Election 2023: ಇವಿಎಂ ಗಳನ್ನೇ ಮರೆತು ಮನೆಗೆ ಹೋದ ಅಧಿಕಾರಿಗಳು- ಸಿಕ್ಕಿದ್ದೇ ಚಾನ್ಸ್ ಎಂದು ಸ್ಥಳೀಯರು ಏನು ಮಾಡಿದ್ದಾರೆ ಗೊತ್ತೇ??

Election 2023: ನಿನ್ನೆಯಷ್ಟೇ ನಮ್ಮ ರಾಜ್ಯದಲ್ಲಿ ವಿಧಾನ ಸಭಾ ಎಲೆಕ್ಷನ್ಸ್ ನಡೆದಿದೆ. ಇದು ನಮಗೆ ಇಷ್ಟವಾದ ನಾಯಕನನ್ನು ಆರಿಸುವ ಅವಕಾಶ ನಮ್ಮದಾಗಿತ್ತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಚುನಾವಣೆಯಲ್ಲಿ ಪಾಲ್ಗೊಂಡು ಮತ ಹಾಕಿದ್ದಾರೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳ (Celebrities) ವರೆಗು ಎಲ್ಲರೂ ಮತದಾನ ಮಾಡಿರುವುದು ವಿಶೇಷವಾಗಿದೆ.. ಇದನ್ನೂ ಓದಿ: Dimple Hayathi: ನಿಮಗೆ ಗುಡಿ ಕಟ್ಟುತ್ತೇನೆ ಎಂದ ಅಭಿಮಾನಿಗೆ, ಖ್ಯಾತ ನಟಿ ಹೇಳಿದ್ದೇನು ಗೊತ್ತೇ?? ಯಪ್ಪಾ ಇಂಗು ಇರ್ತಾರ. ಅಭಿಮಾನಿಗೆ ಶಾಕ್.

ಎಲೆಕ್ಷನ್ (Election) ಸಮಯದಲ್ಲಿ ಕೆಲವು ಶಾಕ್ ಎನ್ನಿಸುವಂಥ ಘಟನೆಗಳು ಸಹ ನಡೆಯುತ್ತದೆ. ಅಂಥದ್ದೊಂದು ಘಟನೆ ಇತ್ತೀಚೆಗೆ ಚಿಕ್ಕಮಗಳೂರಿನ ಪೆನ್ಶನ್ ನಗರದಲ್ಲಿ ನಡೆದಿದೆ. ಈ ಪ್ರದೇಶದಲ್ಲಿ ನಿನ್ನೆ ಸಂಜೆ ಮತದಾನ ಪ್ರಕ್ರಿಯೆ ಪೂರ್ತಿಯಾಗಿ ಮುಗಿದ ನಂತರ, ಇವಿಎಂ (EVM) ವಿವಿ ಪ್ಯಾಟ್ ಮಷಿನ್ ಗಳನ್ನು ಮತದಾನ ಅಧಿಕಾರಿಗಳು ಅಲ್ಲಿಯೇ ಬಿಟ್ಟು ಹೊರಟು ಹೋಗಿದ್ದಾರೆ. ಇದನ್ನೂ ಓದಿ: Health Tips: ಕೀಲು ನೋವುಗಳಿಂದ ನೀವು ಕೂಡ ಕಷ್ಟ ಪಡುತ್ತಿದ್ದರೆ ಈ ಚಿಕ್ಕ ಕೆಲಸ ಮಾಡಿ ಸಾಕು. ನೋವು ಹತ್ತಿರಕ್ಕೆ ಕೂಡ ಬರುವುದಿಲ್ಲ. ಏನು ಮಾಡಬೇಕು ಗೊತ್ತೇ?

ಪೆನ್ಶನ್ ಮೊಹಲ್ಲದ, 169ರ ಮತಗಟ್ಟೆ ಸಂಖ್ಯೆಯಲ್ಲಿ ಈ ಘಟನೆ ನಡೆದಿದೆ. ಎಲೆಕ್ಷನ್ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿ ಹೀಗೆ ಮಾಡಿದ್ದಾರೆ. ಕಾಲೇಜೊಂದರಲ್ಲಿ ಈ ಮತದಾನ ನಡೆದಿತ್ತು. ಅದೇ ಕಾಲೇಜಿನಲ್ಲಿ EVM ಯಂತ್ರಗಳನ್ನು ಬಿಟ್ಟು ಹೊರಟು ಹೋಗಿದ್ದಾರೆ. ಇದನ್ನು ಬೇರೆ ಬೇರೆ ಪಕ್ಷಗಳ ಏಜೆನ್ಟ್ ಗಳ ಕಣ್ಣಿಗೆ ಬಿದ್ದಿದೆ. ಅವರು ಅಧಿಕಾರಿಗಳಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ.

ಅಕ್ಕಪಕ್ಕದ ಜನರು ಈ ವಿಷಯದಿಂದ ಆಕ್ರೋಶಗೊಂಡಿದ್ದು, ಮತದಾನದ ಯಂತ್ರಗಳನ್ನೇ ಬಿಟ್ಟು ಹೋಗಿದ್ದೀರಾ ಎಂದು ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳನ್ನು ಮನಸ್ಸಿಗೆ ಬಂದ ಹಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಪೊಲೀಸರ ರಕ್ಷಣೆಯ ಜೊತೆಗೆ ಮತದಾನದ ಯಂತ್ರಗಳನ್ನು ಕಾಲೇಜಿನಿಂದ ತೆಗೆದುಕೊಂಡು ಹೋಗಲಾಗಿದೆ. ಪೆನ್ಶನ್ ಮೋಹಲ್ಲಾದಲ್ಲಿ 700 ಮತ ಇದ್ದವು, ಮತಗಳು ಎಣಿಕೆ ಆಗುವ ದಿನ ಈ ಸಂಖ್ಯೆ ಸರಿಯಾಗಿರಬೇಕು ಎಂದು ಜನರು ಹೇಳಿದ್ದಾರೆ. ಇದನ್ನೂ ಓದಿ: Business ideas: ನಿಮ್ಮ ಮನೆಯಲ್ಲಿ ಹೆಂಡತಿ ಖಾಲಿ ಕುಳಿತಿದ್ದರೇ ಈ ಕೆಲಸ ಮಾಡಿ. ಲಕ್ಷ ಲಕ್ಷ ಆದಾಯ ಬರುವಂತೆ ಮಾಡಬಹುದು. ಹೇಗೆ ಗೊತ್ತೇ??

Comments are closed.