Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Post Office: ಹಣ ಉಳಿತಾಯ ಮಾಡಬೇಕು ಎನ್ನುವ ಆಸೆ ಮತ್ತು ಆಸಕ್ತಿ ಎರಡು ಎಲ್ಲರಲ್ಲೂ ಇರುತ್ತದೆ. ನಿಮ್ಮ ಹಣಕ್ಕೆ ಯಾವುದೇ ತೊಂದರೆ ಆಗದೆ, ಸುರಕ್ಷಿತವಾಗಿ ಹೂಡಿಕೆ ಮಾಡುವುದಕ್ಕೆ ಪೋಸ್ಟ್ ಆಫೀಸ್ ಒಂದು ಉತ್ತಮವಾದ ಆಯ್ಕೆಯಾಗಿದೆ. ಇದರಲ್ಲಿ MIS (Monthly Investment Scheme) ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಈ ಯೋಜನೆಯಲ್ಲಿ ನೀವು ಒಂದು ಸಾರಿ ಇನ್ವೆಸ್ಟ್ ಮಾಡಿ, ಪ್ರತಿ ತಿಂಗಳು ಖಚಿತವಾದ ಆದಾಯ ಪಡೆಯಬಹುದು. ಈ ಯೋಜನೆ ಮೇಲೆ ಮಾರ್ಕೆಟ್ ನಲ್ಲಿ ಉಂಟಾಗುವ ಯಾವುದೇ ಏರಿಳಿತಗಳು ಪರಿಣಾಮ ಬೀರುವುದಿಲ್ಲ. ಈ ಯೋಜನೆಯಲ್ಲಿ ನೀವು ಒಂದು ಸಾರಿ ಮಾತ್ರ ಹೂಡಿಕೆ ಮಾಡಬೇಕು. ಇದನ್ನೂ ಓದಿ:

ಯೋಜನೆ ಮುಗಿಯುವ ಸಮಯ 5 ವರ್ಷ, ಇದರ ವರ್ಷಗಳ ನಂತರ ನೀವು ಮಾಸಿಕ ಆದಾಯ ಪಡೆಯಲು ಶುರು ಮಾಡುತ್ತೀರಿ. MIS ಕಾಲ್ಕ್ಯುಲೇಟರ್ ನ ಪ್ರಕಾರ, ಈ ಯೋಜನೆಯಲ್ಲಿ ನೀವು 4.5ಲಕ್ಷ ಹೂಡಿಕೆ ಮಾಡಿ, ಅಕೌಂಟ್ ತೆರೆದರೆ, ಮೆಚ್ಯುರಿಟಿ ನಂತರ ಮುಂದಿನ ಐದು ವರ್ಷಗಳು ನಿಮಗೆ ವರ್ಷಕ್ಕೆ ₹27,900 ರೂಪಾಯಿ ಆದಾಯ ಬರುತ್ತದೆ. ಅಂದರೆ ತಿಂಗಳಿಗೆ ₹2,475 ರೂಪಾಯಿ ಆದಾಯ ಬರುತ್ತದೆ. ಈ ಯೋಜನೆಗೆ ನಿಮಗೆ 6.6% ಬಡ್ಡಿ ಸಿಗುತ್ತದೆ. ಇದನ್ನೂ ಓದಿ: The Kerala story: ದೇಶವೇ ಮೆಚ್ಚಿರುವ ಕೇರಳ ಸ್ಟೋರಿ ಸಿನೆಮಾಗೆ ಆಧಾ ಶರ್ಮ ರವರನ್ನು ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇದು ನಿಜವಾದ ಸಿನಿಮಾ ಪ್ರೀತಿ ಅಂದ್ರೆ.

ಈ ಯೋಜನೆಗೆ ಮಿನಿಮಮ್ ಹೂಡಿಕೆ ಮಾಡಬೇಕಾದ ಹಣ ₹1000 ರೂಪಾಯಿ. ಸಿಂಗಲ್ ಖಾತೆಯಾದರೆ 4.5ಲಕ್ಷ, ಜಾಯಿಂಟ್ ಅಕೌಂಟ್ ನಲ್ಲಿ 9 ಲಕ್ಷ ರೂಪಾಯಿವರೆಗು ಹೂಡಿಕೆ ಮಾಡಬಹುದು. ಪ್ರತಿತಿಂಗಳು ನಿಮಗೆ ಬಡ್ಡಿ ಸಿಗುತ್ತದೆ. ಈ ಯೋಜನೆ ಮುಗಿಯುವ ಸಮಯ 5 ವರ್ಷಗಳು, ಈ ಸಮಯ ಮುಗಿಯುವುದಕ್ಕಿಂತ ಮೊದಲೇ ಬೇಕಿದ್ದರೆ ನಿಮ್ಮ ಅಕೌಂಟ್ ಕ್ಲೋಸ್ ಮಾಡಬಹುದು. ಆದರೆ ಖಾತೆ ಶುರು ಮಾಡಿ, ಒಂದು ವರ್ಷ ಪೂರ್ತಿಯಾದ ನಂತರ ನೀವು ಹಣವನ್ನು ವಾಪಸ್ ಪಡೆಯಬಹುದು. ನಿಮ್ಮ ಹಣ ಇಲ್ಲಿ ಸುರಕ್ಷಿತವಾಗಿ ಇರುತ್ತದೆ.

ಒಂದು ವೇಳೆ ನೀವು ಖಾತೆ ಶುರು ಮಾಡಿ, 1 ರಿಂದ 3 ವರ್ಷಗಳ ಒಳಗೆ ಹಣವನ್ನು ಹಿಂದಕ್ಕೆ ಪಡೆಯುವುದಾದರೆ, 2% ಬಿಟ್ಟು ಇನ್ನುಳಿದ ಹಣವನ್ನು ವಾಪಸ್ ಕೊಡಲಾಗುತ್ತದೆ. 3 ವರ್ಶಗಳ ನಂತರ ಕ್ಲೋಸ್ ಮಾಡುವುದಾದರೆ, 1% ಹಣವನ್ನು ಬಿಟ್ಟು ಇನ್ನುಳಿದ ಹಣವನ್ನು ವಾಪಸ್ ಕೊಡಲಾಗುತ್ತದೆ. ಈ ಅಕೌಂಟ್ ಅನ್ನು ಒಂದು ಪೋಸ್ಟ್ ಆಫೀಸ್ ಇಂದ ಮತ್ತೊಂದು ಪೋಸ್ಟ್ ಆಫೀಸ್ ಗೆ ಟ್ರಾನ್ಸ್ಫರ್ ಮಾಡಬಹುದು. ಅಥವಾ 5 ವರ್ಷಗಳ ನಂತರ ಇನ್ನು 5 ವರ್ಷ ವಿಸ್ತರಣೆ ಮಾಡಬಹುದು. ಇದನ್ನೂ ಓದಿ: Business ideas: ನಿಮ್ಮ ಮನೆಯಲ್ಲಿ ಹೆಂಡತಿ ಖಾಲಿ ಕುಳಿತಿದ್ದರೇ ಈ ಕೆಲಸ ಮಾಡಿ. ಲಕ್ಷ ಲಕ್ಷ ಆದಾಯ ಬರುವಂತೆ ಮಾಡಬಹುದು. ಹೇಗೆ ಗೊತ್ತೇ??

MIS ಯೋಜನೆ ಶುರು ಮಾಡಲು, 2 ಪಾಸ್ ಪೋರ್ಟ್ ಸೈಜ್ ಓಹೋಟೋ, ಐಡಿ ಪ್ರೂಫ್ ಅಥವಾ ಪಾಸ್ ಪೋರ್ಟ್ ಅಥವಾ ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ಇರಬೇಕು. ಹಾಗೆಯೇ ಆಧಾರ್ ಕಾರ್ಡ್ ಅನ್ನು ಅಡ್ರೆಸ್ ಪ್ರೂಫ್ ಆಗಿ, ಅಥವಾ ಯುಟಿಲಿಟಿ ಬಿಲ್ ಕೊಡಬೇಕಾಗುತ್ತದೆ.. ಪೋಸ್ಟ್ ಆಫೀಸ್ ಗೆ ಹೋಗಿ, ಈ ಸ್ಕೀಮ್ ನ ಫಾರ್ಮ್ ಫಿಲ್ ಮಾಡಬೇಕು. ಅಥವಾ ಆನ್ಲೈನ್ ನಲ್ಲೂ ಫಾರ್ಮ್ ಸಿಗುತ್ತದೆ. ಜೊತೆಗೆ ನಾಮಿನಿ ಹೆಸರು ಸಹ ಕೊಡಬೇಕು, MIS ಅಕೌಂಟ್ ಶುರು ಮಾಡುವ ಆರಂಭದಲ್ಲಿ ₹1000 ತೂಫಾಯಿ ಚೆಕ್ ಅಥವಾ ಕ್ಯಾಶ್ ನೀಡಬೇಕು. ಇದನ್ನೂ ಓದಿ: Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

Comments are closed.