Darling Krishna: ನಟ ಧನಂಜಯ್ ಗೆ ನೇರವಾಗಿ ವಾರ್ನಿಂಗ್ ಕೊಟ್ಟ ಕೃಷ್ಣ- ಟ್ವಿಟ್ಟರ್ ಅಲ್ಲಿ ದೋಸ್ತಿಗಳ ಮಾತುಕತೆ ವೈರಲ್.

ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವು ಕಲಾವಿದರು ಲವ್ ಮ್ಯಾರೇಜ್ (Love Marriage) ಮಾಡಿಕೊಂಡಿದ್ದಾರೆ. ಪ್ರೀತಿಸುವ ದಿನಗಳಿಂದ ಮದುವೆ ಆದ ನಂತರ ಕೂಡ ಒಂದೇ ರೀತಿ ಸಂತೋಷವಾಗಿ ಇರುತ್ತಾರೆ. ಅಂಥ ಜೋಡಿಗಳಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಮಿಲನಾ ನಾಗರಾಜ್ (Milana Nagaraj) ಜೋಡಿ ಕೂಡ ಒಂದು. ಈ ಜೋಡಿ ಪರಿಚಯವಾಗಿದ್ದು ಸಿನಿಮಾ ಶೂಟಿಂಗ್ (Film Shoot) ವೇಳೆ, ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡಿ, ಪ್ರೀತಿಸಿ ಮದುವೆಯಾದರು. ಇದನ್ನೂ ಓದಿ: Ather 450s:ಮತ್ತಷ್ಟು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಅಥೇರ್ 450S ಏನೆಲ್ಲಾ ವಿಶೇಷತೆ ಇರಲಿದೆ ಗೊತ್ತೇ?

ಈಗ ಸಂತೋಷದ ಜೀವನ ನಡೆಸುತ್ತಿದ್ದಾರೆ. ಕೃಷ್ಣ ಹಾಗೂ ಮಿಲನಾ ಇಬ್ಬರು ಜೊತೆಯಾಗಿ ನಟಿಸಿದ ಲವ್ ಮಾಕ್ಟೇಲ್ 1 (Love mocktail) ಮತ್ತು ಲವ್ ಮಾಕ್ಟೇಲ್ 2 ಎರಡು ಸಿನಿಮಾಗಳು ಹಿಟ್ ಆಗಿ ಈ ಜೋಡಿಯನ್ನು ಮತ್ತೆ ಮತ್ತೆ ತೆರೆಮೇಲೆ ಜೊತೆಯಾಗಿ ನೋಡಬೇಕಿ ಎಂದು ಅಭಿಮಾನಿಗಳು ಕೂಡ ಬಯಸುತ್ತಿದ್ದಾರೆ. ಹಾಗಾಗಿಯೇ ಕಳೆದ ವರ್ಷ ಲವ್ ಬರ್ಡ್ಸ್ (Love birds) ಸಿನಿಮಾ ಮೂಲಕ ಈ ಜೋಡಿ ಮತ್ತೆ ತೆರೆಮೇಲೆ ಕಾಣಿಸಿಕೊಂಡಿತ್ತು.

ಈಗ ಕೃಷ್ಣ ಅವರು ಮತ್ತೊಂದು ಹೊಸ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಟ್ರೈಲರ್ (Film Trailers) ಮೊನ್ನೆಯಷ್ಟೇ ಬಿಡುಗಡೆ ಆಗಿದೆ. ಸಿನಿಮಾ ಹೆಸರು ಕೌಸಲ್ಯ ಸುಪ್ರಜಾ ರಾಮ.. ಸಿನಿಮಾದ ಟ್ರೈಲರ್ ನೋಡಿ ಎಲ್ಲರೂ ಸಹ ಬಹಳ ಸಂತೋಷಪಟ್ಟಿದ್ದಾರೆ. ಚಂದನವನದ ಹಲವು ಕಲಾವಿದರು ಟ್ರೈಲರ್ ಗೆ ಮೆಚ್ಚುಗೆ ಸೂಚಿಸಿದ್ದು, ನಟ ಡಾಲಿ ಧನಂಜಯ್ ಅವರು ಸಹ ಟ್ರೈಲರ್ ಬಗ್ಗೆ ಟ್ವೀಟ್ ಮಾಡಿ, ತುಂಬಾ ಚೆನ್ನಾಗಿದೆ ಎಂದು ಹೇಳಿ, ಕೃಷ್ಣ ಅವರನ್ನು, ಹೀರೋಯಿನ್ ಬೃಂದಾ ಅವರನ್ನು ಮತ್ತು ನಿರ್ದೇಶಕರನ್ನು ಟ್ಯಾಗ್ ಮಾಡಿದ್ದಾರೆ. ಇದನ್ನೂ ಓದಿ: Hyundai Exter Price: ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದ Hyundai Exter- ಚಿಲ್ಲರೆ ಬೆಲೆಗೆ ಸಿಗುವ ಈ SUV ಕಾರಿನ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್

ಆ ಟ್ವೀಟ್ ಗೆ ರಿಪ್ಲೈ ಮಾಡಿರುವ ಕೃಷ್ಣ,”ಥ್ಯಾಂಕ್ ಯು ಮಗ, ಮಿಲನ ಟ್ಯಾಗ್ ಮಾಡಿಲ್ಲ. ಬರುತ್ತೆ ನಿನಗೆ ಕಾಲ್” ಎಂದು ಧನಂಜಯ್ ಅವರ ಕಾಲೆಳೆದಿದ್ದಾರೆ..ಅದಕ್ಕೆ ರಿಪ್ಲೈ ಮಾಡಿರುವ ಧನಂಜಯ್ “ಓಹ್ ಲಾಸ್ಟ್ ಅಲ್ಲಿ ಸಖತ್ತಾಗಿ ಎಂಟರ್ ಆದ್ರಲ್ಲ ಅದು ಮಿಲನಾನ.. ನಾನ್ ಯಾರೋ ಹೊಸ ಹುಡುಗಿ ಅನ್ಕೊಂಡೆ.. ಗೊತ್ತೇ ಆಗ್ಲಿಲ್ಲ..” ಎಂದು ರಿಪ್ಲೈ ಮಾಡಿದ್ದಾರೆ. ಅದಕ್ಕೆ ಮಿಲನಾ ಅವರು ಕೂಡ ರಿಪ್ಲೈ ಮಾಡಿದ್ದು.

“ಹೊಸ ಹುಡುಗಿ ಅನ್ಕೊಂಡು.. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ..” ಎಂದು ಮಿಲನಾ ನಾಗರಾಜ್ ಟ್ವೀಟ್ ಮಾಡಿದ್ದಾರೆ. ಈ ಮೂವರ ಟ್ವೀಟ್ ಈಗ ವೈರಲ್ ಆಗಿದ್ದು, ಮಿಲನಾ ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ನೋಡಿದ ಅಭಿಮಾನಿಗಳಿಗೂ ಬಹಳ ಇಷ್ಟವಾಗಿದೆ.

Comments are closed.