Mukesh Ambani: ಐಟಿ ಕಂಪನಿ ಬಿಟ್ಟು ಅಂಬಾನಿ ಮನೆ ಡ್ರೈವಿಂಗ್ ಕೆಲಸಕ್ಕೆ ಓಡಿದ ಜನರು; ಯಾಕೆ ಗೊತ್ತೇ? ಅಂಬಾನಿ ಡ್ರೈವರ್ ಗೆ ಸಿಗುವ ಸಂಬಳ ಕೇಳಿದ್ರೆ ನೀವು ಶಾಕ್ ಆಗೊದು ಖಂಡಿತ!

Mukesh Ambani: ಭಾರತದಲ್ಲಿ ಅತೀ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ ಕುಟುಂಬವೂ ಸ್ರುತ್ತದೆ. ಜಗತ್ತಿನಲ್ಲಿಯೇ ಅತ್ಯಂತ ಐಷಾರಾಮಿ ಬಂಗಲೆ ಹೊಂದಿರುವ ಎರಡನೇ ವ್ಯಕ್ತಿ ಮುಖೇಶ್ ಅಂಬಾನಿ ಅಂದ್ರೆ ನೀವು ನಂಬಲೇಬೇಕು. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರು ತಮ್ಮ ವ್ಯವಹಾರಕ್ಕೆ, ಉದ್ದಿಮೆಗೆ ಹೆಚ್ಚು ಮಹತ್ವಕೊಡುತ್ತಾರೆ. ಗಮನಕೊಡುತ್ತಾರೆ. ಹಾಗಂತ ತಮ್ಮ ಕೈಕೆಳಗೆ ಕೆಲಸ ಮಾಡುವವರನ್ನೂ ನಿರ್ಲಕ್ಷಿಸುವುದಿಲ್ಲ. ಕೇವಲ ರಿಲಯನ್ಸ್ ನಲ್ಲಿ ಕೆಲಸ ಮಾಡುವವರು ಮಾತ್ರವಲ್ಲ, ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಉತ್ತಮ ವೇತನ ನೀಡುತ್ತಾರೆ.

ವಿಶ್ವದಲ್ಲಿ ಎರಡನೇಯ ಅತಿ ದುಬಾರಿ ಮನೆ ಹೊಂದಿರುವ ಕುಟುಂಬ ಅಂದ್ರೆ ಅದು ಅಂಬಾನಿ ಕುಟುಂಬ. ಬಂಕಿಂಗ್ ಹ್ಯಾಮ್ ಅರಮನೆ ಮೊದಲನೇ ಸ್ಥಾನದಲ್ಲಿದ್ರೆ ಅಂಬಾನಿಯ ಆಂಟಿಲಿಯಾ ಬಂಗಲೆ ಎರಡನೆಯ ಐಷಾರಾಮಿ ಹಾಗೂ ದುಬಾರಿ ಬಂಗಲೆ ಎನಿಸಿದೆ. ಅಂದಹಾಗೆ ಅಂಬಾನಿ ನಿವಾಸದಲ್ಲಿ ಬರೋಬ್ಬರಿ 600ಕ್ಕೂ ಹೆಚ್ಚಿನ ಸಿಬ್ಬಂದಿಗಳು ಬೇರೆ ಬೇರೆ ಕೆಲಸ ಮಾಡುತ್ತಾರೆ. ಅವರಿಗೆ ಅಂಬಾನಿ ನೀಡುವ ಸಂಬಳವೂ ಉತ್ತಮವಾಗಿದೆ ಎಂದು ಇತ್ತೀಚಿಗೆ ವರದಿಯಾಗಿದೆ.

ಅದರಲ್ಲೂ ಅಂಬಾನಿ ತಮ್ಮ ಕಾರು ಚಾಲಕರಿಗೆ ಎಷ್ಟು ಸಂಬಳ ಸಿಗುತ್ತಿದೆ ಎನ್ನುವ ವಿಷಯ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ. ಯಾವ ಐಟಿ ಕಂಪನಿಯ ಉನ್ನತ ಹುದ್ದೆಯಲ್ಲಿ ಇರುವ ನೌಕರರಿಗೂ ಸಿಗದ ಸಂಬಳ ಅಂಬಾನಿ ಕಾರ್ ಡ್ರೈವರ್ ಗೆ ಸಿಗುತ್ತದೆ. ಕೆಲವು ಖಾಸಗಿ ಕಂಪನಿಗಳು ಗುತ್ತಿಗೆ ಆಧಾರದ ಮೇಲೆ ಅಂಬಾನಿ ಕುಟುಂಬಕ್ಕೆ ಚಾಲಕರನ್ನು ನೇಮಕ ಮಾಡಿ ಕೊಡುತ್ತಾರೆ.

ಇನ್ನು ಅಂಬಾನಿ ಕುಟುಂಬಕ್ಕೆ ಚಾಲಕರಾಗುವುದು ಅಷ್ಟು ಸುಲಭವಲ್ಲ. ಅವರಿಗೆ ಡ್ರೈವಿಂಗ್ ನಲ್ಲಿ ಅನುಭವ ಇರಬೇಕು. ವಿಶೇಷ ತರಬೇತಿ ನೀಡಲಾಗುತ್ತದೆ. ಅಲ್ಲದೇ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಬಳಸುವ ಎಲ್ಲಾ ಐಷಾರಾಮಿ ಕಾರ್ ಗಳನ್ನು ನಿರ್ವಹಿಸಲು ಅವರಿಗೆ ಗೊತ್ತಿರಬೇಕು.  ಇನ್ನು ಕಾರ್ ಚಾಲಕರಿಗೆ ನೀಡುವ ಸಂಬಳದ ಬಗ್ಗೆ ಮಾತನಾಡುವುದಾದರೆ, ಮುಕೇಶ್ ಅಂಬಾನಿ ತಮ್ಮ ಚಾಲಕನಿಗೆ ಬರೋಬ್ಬರಿ ಎರಡು ಲಕ್ಷ ರೂಪಾಯಿ ವೇತನ ನೀಡುತ್ತಾರಂತೆ. ಇತ್ತೀಚಿಗೆ ಈ ಸುದ್ದಿ ವರದಿಯಾಗಿದೆ. ಯಾವ ಐಟಿ ಬಿಟಿ ಕಂಪನಿಯವರಿಗೂ ಸಿಗದಷ್ಟು ಸಂಬಳ ಮುಕೇಶ್ ಅಂಬಾನಿ ಅವರ ಕಾರ್ ಡ್ರೈವರ್ ಗೆ ಸಿಗುತ್ತಿರುವುದು ವಿಶೇಷ. ಯಾವ ಕೆಲಸವೂ ದೊಡ್ದದಲ್ಲ, ಯಾವ ಕೆಲಸವೂ ಚಿಕ್ಕದಲ್ಲ ಅನ್ನುವುದಕ್ಕೆ ಇದೇ ಸಾಕ್ಷಿ.

Comments are closed.