ಹಣ ಠೇವಣಿ ಮಾಡುವಂತಿಲ್ಲ. ಆದ್ದರಿಂದ ನಿಮ್ಮ ಸ್ವಂತ ಖಾತೆಗೆ ಹಣ ಜಮಾ ಮಾಡುವಾಗ ನಿಮ್ಮ ಮಗಳ ಪಿಪಿಎಫ್ ಖಾತೆಗೆ ಸಹ ಕೊಡುಗೆ ನೀಡಬಹುದು. ಅಪ್ರಾಪ್ತರ ಪರವಾಗಿ ನಿವಾಸಿ ಭಾರತೀಯ ವ್ಯಕ್ತಿಗಳು ಮತ್ತು ಪಿಪಿಎಫ್ ಖಾತೆ ತೆರೆಯಬಹುದು.

Comments are closed.