chetan visa cancelled:ವೀಸಾ ರದ್ದಾದ ಮೇಲೆ ಉಲ್ಟಾ ಹೊಡೆದ ಚೇತನ್: ಇದೀಗ ಕೇಂದ್ರ ಸರ್ಕಾರದ ಬಗ್ಗೆ ಹೇಳಿದ್ದೆ ಬೇರೆ. ಏನಾಗಿದೆ ಗೊತ್ತೇ??

chetan visa cancelled:ನಟ ಚೇತನ್ ಅಹಿಂಸಾ ಅವರು ಬಹಳಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಚೇತನ್ ಅವರು ಹಲವು ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ, ಸೋಷಿಯಲ್ ಸರ್ವಿಸ್ ಗಳಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುವ ಚೇತನ್ (Chetan) ಅವರ ವಿಚಾರದಲ್ಲಿ ಈಗ ಅವರ ವೀಸಾ ರದ್ದು ಮಾಡಿದ್ದು, ಅಮೆರಿಕಾಗೆ ವಾಪಸ್ ಹೋಗಬೇಕು ಎಂದು ನೋಟೀಸ್ ಬಂದಿದೆ. ಇದನ್ನೂ ಓದಿ: Bollywood: 40 ವರ್ಷಕ್ಕಿಂತ ವಯಸ್ಸು ಜಾಸ್ತಿ ಆಗಿದ್ರು ಕೂಡ, ಈ ನಟಿಮಣಿಯರು ಇನ್ನು ಮದುವೆಯಾಗಿಲ್ಲ. ಒಬ್ಬೊಬ್ಬರು ಹೇಗಿದ್ದಾರೆ ಗೊತ್ತೇ??

ಆದರೆ ನಟ ಚೇತನ್ ಅಹಿಂಸಾ ಅವರು ಅದಕ್ಕೆ ವಿರುದ್ಧವಾಗಿ ನಿಂತಿದ್ದು, ತಾವು ಅಮೆರಿಕಾ (America)ಗೆ ಹೋಗುವುದಿಲ್ಲ, ಭಾರತದಲ್ಲೇ ಇರುವುದಾಗಿ ಹೇಳಿದ್ದಾರೆ. ಸುದ್ದಿಗೋಷ್ಠಿಯೊಂದನ್ನು ಕರೆದು, ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ ನಟ ಚೇತನ್. ಚೇತನ್ ಅವರು ಹೇಳಿರುವುದು ಏನು ಎಂದು ನೋಡುವುದಾದರೆ.. “ನಾನು ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲವೂ ಅಮೆರಿಕಾದಲ್ಲೇ, ಆದರೆ ಕೆಲಸ ಮಾಡುವುದಕ್ಕಾಗಿ ನಾನು ಭಾರತಕ್ಕೆ ಬಂದೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೀನಿ, ಹೋರಾಟ ಮಾಡಿ 528 ಆದಿವಾಸಿಗಳಿಗೆ ಮನೆ ಕಟ್ಟಿಸಿಕೊಟ್ಟಿದ್ದೀನಿ.

ನನ್ನ ಸಿದ್ಧಾಂತಗಳು, ಅಂಬೇಡ್ಕರ್ ಅವರ ತತ್ವದ ಬಗ್ಗೆ ನನ್ನ ವಾದ, ಪೆರಿಯಾರ್ ವಾದ ಇದ್ಯಾವುದು ಕೂಡ ಸರ್ಕಾರಕ್ಕೆ ಇಷ್ಟವಾದ ಹಾಗೆ ಕಾಣುತ್ತಿಲ್ಲ..ಅದೇ ಕಾರಣಕ್ಕೆ ಈ ಥರ ಮಾಡಿದ್ದಾರೆ. ಬ್ರಾಹ್ಮಣ್ಯ ಲಾಬಿ ಎಂದು ನಾನು ಹೇಳಿದ್ದಕ್ಕೆ ನನ್ನ ಮೇಲೆ ಕೇಸ್ ಹಾಕಿದ್ರು, ಒಂದೂವರೆ ವರ್ಷಗಳ ಹಿಂದೆ ನನ್ನ ಗನ್ ಮ್ಯಾನ್ ಅನ್ನು ತೆಗೆದು ಹಾಕಿದ್ರು. ಇರುವ ನಿಜವನ್ನ ಟ್ವೀಟ್ ಮಾಡಿದ್ದಕ್ಕೆ, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದೀನಿ ಅಂತ ನನ್ನನ್ನ 3 ದಿನ ಜೈಲಿಗೆ ಕಳಿಸಿದ್ರು. ನನಗೆ ಸಾಗರೋತ್ತರ ವೀಸಾ ಕೊಟ್ಟಿದ್ದಾರೆ, ಅದರಲ್ಲಿ ನಾನು ವೋಟ್ ಹಾಕುವ ಹಾಗಿಲ್ಲ, ಎಲೆಕ್ಷನ್ ಗೆ ನಿಲ್ಲುವ ಹಾಗಿಲ್ಲ, ಗವರ್ನಮೆಂಟ್ ಕೆಲಸ ಮಾಡುವ ಹಾಗಿಲ್ಲ ಇದಿಷ್ಟು ಬಿಟ್ಟು ಬೇರೆ ಎಲ್ಲಾ ಹಕ್ಕುಗಳು ನನಗೆ ಇದೆ. 10 ತಿಂಗಳ ಮೊದಲೇ ಕ್ರಿಮಿನಲ್ ಕೆಲಸ ಮಾಡುತ್ತಿದ್ದೀರಿ ನಿಮ್ಮ ವೀಸಾ ರದ್ದಾಗಬಹುದು ಎಂದು ನೋಟಿಸ್ ಕಳಿಸಿದ್ದರು. ಆಗ ಗೃಹ ಇಲಾಖೆಗೆ ತೆರಳಿ ಅಗತ್ಯವಿರುವ ದಾಖಲೆಗಳನ್ನು ಕೊಟ್ಟು ಬಂದಿದ್ದೆ. ಇದನ್ನೂ ಓದಿ: Akshaya Tritiya:ಚಿನ್ನದಂತ ಸಂಸಾರಕ್ಕೆ ಚಿನ್ನವೆ ಬೇಕಿಲ್ಲ, ಇದೇ ಬರುವ ಅಕ್ಷಯ ತೃತೀಯ ದಿನದಂದು ಇದೊಂದು ಕೆಲಸ ಮಾಡಿದರೆ ಸಾಕು ಗಂಡ ಹೆಂಡತಿ ಹೇಗೆ ಇರ್ತಾರೆ ಗೊತ್ತಾ?

ನಾನು ಯಾವ ದೇಶದ್ರೋಹಿ ಕೆಲಸ ಮಾಡಿದ್ದೀನಿ? ಇದೆಲ್ಲಾ ಬೇಕೆಂದೇ ಮಾಡುತ್ತಿರುವುದು..ನಾನು ಭಾರತದಲ್ಲಿ ಇರುವುದು ಬೇಡ ಎಂದು ನನ್ನ ವೀಸಾ ರದ್ದು ಮಾಡಲಾಗಿದೆ, ನನ್ನ ವಾಕ್ ಸ್ವಾತಂತ್ರ್ಯ ಕಿತ್ತುಕೊಂಡು ಜೈಲಿಗೆ ಹಾಕಿದರು, ಈಗ ನನ್ನ ವೀಸಾ ರದ್ದು ಮಾಡಿದ್ದಾರೆ.. 15 ದಿನ ಸಮಯ ಕೊಟ್ಟಿದ್ದಾರೆ, ನನ್ನ ವಕೀಲರ ಜೊತೆ ಮಾತನಾಡಿ, ಅಷ್ಟರ ಒಳಗೆ ಸ್ಟೇ ತರುತ್ತೇನೆ. ನನ್ನ ತಂದೆ ತಾಯಿ ಇದೇ ದೇಶದವರು, ನಾನು 18 ವರ್ಷದಿಂದ ಇಲ್ಲೇ ಇದ್ದೇನೆ, ನನ್ನ ಹತ್ತಿರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಎಲ್ಲವೂ ಇದೆ. ನಾನು ಈ ದೇಶಕ್ಕೆ ಟ್ಯಾಕ್ಸ್ ಪಾವತಿ ಮಾಡುತ್ತಿದ್ದೇನೆ. ಈಗ ನನ್ನ ಓಸಿಐ ರದ್ದು ಮಾಡಿದ್ದಾರೆ. ಇದಕ್ಕೆ ಅರ್ಥವಿಲ್ಲ, ನಾನು ಭಾರತೀಯ, ಅಮೆರಿಕಾಗೆ ನಾನು ಹೋಗುವುದಿಲ್ಲ..” ಎಂದಿದ್ದಾರೆ ನಟ ಚೇತನ್. ಇದನ್ನೂ ಓದಿ: 10rs currency sell: ನಿಮ್ಮ ಬಳಿ ಹತ್ತು ರೂಪಾಯಿಗಳ ಹಳೆಯ ನೋಟು ಇದ್ಯಾ? ಮನೆಯಲ್ಲಿಯೇ ಕುಳಿತು ಸೇಲ್ ಮಾಡಿ 25,000ರೂ. ಗಳಿಸಬಹುದು ಹೇಗೆ ಗೊತ್ತೇ?

Comments are closed.