Job Tips: ಪದೇ ಪದೇ ಕೆಲಸ ಬದಲಾಯಿಸುವುದರಲ್ಲಿಯೂ ಇದೆ ಬೆನಿಫೀಟ್; ಏನು ಗೊತ್ತಾ?

Job Tips: ಕೆಲವರಿಗೆ ಒಂದೇ ಕಂಪನಿ (Company) ಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡುವುದು ಬೋರ್ ಎನಿಸುತ್ತದೆ. ಆದರೆ ಕೆಲವರಿಗೆ ಕಂಫರ್ಟ್ ಜೋನ್ (Comfort Zone) ಇರುವುದರಿಂದ ಕಂಪನಿ ಬದಲಾವಣೆ ಮಾಡಲು ಇಚ್ಚಿಸುವುದಿಲ್ಲ. ಪದೇ ಪದೇ ಉದ್ಯೋಗ (Job)ದಲ್ಲಿ ಬದಲಾವಣೆ ಮಾಡುವುದರಿಂದ ಸಿಕ್ಕಾಪಟ್ಟೆ ಲಾಭಗಳಿವೆ. ಆ ಲಾಭಗಳ ಕುರಿತು ತಿಳಿದುಕೊಳ್ಳೊಣ. ಇದನ್ನೂ ಓದಿ:Jio Offers:ಹೊಸ ವರ್ಷಕ್ಕಾಗಿಯೇ ಭರ್ಜರಿ ಆಫರ್ ಬಿಡುಗಡೆಗೊಳಿಸಿದ ಜಿಯೋ: ಎಷ್ಟು ಕಡಿಮೆಗೆ ಏನೆಲ್ಲಾ ಫ್ರೀ ಸಿಗುತ್ತದೆ ಗೊತ್ತೇ??

ನೀವು ಆಗಾಗ ಉದ್ಯೋಗದಲ್ಲಿ ಬದಲಾವಣೆ ಮಾಡುವುದರಿಂದ ನಿಮಗೆ ಹೆಚ್ಚಿನ ಅವಕಾಶ (Opportunity) ಗಳು ಸಿಗುತ್ತದೆ. ಅಲ್ಲದೆ ಹೊಸ ಹೊಸ ಚಾಲೆಂಜ್ (Challenge) ಗಳನ್ನು ಎದುರಿಸಲು ಸಾಧ್ಯವಿದೆ. ಪ್ರಸ್ತುತ ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ನಿಮಗೆ ಕೊಡುತ್ತಿರುವ ಸಂಬಳ (Salary) ಸಮಾಧಾನ ಇರದಿದ್ದಾಗ ಕೆಲಸ ಬದಲಾವಣೆ ಮಾಡುವುದು ಅನಿವಾರ್ಯವಾಗುತ್ತದೆ. ಈ ಸಮಯದಲ್ಲಿ ನೀವು ಕೆಲಸದಲ್ಲಿ ಬದಲಾವಣೆ ಮಾಡುವುದರಿಂದ ನಿಮಗೆ ಹೆಚ್ಚಿನ ಸಂಬಳ ಸಿಗುತ್ತದೆ. ನೀವು ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು. ಇದರಿಂದ ನಿಮ್ಮ ಜೀವನದ ಮಟ್ಟವು ಹೆಚ್ಚಲಿದೆ.

Should You Be Looking To Make a Career Change in 2022? | GOBankingRates

ಪ್ರಸ್ತುತ ಉದ್ಯೋಗದಲ್ಲಿ ನೀವು ಬಹಳ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಕೆಲಸ ಹಾಗೂ ಜೀವನವನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವಾದಲ್ಲಿ ನೀವು ಹೊಸ ಉದ್ಯೋಗವನ್ನು ಹುಡುಕಿಕೊಳ್ಳುವುದು ಒಳಿತು. ನೀವು ಉದ್ಯೋಗ ಹಾಗೂ ಕಂಪನಿ ಬದಲಾವಣೆ ಮಾಡುವುದರಿಂದ ನಿಮಗೆ ಹೊಸ ಹೊಸ ಕೌಶಲಗಳನ್ನು ಕಲಿಯಲು ಅವಕಾಶ ಸಿಗುತ್ತದೆ. ಹೊಸ ಕ್ಷೇತ್ರದಲ್ಲಿ ಮೌಲ್ಯಯುತ ಕಾರ್ಯಾನುಭವ ನಿಮಗೆ ಸಿಗುತ್ತದೆ. ಇದನ್ನೂ ಓದಿ:Smart Phone Offer: ಕ್ರಿಸ್ ಮಸ್ ಗೆ ಹೊಸ ಫೋನ್ ಗಿಪ್ಟ್ ಕೊಡ್ಬೇಕಾ? ಇಲ್ಲಿದೆ ನೋಡಿ ಬೆಸ್ಟ್ ಆಫರ್, 17,000ರೂ. ಗಳ ಮೊಬೈಲ್ ಕೊಳ್ಳಿ ಕೇವಲ 999ರೂ. ಗಳಿಗೆ!

ಹಲವು ಜನ ಉದ್ಯೋಗಿಗಳು ಹೊಸ ಹೊಸ ಚಾಲೆಂಜ್ಗಳನ್ನು ಎದುರಿಸುವ ಸಲುವಾಗಿ ಉದ್ಯೋಗ ಬದಲಾವಣೆ ಮಾಡುತ್ತಾರೆ. ಒಂದೇ ಕಡೆ ಸಿಕ್ಕಿಹಾಕಿಕೊಂಡುಬಿಟ್ಟಿದ್ದೇನೆ ಎಂದು ಅನಿಸುವವರಿಗೂ ಹೊಸ ಜಾಬ್ ಹುಡುಕಿಕೊಳ್ಳುವುದು ಒಳ್ಳೆಯ ಆಯ್ಕೆ ಆಗಿರುತ್ತದೆ.

ಆದರೆ ಉದ್ಯೋಗದಲ್ಲಿ ಬದಲಾವಣೆ ಮಾಡುವ ವೇಳೆ ಬಹಳ ಜಾಗರೂಕರಾಗಿರಬೇಕು. ಬೇರೆ ಕಡೆ ಸಿಗುವ ವೇತನ, ಸೌಲಭ್ಯಗಳು ನಿಮಗೆ ಸಮಾಧಾನ ನೀಡುತ್ತದೆಯೇ? ನಿಮಗೆ ಒಳ್ಳೆಯ ಜೀವನ ನಡೆಸಲು ಸಾಧ್ಯವಾಗುತ್ತದೆಯೇ ಎನ್ನುವುದನ್ನು ಪರಿಗಣಿಸಬೇಕು. ಒಂದು ವೇಳೆ ಹಲವು ವಿಚಾರಗಳಲ್ಲಿ ನಿಮಗೆ ಸಂಶಯ ಇದ್ದರೆ ಉದ್ಯೋಗದಾತರನ್ನು ಸಂಪರ್ಕಿಸಿ ಅವರಿಂದ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು.

Comments are closed.